Sunday, January 19, 2025

ಬಿಗ್​ಬಾಸ್​ ಮನೆಯಿಂದ ಹೊರಬಂದ ಚೈತ್ರ: ಕೋರ್ಟ್​ನಲ್ಲಿ ಹಾಜರ್​​ !

ಬೆಂಗಳೂರು : ಬಿಗ್​ಬಾಸ್​ ಸ್ಪರ್ಧಿ ಚೈತ್ರ ಕುಂದಾಪುರ ಇದ್ದಕ್ಕಿದಂತೆ ಬಿಗ್​ ಬಾಸ್​ ಮನೆಯಿಂದ ಹೊರಗೆ ಬಂದಿದ್ದು. ಇಂದು ಕೋರ್ಟ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಯಾಕೆ ಹೊರಗೆ ಬಂದಿದ್ದಾರೆ, ಕೋರ್ಟ್​ನಲ್ಲಿ ಹಾಜರಾಗುವಂಥದು ಏನಾಗಿದೆ ಎಂಬುದನ್ನು ತಿಳಿಯಲು ಈ ಸಂಪೂರ್ಣ ವರದಿಯನ್ನು ನೋಡಿ.

ಉದ್ಯಮಿ ಗೋವಿಂದ್​ ಪೂಜಾರಿ ಎಂಬುವವರಿಗೆ MLA ಟಿಕೆಟ್​ ಕೊಡಿಸುವುದಾಗಿ ಹೇಳಿ 5 ಕೋಟಿ ಹಣವನ್ನು ಪಡೆದು ವಂಚಿಸಿದ್ದ ಪ್ರಕರಣದಲ್ಲಿ ಈಗಾಗಲೇ ವಿಚಾರಣೆ ಎದುರಿಸಿರುವ ಚೈತ್ರ ಕುಂದಾಪುರ, ಇದೇ ಪ್ರಕರಣದ ವಿಚಾರಣೆಗೆ ಇಂದು ನ್ಯಾಯಾಲಯಕ್ಕೆ ಹಾಜರಾಗಿದ್ದಾರೆ. ಚೈತ್ರ ,ಶ್ರೀಕಾಂತ್​ ಸೇರಿದಂತೆ ಒಟ್ಟು ಮೂರು ಜನ ಆರೋಪಿಘಲು ನ್ಯಾಯಾಲಯಕ್ಕೆ ಹಾಜರಾಗಿದ್ದಾರೆ ಎಂದು ಮಾಹಿತಿ ದೊರೆತಿದೆ.

ಕೋರ್ಟ್​ನಿಂದ ವಾರೆಂಟ್​ ಜಾರಿಯಾದ ಹಿನ್ನಲೆ ಬಿಗ್​ಬಾಸ್​ ಮನೆಯಿಂದ ನೇರವಾಗಿ ಕೋರ್ಟ್​ಗೆ ಬಂದಿರುವ ಚೈತ್ರ. ಮತ್ತೆ ಮರಳಿ ಬಿಗ್​ಬಾಸ್​ ಮನೆಗೆ ಹೋಗುತ್ತಾರಾ ಎಂಬ ಪ್ರಶ್ನೆ ಉದ್ಭವವಾಗಿದೆ. ಇದೇ ರೀತಿ ಕಳೆದ ಸೀಸನ್​ನಲ್ಲಿಯೂ ವರ್ತೂರ್​ ಸಂತೋಷ್ ಎಂಬ ಸ್ಪರ್ಧಿ ಅರೆಸ್ಟ್​ ಆಗಿ ಜೈಲಿಗೆ ಬಂದು ಮರಳಿ ಮತ್ತೆ ಬಿಗ್​ಬಾಸ್​ ಮನೆಗೆ ಮರಳಿದ್ದರು.

ಅದೇ ರೀತಿ ಚೈತ್ರ ಕೂಡ ಮರಳಿ ಬಿಗ್​ಬಾಸ್​ ಮನೆಗೆ ಹೋಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

RELATED ARTICLES

Related Articles

TRENDING ARTICLES