Tuesday, January 7, 2025

ಆನ್​ಲೈನ್​ ಜೂಜಾಟದ ಗೀಳಿಗೆ ಬಿದ್ದು ಗುರುಪ್ರಸಾದ್​ ಸೂಸೈಡ್​​ ಮಾಡಿಕೊಂಡರಾ..!

ಬೆಂಗಳೂರು : ಮಠ ಸಿನಿಮಾ ಖ್ಯಾತಿಯ ನಿರ್ದೇಶಕ ಗುರುಪ್ರಸಾದ್ ಆತ್ಮಹತ್ಯೆ ಪ್ರಕರಣದ ತನಿಖೆಯಲ್ಲಿ ಹೊಸ ಹೊಸ ಅಂಶಗಳು ಬೆಳಕಿಗೆ ಬಂದಿದ್ದು. ಆನ್​ಲೈನ್​ ಜೂಜಾಟದಲ್ಲಿ ತೊಡಗಿದ್ದ ಗುರುಪ್ರಸಾದ್​ ಕೋಟ್ಯಾಂತರ ರೂಪಾಯಿ ಸಾಲ ಮಾಡಿಕೊಂಡಿದ್ದರು. ಇದೇ ಅವರ ಆತ್ಮಹತ್ಯೆಗೆ ಕಾರಣವಿರಬಹುದು ಎನ್ನಲಾಗಿದೆ.

ಗುರುಪ್ರಸಾದ್​ ಆತ್ಮಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಮಾದನಾಯಕನಹಳ್ಳಿ ಪೋಲಿಸರಿಗೆ ಗುರುಪ್ರಸಾಧ್​ ಕೋಟ್ಯಾಂತರ ರೂಪಾಯಿ ಸಾಲಮಾಡಿಕೊಂಡಿದ್ದರು ಎಂದು ಮಾಹಿತಿ ದೊರೆತಿದ್ದು. ಗುರುಪ್ರಸಾದ್ ಅವರು ಮೊಬೈಲ್​ನಲ್ಲಿ ರಮ್ಮಿ ಸರ್ಕಲ್​ನಲ್ಲಿ ಜೂಜಾಟ ಆಡುತ್ತಿದ್ದರು. ಜೂಜಾಟವನ್ನೆ ಚಟವಾಗಿಸಿಕೊಂಡಿದ್ದ ಗುರುಪ್ರಸಾದ್​​ ಅದಕ್ಕಾಗಿ ಸಾಲ ಮಾಡಿಕೊಂಡಿದ್ದರು.

ಸ್ನೇಹಿತರು ಮತ್ತು ಕುಟುಂಬಸ್ಥರಿಂದ ಸಾಲ ಮಾಡಿದ್ದ ಗುರುಪ್ರಸಾದ್​, ಫಿಲ್ಮಂ ಮಾಡುತ್ತಿದ್ದೇನೆ ಅದರಿಂದ ಖಂಡಿತಾ ಹಣ ಬರುತ್ತೆ, ಅವಾಗ ವಾಪಾಸ್​ ಕೊಡುತ್ತೇನೆ ಎಂದು ಸುಳ್ಳು ಹೇಳಿ ಹಣವನ್ನು ಪಡೆದಿದ್ದರು. ಈ ಹಣವನ್ನು ಜೂಜಾಟದಲ್ಲಿ ತೊಡಗಿಸಿಕೊಂಡು ಸಾಲದ ಸುಳಿಯಲ್ಲಿ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ.

RELATED ARTICLES

Related Articles

TRENDING ARTICLES