ದೆಹಲಿ : ಡಿ.ಕೆ ಶಿವಕುಮಾರ್ ಇತ್ತೀಚೆಗೆ ನಡೆಸಿದ ಖಾಸಗಿ ವಾಹಿನಿಯ ಸಂಧರ್ಶನದಲ್ಲಿ ಭಾಗವಹಿಸಿದ್ದು. ಈ ಸಂದರ್ಶನದಲ್ಲಿ ತನ್ನ ತಮ್ಮ ಡಿ. ಸುರೇಶ್ ಸೋಲಿನ ನೋವನ್ನು ಇನ್ನು ಅರಗಿಸಿಕೊಳ್ಳಲಾಗುತ್ತಿಲ್ಲ ಎಂದು ತಮ್ಮ ಅಂತರಾಳದ ಮಾತನ್ನು ವ್ಯಕ್ತಪಡಿಸಿದ್ದಾರೆ.
ಡಿ.ಕೆ ಸುರೇಶ್ ಲೋಕಸಭಾ ಚುನಾವಣೆಯಲ್ಲಿ ಸೋಲನುಭವಿಸಿದ ಕುರಿತು ಮಾತನಾಡಿದ ಡಿ.ಕೆ ಶಿವಕುಮಾರ್, ನನ್ನ ತಮ್ಮನ ಸೋಲನ್ನು ಅರಗಿಸಿಕೊಳ್ಳಲಾಗುತ್ತಿಲ್ಲ, ಈಗಲೂ ಸುರೇಶ್ ಸೋಲಿನ ಬಗ್ಗೆ ಅನುಮಾನವಿದೆ, ಆದರೆ ಅದನ್ನು ಒಪ್ಪಿಕೊಳ್ಳಲೇಬೇಕು. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ನನ್ನ ತಮ್ಮ ಸೋಲುತ್ತಾರೆ ಎಂದು ಯಾರೂ ನಿರೀಕ್ಷೆ ಮಾಡಿರಲಿಲ್ಲ’ ಎಂದು ಹೇಳಿದರು.
ಮುಂದುವರಿದು ಮಾತನಾಡಿದ ‘ ಕುಮಾರಸ್ವಾಮಿ ಮತ್ತು ದೇವೇಗೌಡರ ಪಿತೂರಿಯಿಂದ ನಾವು ಸೋಲಬೇಕಾಯಿತು, ಎದುರಾಳಿ ಅಭ್ಯರ್ಥಿ ಮಂಜುನಾಥ್ ದೇವೇಗೌಡರ ಕುಟುಂಬದವರಾದರು ಕೂಡ ಅವರು ಬಿಜೆಪಿ ಚಿನ್ಹೆಯಿಂದ ಸ್ಪರ್ಧೆ ಮಾಡುವ ಮೂಲಕ ಪಿತೂರಿ ಮಾಡಿದರು, ಅದರಿಂದ ಸೋಲಬೇಕಾಯಿತು, ಆದರೆ ಕಳೆದ 2019ರ ಚುನಾವಣೆಯಲ್ಲಿ ನಾವು ಇದೇ ಕ್ಷೇತ್ರದಲ್ಲಿ ಸುಮಾರು 2 ಲಕ್ಷ ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದೆವು ಎಂದು ಹೇಳಿದ್ದರು.
ಚನ್ನಪಟ್ಟಣ ಗೆಲುವಿನಿಂದಲೂ ಅರಗಿಲ್ಲ ಡಿ.ಕೆ ನೋವು !
ಸಾಮಾನ್ಯವಾಗಿ ಈ ಬಾರಿಯ ಉಪಚುನಾವಣೆಯಲ್ಲಿ ರಾಜ್ಯದ ಕುತೂಹಲದ ಕೇಂದ್ರವಾಗಿದ್ದ ಚನ್ನಪಟ್ಟಣದಲ್ಲಿ. ಕಾಂಗ್ರೆಸ್ ಗೆದ್ದಿ ಬೀಗಿದೆ. ಚುನಾವಣ ಕಣದಲ್ಲಿ ನಿಖಿಲ್ ಮತ್ತು ಯೋಗೇಶ್ವರ್ ಎದುರಾಳಿಗಳಾಗಿದ್ದರು ಕೂಡ ಪರೋಕ್ಷವಾಗಿ ಈ ಚುನಾವಣೆ ಡಿ.ಕೆ ಶಿವಕುಮಾರ್ ಮತ್ತು ಕುಮಾರಸ್ವಾಮಿ ನಡುವೆ ನಡೆದಿತ್ತು.
ಈ ಚುನಾವಣೆಯು ಮುಗಿದು ಫಲಿತಾಂಶವು ಬಂದಾಗಿದೆ. ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಯೋಗೇಶ್ವರ್ ಗೆದ್ದು ಬೀಗಿದ್ದಾರೆ. ಈ ಚುನಾವಣೆಯ ಫಲಿತಾಂಶದ ಮೂಲಕ ಡಿ.ಕೆ ತಮ್ಮನ ಸೋಲಿನ ಸೇಡನ್ನು ತೀರಿಸಿಕೊಂಡರು ಎಂದು ಚರ್ಚೆ ಮಾಡಲಾಗುತ್ತಿತ್ತು. ಆದರೆ ಖಾಸಗಿ ವಾಹಿನಿಯಲ್ಲಿ ನಡೆದ ಸಂಧರ್ಶನದಲ್ಲಿ ಡಿ.ಕೆ ಶಿವಕುಮಾರ್ ತಮ್ಮನ ಸೋಲನ್ನು ಜೀರ್ಣಿಸಿಕೊಳ್ಳಲಾಗುತ್ತಿಲ್ಲ ಎಂದು ಹೇಳಿರುವುದು ಚರ್ಚೆಗೆ ಗ್ರಾಸವಾಗಿದೆ.