Wednesday, January 8, 2025

ಹೆಂಡತಿಗೆ ಮಂಗಳ ಸೂತ್ರ ಕೊಡಿಸಲು ಎಟಿಎಂಗೆ ಕನ್ನ ಹಾಕಿದ ಖದೀಮ ..!

ಬೆಳಗಾವಿ : ಅರ್ಧಾಂಗಿಯ ಆಸೆಯನ್ನು ತೀರಿಸಲು ಇಲ್ಲೊಬ್ಬ ಖದೀಮ ಎಟಿಎಂಗೆ ಖನ್ನ ಹಾಕುವ ಕೆಲಸ ಮಾಡಿದ್ದು. ಹೆಂಡತಿಗೆ ಮಂಗಳಸೂತ್ರ ಕೊಡಿಸಲು ಹೆಚ್​​ಡಿಎಫ್​ಸಿ ಬ್ಯಾಂಕ್​ನ ಎಟಿಎಂಗೆ ಕನ್ನ ಹಾಕಿ ಸುಮಾರು 8 ಲಕ್ಷ ಹಣವನ್ನು ಎಗರಿಸಿದ್ದಾನೆ.

ಬೆಳಗಾವಿ ನಗರದ ಕೃಷ್ಣ ಸುರೇಶ್​ ದೇಸಾಯಿ ಎಂಬಾತನಿಂದ ಕೃತ್ಯವಾಗಿದ್ದು. ಆರೋಪಿಯು ಎಚ್​​ಡಿಎಫ್​ಸಿ ಬ್ಯಾಂಕ್​ನ ಎಟಿಎಂಗಳಿಗೆ ಹಣವನ್ನು ಹಾಕುವ ಕೆಲಸ ಮಾಡುತ್ತಿದ್ದನು. ತನ್ನ ಟೀಮ್​ ಜೊತೆಗೆ ಬಂದು ಎಟಿಎಂಗಳಿಗೆ ಹಣ ಹಾಕಿ ಅದರ ಕೀಯನ್ನು ತನ್ನ ಬಳಿಯಲ್ಲೆ ಇಟ್ಟುಕೊಳ್ಳುತ್ತಿದ್ದನು.

ಅದೇ ರೀತಿ ಎಚ್​​ಡಿಎಫ್​ಸಿ ಬ್ಯಾಂಕ್​ ಎಟಿಎಂಗೆ ಹಣವನ್ನು ಹಾಕಿ ಹೋಗಿದ್ದ ಖದೀಮ, ಅದೇ ದಿನ ಸಂಜೆ ಬಂದು ತನ್ನ ಬಳಿಯಲ್ಲಿದ್ದ ಮಷಿನಿನ ಕೀ ಬಳಸಿಕೊಂಡು ಎಟಿಎಂ ಬಾಕ್ಸ್​​ ಓಪನ್​​ ಮಾಡಿ ಸುಮಾರು 8 ಲಕ್ಷ ರೂಪಾಯಿ ಹಣವನ್ನು ಕಳ್ಳತನ ಮಾಡಿದ್ದನು. ಆದರೆ ಎರಡು ದಿನದ ನಂತರ ಕಳ್ಳತನ ಕೃತ್ಯ ಬೆಳಕಿಗೆ ಬಂದಿದ್ದು. ಸಿಸಿಟಿವಿ ಪರಿಶೀಲಿಸಿದ ಬ್ಯಾಂಕ್​ ಸಿಬ್ಬಂದಿಗಳು ಒಂದು ಕ್ಷಣ ಶಾಕ್​​ ಆಗಿದ್ದಾರೆ.

ಈ ಕುರಿತು ಬ್ಯಾಂಕ್​ ಸಿಬ್ಬಂದಿಗಳು ಬೆಳಗಾವಿಯ ಮಾರ್ಕೆಟ್​​ ಪೋಲಿಸ್​ ಠಾಣೆಗೆ ದೂರು ನೀಡಿದ್ದು. ದೂರನ್ನು ದಾಖಲಿಸಿಕೊಂಡ ಪೋಲಿಸರು ತಲೆ ಮರೆಸಿಕೊಂಡಿದ್ದ ಆರೋಪಿ ಕೃಷ್ಣ ಸುರೇಶ್​ ದೇಸಾಯಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.  ಬಂಧಿತನಿಂದ ಒಂದು ಮಂಗಳ ಸೂತ್ರ, ಚಿನ್ನದ ಸರ ಸೇರಿದಂತೆ ಸುಮಾರು 7 ಲಕ್ಷ ಹಣವನ್ನು ವಶಪಡಿಸಿಕೊಂಡಿದ್ದಾರೆ ಎಂದು ಮಾಹಿತಿ ದೊರೆತಿದೆ.

 

RELATED ARTICLES

Related Articles

TRENDING ARTICLES