ತುಮಕೂರು: ಬೆಳ್ಳಂಬೆಳಗ್ಗೆ ತುಮಕೂರಿನ ಚಿಕ್ಕನಹಳ್ಳಿ ಸೇತುವೆ ಬಳಿ ಖಾಸಗಿ ಬಸ್ ಪಲ್ಟಿಯಾಗಿದ್ದು. ದೆಹಲಿ ಮೂಲದ ಪರ್ತಕರ್ತೆ ಸೇರಿದಂತೆ ಮೂವರು ಮಹಿಳೆಯರು ಸಾವನ್ನಪ್ಪಿದ್ದಾರೆ ಎಂದು ಮಾಹಿತಿ ದೊರೆತಿದೆ. ಗೋವಾದಿಂದ ಬೆಂಗಳೂರಿಗೆ ತೆರಳುತ್ತಿದ್ದ ಬಸ್ ಅಪಘಾತವಾಗಿ ದುರ್ಘಟನೆ ಸಂಭವಿಸಿದೆ.
ತುಮಕೂರಿನ ಕಳ್ಳಂಬೆಳ್ಳ ಸಮೀಪದ ಚಿಕ್ಕನಹಳ್ಳಿ ಸೇತುವೆ ಬಳಿ ಖಾಸಗಿ ಬಸ್ ಪಲ್ಟಿಯಾಗಿದ್ದು. ಬೆಳಗಿನ ಜಾವ 4:30ರ ಸುಮಾರಿಗೆ ಅಪಘಾತ ಸಂಭವಿಸಿದೆ. ಬಸ್ನಲ್ಲಿ ಸುಮಾರು 25ಜನ ಪ್ರಯಾಣಿಸುತ್ತಿದ್ದರು ಎಂದು ಮಾಹಿತಿ ದೊರೆತಿದ್ದು. ಮೂರು ಜನ ಸಾವನ್ನಪ್ಪಿದ್ದು, ಐದಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯವಾಗಿದೆ ಎಂದು ಮಾಹಿತಿ ದೊರೆತಿದೆ. ಸ್ಥಳಕ್ಕೆ ತುಮಕೂರು ಎಸ್ಪಿ. ಅಶೋಕ್ ವೆಂಕಟ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಮೂವರು ಯುವತಿಯರ ದುರ್ಮರಣ !
ಬಸ್ ಅಪಘಾತದಲ್ಲಿ ಮೂವರು ಯುವತಿಯರು ಮೃತಪಟ್ಟಿದ್ದು. ಶವಾಳಿ ಸಿಂಗ್, ಊರ್ವಿ ಮತ್ತು ಪ್ರಿಯಾಂಕ ಎಂಬ ಯುವತಿಯರು ಮೃತಪಟ್ಟಿದ್ದಾರೆ ಎಂದು ಮಾಹಿತಿ ದೊರೆತಿದೆ. ಮೃತರಲ್ಲಿ ದೆಹಲಿ ಮೂಲದ ಖಾಸಗಿ ವಾಹಿನಿ ಪರ್ತಕರ್ತೆ ಪೂರ್ವಿ ಎಂಬುವವರು ಕೂಡ ಸಾವನ್ನಪ್ಪಿದ್ದಾರೆ ಶಂಕೆ ವ್ಯಕ್ತಪಡಿಸಲಾಗಿದೆ.
ಅಪಘಾತದಲ್ಲಿ ಒಟ್ಟು 5ಕ್ಕೂ ಹೆಚ್ಚು ಜನರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು. ಗಾಯಾಳುಗಳಲ್ಲಿ ಇಬ್ಬರನ್ನು ಸಿದ್ದಗಂಗಾ ಆಸ್ಪತ್ರೆಗೆ ಮತ್ತು ಮೂವರನ್ನು ಶಿರಾ ತಾಲ್ಲೂಕು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ ಎಂದು ಮಾಹಿತಿ ದೊರೆತಿದೆ.