Tuesday, January 7, 2025

ಸಮಸ್ಯೆ ಬಗೆಹರಿಸದ ಪೋಲಿಸರು : ಠಾಣೆ ಮುಂದೆಯೆ ಕೂತು ಮದ್ಯ ಸೇವಿಸಿದ ಭೂಪ!

ಬೆಳಗಾವಿ : ವೈಯಕ್ತಿಕ ಸಮಸ್ಯೆ ಬಗೆಹರಿಸುವಂತೆ ಪೋಲಿಸ್​ ಠಾಣೆಗೆ ಬಂದಿದ್ದ ವ್ಯಕ್ತಿಯೊಬ್ಬ ಪೋಲಿಸರಿಂದ ಯಾವುದೇ ಪರಿಹಾರ ಸಿಗದಿದ್ದಕ್ಕೆ ಠಾಣೆಯ ಮುಂದೆಯೆ ಕೂತು ಮದ್ಯ ಸೇವನೆ ಮಾಡಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.

ಬೆಳಗಾವಿ ಜಿಲ್ಲೆಯ ಗೋಕಾಕ್ ನಗರದಲ್ಲಿರುವ ಪೋಲಿಸ್​ ಠಾಣೆಯ ಬಳಿ ಘಟನೆ ನಡೆದಿದ್ದು. ವ್ಯಕ್ತಿಯೊಬ್ಬ ತನ್ನ ವೈಯಕ್ತಿಕ ಸಮಸ್ಯೆಯನ್ನು ಈಡೇರಿಸುವಂತೆ ಗೋಕಾಕ್ ಶಹರ ಪೋಲಿಸ್​ ಠಾಣೆ ಬಂದಿದ್ದನು. ಆದರೆ ಈ ವೇಳೆ ಪೋಲಿಸರು ವ್ಯಕ್ತಿಯ ಸಮಸ್ಯೆಗೆ ಸರಿಯಾಗಿ ಸ್ಪಂದಿಸದ ಹಿನ್ನಲೆಯಲ್ಲಿ. ವ್ಯಕ್ತಿ ನೇರವಾಗಿ ರಸ್ತೆ ಬಂದಿದ್ದು. ನಡುರಸ್ತೆಯಲ್ಲೆ ಮದ್ಯ ಸೇವಿಸಲು ಶುರು ಮಾಡಿದ್ದಾನೆ.

ರಸ್ತೆಯಲ್ಲಿ ವಾಹನಗಳು ಸೇವಿಸುತ್ತಿದ್ದರು ಕೇರ್​ ಮಾಡದ ವ್ಯಕ್ತಿ ಅಲ್ಲಿಯೆ ಮದ್ಯ ಸೇವಿಸಿದ್ದಾನೆ. ಸದ್ಯ ಪೋಲಿಸರು ಆ ವ್ಯಕ್ತಿಯನ್ನು ಸ್ಥಳದಿಂದ  ಎಬ್ಬಿಸಿ ಕಳುಹಿಸಿದ್ದಾರೆ ಎಂದು ಮಾಹಿತಿ ದೊರೆತಿದೆ. ವ್ಯಕ್ತಿ ಮದ್ಯ ಸೇವಿಸುತ್ತಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

 

RELATED ARTICLES

Related Articles

TRENDING ARTICLES