Tuesday, January 7, 2025

ವಾಟ್ಸಪ್​ ಸ್ಟೇಟಸ್​ನಿಂದ ಅಕ್ರಮ ಸಂಬಂಧ ಬಯಲು: ಗೃಹಿಣಿ ಆತ್ಮಹತ್ಯೆಗೆ ಶರಣು !

ಚಿಕ್ಕೋಡಿ: ಮದುವೆಯಾದ ಯುವತಿಯೊಬ್ಬಳು ಪರ ಪುರುಷನೊಂದಿಗೆ ಅಕ್ರಮ ಸಂಬಂಧವಿಟ್ಟುಕೊಂಡಿದ್ದ ವಿಷಯ ಬಯಲಾಗಿದಕ್ಕೆ ಮನನೊಂದ ಯುವತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಚಿಕ್ಕೋಡಿಯಲ್ಲಿ ನಡೆದಿದೆ. ಆರತಿ ಕಾಂಬಳೆ ಎಂಬ 26 ವರ್ಷದ ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮಾಹಿತಿ ದೊರೆತಿದೆ.

ಚಿಕ್ಕೋಡಿ ಜಿಲ್ಲೆಯ, ರಾಯಭಾಗ ತಾಲ್ಲೂಕಿನ ಮೊರಾಬಗ್​ ಗ್ರಾಮದಲ್ಲಿ ಘಟನೆ ನಡೆದಿದ್ದು. ಆರತಿ ಕಾಂಬಳೆ ಎಂಬ ಯುವತಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ವಿವಾಹವಾಗಿದ್ದ ಯುವತಿ ಆರತಿ  ಸಾಗರ ಕಾಂಬಳೆ ಎಂಬಾತನ ಜೊತೆಗೆ ಅಕ್ರಮ ಸಂಬಂಧವನ್ನಿಟ್ಟುಕೊಂಡಿದ್ದಳು.

ಆದರೆ ಇತ್ತೀಚೆಗೆ ಯುವಕ ಸಾಗರ್​, ಆರತಿ ಜೊತೆಗಿನ ಪೋಟೋವನ್ನು ತನ್ನ ವಾಟ್ಸಪ್​ ಸ್ಟೇಟಸ್​ಗೆ ಇಟ್ಟಿದ್ದನು. ಈ ಸ್ಟೇಟಸ್​ ಎಲ್ಲಡೆ ವೈರಲ್​ ಆದ ಹಿನ್ನಲೆ ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದು. ತನ್ನ ಸಂಬಂಧಿಕರ ಮನೆಗೆ ಹೋಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮಾಹಿತಿ ತಿಳಿದು ಬಂದಿದೆ. ರಾಯಬಾಗ ಪೋಲಿಸ್​ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

 

RELATED ARTICLES

Related Articles

TRENDING ARTICLES