ವಿಜಯಪುರ : ಪ್ರೀತಿ ಮಾಡು ಎಂದು ಯುವಕನೊರ್ವ ಚುಡಾಯಿಸಿದ ಕಾರಣಕ್ಕೆ ಮನನೊಂದ ಬಾಲಕಿಯೊಬ್ಬಳು ನೇಣು ಹಾಕಿಕೊಂಡು ಸಾವನ್ನಪ್ಪಿದ ಘಟನೆ ವಿಜಯಪುರದ ಮುದ್ದೇಬಿಹಾಳ ಪೋಲಿಸ್ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಪ್ರಕರಣ ಸಂಬಂಧ ಪೋಲಿಸರು ಪೋಕ್ಸೋ ಕೇಸ್ ದಾಖಲಿಸಿಕೊಂಡಿದ್ದು, ಆರೋಪಿ ಸಂಗಮೇಶ್ ಜುಂಜವಾರ ಎಂಬುವವನನ್ನು ಬಂಧಿಸಿದ್ದಾರೆ ಎಂದು ಮಾಹಿತಿ ದೊರೆತಿದೆ.
ಕಳೆದ ಹಲವಾರು ದಿನಗಳಿಂದ ಸಂಗಮೇಶ್ ಜುಂಜವಾರ ಎಂಬಾತ ಬಾಲಕಿಯ ಹಿಂದೆ ಬಿದ್ದಿದ್ದ. ಪ್ರೀತಿ ಪ್ರೇಮದ ಹೆಸರಿನಲ್ಲಿ ಬಾಲಕಿಯನ್ನು ಚುಡಾಯಿಸುತ್ತಿದ್ದನು. ಬಾಲಕಿ ಶಾಲೆಗೆ ತೆರಳುವ ವೇಳೆ ಅವಳನ್ನು ಹಿಂಬಾಲಿಸಿ ಕೀಟಲೆ ನೀಡುತ್ತಿದ್ದನು ಎಂದು ಮಾಹಿತಿ ದೊರೆತಿದೆ. ಆದರೆ ಇತ್ತೀಚೆಗೆ ಬಾಲಕಿ ಶಾಲೆಗೆ ಹೋಗುವಾಗ ಆಕೆಯನ್ನು ಹಿಂಬಾಲಿಸಿ ಆಕೆಯ ಮೈಕೈ ಮುಟ್ಟಿ ಹಿಂಸೆ ನೀಡಿದ್ದನು ಮತ್ತು ನನ್ನನ್ನು ಪ್ರೀತಿಸು ಎಂದು ಕಿರುಕುಳ ನೀಡಿದ್ದನು. ಇದನ್ನು ಪ್ರಶ್ನೆ ಮಾಡಿದ್ದ ಬಾಲಕಿಯ ಅಣ್ಣನಿಗೂ ಹಲ್ಲೆ ಮಾಡಿ ಜೀವ ಬೆದರಿಕೆ ಹಾಕಿದ್ದನು ಎಂದು ಮಾಹಿತಿ ದೊರೆತಿದೆ.
ಇದರ ಕುರಿತಾಗಿ ಕಳೆದ ನವೆಂಬರ್ 27ರಂದು ಬಾಲಕಿ ಮುದ್ದೇಬಿಹಾಳ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಳು. ಬಾಲಕಿ ದೂರನ್ನು ಆಧಾರಿಸಿ ಪೋಲಿಸರು ಪೋಕ್ಸೋ ಪ್ರಕರಣ ದಾಖಲಿಸಿಕೊಂಡು ಪ್ರಮುಖ ಆರೋಪಿಗಳಾದ ಸಂಗಮೇಶ ಜುಂಜವಾರ, ಮೌನೇಶ ಮಾದರ ಎಂಬುವವರನ್ನು ಬಂಧಿಸಿದ್ದರು. ಇದೆಲ್ಲದರಿಂದ ನೊಂದಿದ್ದ ಅಪ್ರಾಪ್ತ ಬಾಲಕಿ ಮನೆಯಲ್ಲಿ ನೇಣಿಗೆ ಶರಣಾಗಿದ್ದು. ಇದಕೆಲ್ಲ ಸಂಗಮೇಶ್ ಕಿರುಕುಳವೆ ಕಾರಣ ಎಂದು ಆರೋಪಿಸಲಾಗಿದೆ.