Sunday, January 12, 2025

ಮನೆಯಲ್ಲಿದ್ದ ಗ್ಯಾಸ್​ ಸಿಲಿಂಡರ್​ ಸ್ಪೋಟ : ಮೂವರ ಸ್ಥಿತಿ ಗಂಭೀರ !

ಆನೇಕಲ್ : ಮನೆಬಳಕೆಗೆ ಉಪಯೋಗಿಸುತ್ತಿದ್ದ ಸಿಲಿಂಡರ್​ ಸ್ಪೋಟಗೊಂಡ ಮನೆಯಲ್ಲಿದ್ದ ಮೂರು ಜನರಿಗೆ ಗಂಭೀರವಾದ ಗಾಯವಾದ ಘಟನೆ ಬೆಂಗಳೂರಿನ ಹೊರವಲಯದಲ್ಲಿ ನಡೆದಿದ್ದು. ಗಾಯಾಳುಗಳನ್ನು ನಾರಾಯಣ ಹೆಲ್ತ್​ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ ಎಂದು ಮಾಹಿತಿ ದೊರೆತಿದೆ.

ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಕಾಚನಾಯಕನಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದ್ದು. ಇಂದು(ಡಿ.02) ಬೆಳ್ಳಂಬೆಳಿಗ್ಗೆ ಮನೆಯಲ್ಲಿದ್ದ ಸಿಲಿಂಡರ್​ ಸ್ಪೋಟಗೊಂಡಿದೆ. ಬೆಳಿಗ್ಗೆ ನಿದ್ದೆಯಿಂದ ಎದ್ದು ಮನೆಯ ಲೈಟ್​ ಹಾಕುತ್ತಿದ್ದಂತೆ  ಸಿಲಿಂಡರ್​ ಸ್ಪೋಟಗೊಂಡಿದ್ದು. ಸ್ಪೋಟದ ತೀವ್ರತೆಗೆ  ಮನೆಯ ಕಿಟಕಿ, ಬಾಗಿಲುಗಳು ಪೀಸ್​​ ಪೀಸ್​ ಆಗಿದೆ ಎಂದು ತಿಳಿದು ಬಂದಿದೆ.

ಮನೆಯಲ್ಲಿದ್ದ ಮೂರು ಜನರಿಗೆ ಗಂಭೀರವಾದ ಗಾಯಗಳಾಗಿದ್ದು. ಶೇಕಡಾ 50% ರಷ್ಟು ಸುಟ್ಟಗಾಯಗಳಾಗಿವೆ. ಸುಟ್ಟಗಾಯಗಳಿಂದ ನರಳುತ್ತಿದ್ದವರನ್ನು ನಾರಾಯಣ ಹೆಲ್ತ್​ ಆಸ್ಪತ್ರೆಗೆ ದಾಖಲು ಮಾಡಿದ್ದು. ಮೂವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಮಾಹಿತಿ ದೊರೆತಿದೆ. ಘಟನಾ ಸ್ಥಳಕ್ಕೆ ಸೂರ್ಯಸಿಟಿ ಪೋಲಿಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದು ಮಾಹಿತಿ ದೊರೆತಿದೆ.

 

RELATED ARTICLES

Related Articles

TRENDING ARTICLES