ಕಾರವಾರ: ಮಕ್ಕಳಿಗೆ ಬಲೂನ್ ಎಂದರೆ ಅದೇನೋ ಆಕರ್ಷಣೆ, ತಮ್ಮ ಶ್ವಾಸದಿಂದ ಊದಿ ಅದರಲ್ಲಿ ಆಟವಾಡುವುದಕ್ಕೆ ಸಾಮಾನ್ಯವಾಗಿ ಮಕ್ಕಳು ಇಷ್ಟ ಪಡುತ್ತವೆ. ಆದರೆ ಇಲ್ಲೊಬ್ಬ ಬಾಲಕನಿಗೆ ಬಲೂನೆ ಜೀವ ಕಂಟಕ ವಸ್ತುವಾಗಿ ಪರಿಣಮಿಸಿದೆ.
ಉತ್ತರ ಕನ್ನಡ ಜಿಲ್ಲೆಯ, ಹಳಿಯಾಳ ತಾಲ್ಲೂಕಿನ, ಜೋಗನಕೊಪ್ಪ ಗ್ರಾಮದಲ್ಲಿ ಘಟನೆ ನಡೆದಿದ್ದು. ನವೀನ್ ನಾರಾಯಣ ಬೆಳಗಾಂವಕರ ಎಂಬ 13 ವರ್ಷದ ಬಾಲಕ ಬಲೂನ್ ಊದಲು ಹೋಗಿ ದುರ್ಘಟನೆ ಸಂಭವಿಸಿದೆ. ಬಲೂನ್ ಊದುವ ಸಂದರ್ಭದಲ್ಲಿ ಬಲೂನ್ ನುಂಗಿ ಅವಘಡ ಸಂಭವಿಸಿದ್ದು. ಬಾಲಕ ಉಸಿರನ್ನು ಎಳೆದುಕೊಳ್ಳಲಾಗದೆ ನರಳಿ ಪ್ರಾಣ ಬಿಟ್ಟಿದ್ದಾನೆ ಎಂದು ಮಾಹಿತಿ ದೊರೆತಿದೆ.
ಬಾಲಕ ನವೀನ್ ಜೋಗನಕೊಪ್ಪ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ7ನೇ ತರಗತಿ ಓದುತ್ತಿದ್ದನು. ಆದರೆ ಭವ್ಯ ಭವಿಷ್ಯ ಕಾಣಬೇಕಾದ ಬಾಲಕನ ಬದುಕು ಈ ರೀತಿಯಾಗಿ ಅಂತ್ಯವಾಗಿರುವುದು ನಿಜಕ್ಕೂ ದುರದೃಷ್ಟಕರ ಸಂಗತಿಯಾಗಿದೆ.