Wednesday, January 8, 2025

ಬಸ್​ನಲ್ಲಿ​​ ಸೀಟಿಗಾಗಿ ಜಗಳ : ಯುವಕರನ್ನು ಕರೆಸಿ ಹೊಡೆಸಿದ ಮು*ಸ್ಲಿಂ ಮಹಿಳೆಯರು ..!

ಚಿಕ್ಕೋಡಿ: ಬಸ್​ನಲ್ಲಿ ಸೀಟಿಗಾಗಿ ಜಗಳ ನಡೆದಿದ್ದು. ಗಂಡ ಹೆಂಡತಿ ಮತ್ತು ಇಬ್ಬರು ಮುಸ್ಲಿಂ ಮಹಿಳೆಯರ ನಡುವೆ ಜಗಳ ನಡೆದಿದೆ. ಜಗಳ ವಿಕೋಪಕ್ಕೆ ಹೋಗಿದ್ದು ಮುಸ್ಲಿಂ ಮಹಿಳೆಯರು ತಮ್ಮ ಮನೆಯವರಿಗೆ ಕರೆ ಮಾಡಿ ಯುವಕರನ್ನು ಕರೆಸಿ ಹಲ್ಲೆ ಮಾಡಿಸಿದ್ದಾರೆ ಎಂದು ಮಾಹಿತಿ ದೊರೆತಿದೆ.

ಬೆಳಗಾವಿ ಜಿಲ್ಲೆಯ, ಹುಕ್ಕೇರಿ ತಾಲೂಕಿನ, ಮಸರಗುಪ್ಪಿ ಕ್ರಾಸ್ ಬಳಿ ಗಲಾಟೆ ನಡೆದಿದ್ದು. ಸಂಕೇಶ್ವರದಿಂದ ಗೋಕಾಕ್​ಗೆ ಹೊರಟ್ಟಿದ್ದ ಬಸ್‌ನಲ್ಲಿ ಗಲಾಟೆ ನಡೆದಿದೆ. ಗಂಡ-ಹೆಂಡತಿ ಮತ್ತು ಇಬ್ಬರು ಮುಸ್ಲಿಂ ಮಹಿಳೆಯರ ನಡುವೆ ನಡೆದ ಜಗಳ ವಿಕೋಪಕ್ಕೆ ಹೋಗಿದ್ದು. ಮಾತಿನ ಚಕಮಕಿಯ ಮೂಲಕ ಆರಂಭವಾದ ಜಗಳ ತಾರಕ್ಕಕ್ಕೆ ಹೋಗಿ ಮುಸ್ಲಿಂ ಮಹಿಳೆಯರು ತಮ್ಮ ಮನೆಯವರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ.

ವಿಷಯ ತಿಳಿದ ಕೂಡಲೆ ಸಿನಿಮಾ ಶೈಲಿಯಲ್ಲಿ ಸುಮಾರು 10 ಮುಸ್ಲಿಂ ಯುವಕರು ಬಸ್​​ನ್ನು ಹಿಂಬಾಲಿಸಿಕೊಂಡು ಬಂದಿದ್ದು. ಬೈಕ್​ನಲ್ಲಿ ಹಿಂಬಾಲಿಸಿಕೊಂಡು ಬಂದ ಯುವಕರು ಮಸರಗುಪ್ಪಿ ಕ್ರಾಸ್ ಬಳಿ ಬಸ್ ಅಡ್ಡಗಟ್ಟಿದ್ದಾರೆ.

ಬಸ್​​ ಅಡ್ಡಗಟ್ಟಿದ ಯುವಕರು ಬಸ್​ನಲ್ಲಿದ್ದ ಸುನೀತಾ ಪರಪ್ಪ ನಾಶಿಪುಡಿ ಮತ್ತು ಶಿವಪ್ಪ ಪರಪ್ಪ ನಾಶಿಪುಡಿಯನ್ನು ಬಸ್​ನಿಂದ ಹೊರಕ್ಕೆ ಎಳೆದು ಹಲ್ಲೆ ಮಾಡಿದ್ದು. ಬಸ್​ನಿಂದ ಮನ ಬಂದಂತೆ ಥಳಿಸಿದ್ದಾರೆ. ಶಿವಪ್ಪನ ಪತ್ನಿ ಸುನೀತಾ ಗರ್ಭಿಣಿ ಎಂದು ತಿಳಿದು ಕೂಡ ಮನಬಂದಂತೆ ಥಳಿಸಿದ್ದು. ಬಸ್​ನಲ್ಲಿದ್ದ ಪ್ರಯಾಣಿಕರು ಬಿಡುವಂತೆ ತಿಳಿಸಿದರು ಕೂಡ ಕೇಳದ ಯುವಕರು ಹಲ್ಲೆ ಮಾಡಿದ್ದಾರೆ.

ಸದ್ಯ ಕೃತ್ಯ ಸಂಭಂದ ಪೋಲಿಸ್​ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು. ಪೋಲಿಸರು ಆರೋಪಿಗಳನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.

RELATED ARTICLES

Related Articles

TRENDING ARTICLES