Sunday, January 19, 2025

ಉಪಚುನಾವಣೆಯಲ್ಲಿ BJP ಸೋಲಲು ಯತ್ನಾಳ್​ ಕಾರಣ : ರೇಣುಕಾಚಾರ್ಯ

ಮೈಸೂರು: ಬಿಜೆಪಿಯ ಆತಂರಿಕ ತಿಕ್ಕಾಟಾ ಮತ್ತೊಂದು ಹಂತಕ್ಕೆ ಹೋಗಿದ್ದು, ವಿಜಯೇಂದ್ರ ಬಣದ ನಾಯಕ ರೇಣುಕಾಚಾರ್ಯ ಯತ್ನಾಳ್​ ಮತ್ತು ತಂಡದ ಮೇಲೆ ಮುಗಿಬಿದ್ದಿದ್ದಾರೆ. ಉಪಚುನಾವಣೆ ಸೋಲಲು ಯತ್ನಾಳ್​ ಕಾರಣ ಎಂದು ಹೇಳಿರುವ ಹೊನ್ನಾಳಿ ಹೋರಿ ರೇಣುಕಾಚಾರ್ಯ, ಯತ್ನಾಳ್​ ಹರಕು ಬಾಯಿಯ ಕಾರಣದಿಂದಾಗಿ ಬಿಜೆಪಿ ಮೂರಕ್ಕೆ ಮೂರು ಕ್ಷೇತ್ರಗಳನ್ನು ಕಳೆದುಕೊಂಡಿದೆ ಎಂದು ಹೇಳಿದರು.

ಯತ್ನಾಳ್​ ಬಾಯಿ ಚಟಕ್ಕೋಸಕರ ಮಾತನಾಡುತ್ತಾರೆ,  ಅವರು ಕಾಂಗ್ರೆಸ್ ನಿಂದ ಸುಫಾರಿ ತಕೊಂಡು ಪಕ್ಷದ ಬಿಜೆಪಿ ವಿರುದ್ಧ ಹೋರಾಟ ಮಾಡುತ್ತಿದ್ದಾರೆ. ಯತ್ನಾಳ್​ ಯಡಿಯೂರಪ್ಪನವರ ಧೂಳಿಗೂ ಸಮವಿಲ್ಲ.
ಯಡಿಯೂರಪ್ಪ ಸೈಕಲ್ ತುಳಿದು ಪಕ್ಷ ಕಟ್ಟಿದ್ದಾರೆ. ಯಡಿಯೂರಪ್ಪ ಅಧ್ಯಕ್ಷರು, ಸಿಎಂ ಆಗಿದ್ದಾಗಲೂ ಕೆಲವರು ಮಿರ್​ಸಾದಿಕ್ ತೊಂದರೆ ಕೊಟ್ಟಿದ್ದರು.

ವಿಜಯೇಂದ್ರರನ್ನ ರಾಜ್ಯಾಧ್ಯಕ್ಷರನ್ನಾಗಿ ಮಾಡಿರೋದು ನಾವಲ್ಲ, ಕೇಂದ್ರ ಬಿಜೆಪಿ ನಾಯಕರು. ವಿಜಯೇಂದ್ರಗೆ ಬೈದರೆ ಹೈಕಮಾಂಡ್ ಬೈದಂಗೆ. ಯಡಿಯೂರಪ್ಪ, ವಿಜಯೇಂದ್ರ ವಿರುದ್ಧ ಹೋರಾಟ ಮಾಡುವ ಬದಲು,  ಮುಡಾ, ವಾಲ್ಮೀಕಿ ಹೋರಾಟ ಮಾಡಬೇಕು. ಮುಡಾ ಹಗರಣ ಪಾದಯಾತ್ರೆ ಮಾಡಿದಾಗ ನೀವು ಎಲ್ಲಿ ಹೋಗಿದ್ರಿ ಎಂದು ಪ್ರಶ್ನಿಸಿದರು.

ಉಪಚುನಾವಣೆ ಸೋಲಲು ಯತ್ನಾಳ್​ ಆ್ಯಂಡ್​ ಟೀಮ್​ ಕಾರಣ !

ಮೂರು ಕ್ಷೇತ್ರಗಳ ಉಪ‌ಚುನಾವಣೆ ಸೋಲಿಗೆ ಯತ್ನಾಳ್ ಅಂಡ್ ಟೀಮ್ ಕಾರಣ ಎಂದಿರುವ ರೇಣುಕಾಚಾರ್ಯ.
ಇವರ ಹರಕು ಬಾಯಿಯಿಂದಾಗಿ ಬಿಜೆಪಿ‌ಗೆ ಸೋಲಾಗಿದೆ. ಕಾಂಗ್ರೆಸ್ ಜೊತೆ ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡು ಬಿಜೆಪಿ ಸೋಲಿಗೆ ಯತ್ನಾಳ್ ಕಾರಣರಾಗಿದ್ದಾರೆ. ಯತ್ನಾಳ್‌ ಹಿಟ್ಲರ್ ರೀತಿ ವರ್ತಿಸುತ್ತಿದ್ದೀರ. ಬ್ಲಾಕ್‌ಮೇಲ್‌ ರಾಜಕೀಯ ಮಾಡುತ್ತಿದ್ದೀರ. ಇನ್ನು ಮುಂದಾದರೂ‌ ಇದೆಲ್ಲವನ್ನು ಬಿಡಿ ನಾನು ನಿಮ್ಮ ಬೆದರಿಕೆಗೆ ಜಗ್ಗಲ್ಲ‌ ಬಗ್ಗಲ್ಲ ಎಂದು ಹೇಳಿದರು.

 

RELATED ARTICLES

Related Articles

TRENDING ARTICLES