Wednesday, December 4, 2024

ಭೀಕರ ರಸ್ತೆ ಅಪಘಾತ : ತಂದೆ-ಮಗ ಸಾವು, ತಾಯಿ ಸ್ಥಿತಿ ಗಂಭೀರ

ಹಾಸನ : ಭೀಕರ ರಸ್ತೆ ಅಪಘಾತದಲ್ಲಿ ತಂದೆ ಮಗ ಮೃತಪಟ್ಟ ದುರ್ಘಟನೆ ಹಾಸನದ ಚನ್ನರಾಯಪಟ್ಟಣದಲ್ಲಿ ನಡೆದಿದ್ದು. ಮತ್ತೊಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ಮಾಹಿತಿ ದೊರೆತಿದೆ. ಕಾರಿನ ಬ್ರೇಕ್​ ಫೇಲ್ ಆದ ಹಿನ್ನಲೆ ಅಪಘಾತ ಸಂಭವಿಸಿದೆ ಎಂದು ಪ್ರಾಥಮಿಕ ತನಿಖೆಯಲ್ಲಿ ಬಹಿರಂಗವಾಗಿದ್ದು. ಚನ್ನರಾಯಪಟ್ಟಣ ಸಂಚಾರಿ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಹಾಸನ ಜಿಲ್ಲೆಯ, ಚನ್ನರಾಯಪಟ್ಟಣ ತಾಲ್ಲೂಕಿನ, ಅಮಾನಿಕೆರೆ ಗಡಿ ಬಳಿ ಘಟನೆ ನಡೆದಿದೆ. ದಂಪತಿಗಳು ತಮ್ಮ ಮಗನೊಂದಿಗೆ ಶ್ರವಣೇರಿ ಗ್ರಾಮಕ್ಕೆ ತೆರಳುತ್ತಿದ್ದ ವೇಳೆ ಅವಘಡ ಸಂಭವಿಸಿದೆ. ತಮ್ಮ ಚವರಲೇಟ್​ ಕಾರಿನಲ್ಲಿ ತೆರಳುತ್ತಿದ್ದ ವೇಳೆ ಚಾಲಕನ ನಿಯತ್ರಂಣ ತಪ್ಪಿ ಎದುರಿಗೆ ಚಲಿಸುತ್ತಿದ್ದ i10(ಐಟೆನ್​​) ಕಾರಿಗೆ ಡಿಕ್ಕಿ ಹೊಡೆದು ಬ್ರೇಕ್​ ಫೇಲ್​ ಆಗಿ ಮರಕ್ಕೆ ಡಿಕ್ಕಿ ಹೊಡೆದಿದೆ.

ಡಿಕ್ಕಿ ಹೊಡೆದ ಪರಿಣಾಮ ತಂದೆ ರಾಕೇಶ್​ (28) ಮತ್ತು ಮಗ ಮೋಕ್ಷಿತ್​ ಗೌಡ (08) ಸ್ಥಳದಲ್ಲೆ ಸಾವನ್ನಪ್ಪಿದ್ದು. ತಾಯಿ ಆಶಾಗೆ ಗಂಭೀರವಾಗಿ ಗಾಯವಾಗಿದೆ. ಗಂಭೀರವಾಗಿ ಗಾಯಗೊಂಡ ಆಶಾರನ್ನು ಆಸ್ಪತ್ರೆಗೆ ದಾಖಲು ಮಾಡಿದ್ದು. ಚನ್ನರಾಯಪಟ್ಟಣ ಸಂಚಾರಿ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

 

RELATED ARTICLES

Related Articles

TRENDING ARTICLES