ಬೆಳಗಾವಿ: ಬಿಜೆಪಿಯಲ್ಲಿನ ಒಳಜಗಳ ದಿನ ದಿನಕ್ಕೆ ತಾರಕ್ಕಕ್ಕೆ ಏರುತ್ತಿದ್ದು. ಇಂದು ಶಾಸಕ ರಮೇಶ್ ಜಾರಕಿಹೋಳಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರರ ಮೇಲೆ ವಾಗ್ದಾಳಿ ನಡೆಸಿದರು. ವಿಜಯೇಂದ್ರ ಶಾಸಕರಿಗೆ ಮುಂದಿನ ಚುನಾವಣೆಯ ಟಿಕೆಟ್ ಕೊಡೊದಿಲ್ಲ ಎಂದು ಬೆದರಿಸಿ ಶಾಸಕರ ತಲೆ ಕೆಡೆಸುತ್ತಿದ್ದಾರೆ ಎಂದು ಆರೋಪಿಸಿದರು.
ಲಿಂಗಾಯತರು, ಒಕ್ಕಲಿಗರು ಸೇರಿದಂತೆ ಯಾವುದೇ ಸಮುದಾಯ ವಿಜಯೇಂದ್ರರ ಜೊತೆ ಇಲ್ಲ. ರೇಣುಕಾಚಾರ್ಯರಿಗು ವಿಜಯೇಂದ್ರನ ಸರ್ಮಥನೆ ಮಾಡೋದು ಅನಿವಾರ್ಯವಾಗಿದೆ. ನಾನು ತಪ್ಪು ಮಾಡುತ್ತಿದ್ದೇನೆ ಎಂದು ನನ್ನ ಸ್ನೇಹಿತರು ಹೇಳಿದರೆ ನಾನು ಓಪನ್ ಆಗಿ ಕ್ಷಮೆ ಕೇಳುತ್ತೇನೆ. ನಾವೇಲ್ಲರು ಪೂರ್ಣ ಪ್ರಮಾಣದಲ್ಲಿ ಯತ್ನಾಳ್ರೊಂದಿಗೆ ನಿಲ್ಲುತ್ತೇವೆ. ಇದನ್ನು ಹೈಕಮಾಂಡ್ಗೆ ಕೂಡ ಮನವರಿಕೆ ಮಾಡಿ ಕೊಡುತ್ತೇವೆ, ಅವರೇನು ಹೇಳ್ತಾರೋ ಅದನ್ನು ನಾವು ಮಾಡುತ್ತೇವೆ’ ಎಂದು ಹೇಳಿದರು.
ಮುಂದುವರಿದು ಮಾತನಾಡಿದ ರಮೇಶ್ ಜಾರಕಿಹೋಳಿ ವಿಜಯೇಂದ್ರನಿಗೆ ಗಂಭೀರತೆ ಎನ್ನುವುದಿಲ್ಲ. ಆದ್ದರಿಂದ ರಾಜ್ಯಧ್ಯಕ್ಷ ಸ್ಥಾನ ತ್ಯಜಿಸಿ ಬೇರೆಯವರಿಗೆ ಕೊಡುವುದು ಒಳ್ಳೆಯದು. ಯಡಿಯೂರಪ್ಪ ಹುಟ್ಟು ಹೋರಾಟಗಾರರು, ಆದರೆ ವಿಜಯೇಂದ್ರ ಅವರ ಧೂಳಿಗೂ ಸಮವಿಲ್ಲ. ಜೀನ್ಸ್ ಪ್ಯಾಂಟ್, ಟೀಶರ್ಟ್ ಹಾಕಿಕೊಂಡು ಮಾಡುವ ರಾಜಕೀಯ ಅವನಿಗೆ ಹೊಂದಲ್ಲ, ಸಿನೀಯಾರಿಟಿ ಬಂದ ಮೇಲೆ ಅವನು ಅಧ್ಯಕ್ಷನಾಗಲಿ.
ಉಪಚುನಾವಣೆಯಲ್ಲಿ ಮೂರು ಸೀಟ್ಗಳನ್ನು ಸೋತಿದ್ದೇವೆ ಅಂದ್ರೆ ನಮಗೆ ನಾಚಿಕೆಯಾಗಬೇಕು. ವಿಜಯೇಂದ್ರನ ಬೇಜವಾಬ್ದಾರಿತನದಿಂದ ಇಂದು ಹೀಗಾಗುತ್ತಿದೆ. ಹೈಕಮಾಂಡ್ ಕೊನೆಗೆ ಏನು ಹೇಳುತ್ತೋ ಅದನ್ನು ನಾವು ಮಾಡುತ್ತೇವೆ. ಪಕ್ಷದ ಚೌಕಟ್ಟಿನಲ್ಲಿ ನಾವು ಹೋರಾಟ ಮಾಡಸುತ್ತೇವೆ. ದೆಹಲಿಯಲ್ಲಿ ನಾಯಕರನ್ನು ಭೇಟಿಯಾದರೆ ನಮಗೆ ಸಮರ್ಥ ಅಧ್ಯಕ್ಷರನ್ನು ನೀಡಿ ಎಂದು ಕೇಳುತ್ತೇವೆ, ಎಂದು ಏಕವಚನದಲ್ಲೆ ವಿಜಯೇಂದ್ರನ ಮೇಲೆ ವಾಗ್ದಾಳಿ ನಡೆಸಿದರು.