ಬೆಂಗಳೂರು : ಪತ್ನಿ ಮೇಲೆ ಅನುಮಾನ ಪಟ್ಟ ಪತಿರಾಯನೊಬ್ಬ ಹೆಂಡತಿ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದು, ನಂತರ ತಾನೂ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಇದನ್ನು ನೋಡಿದ ಸ್ಥಳೀಯರು ಇಬ್ಬರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ಮಾಹಿತಿ ದೊರೆತಿದೆ.
ಎರಡು ವರ್ಷದ ಹಿಂದೆ ಮದುವೆಯಾಗಿದ್ದ ಪ್ರಭು(26) ಮತ್ತು ಪ್ರಿಯಾಂಕಾ(24) ಕೊತ್ತನೂರಿನ ಮಾರಮ್ಮನ ದೇಗುಲ ಬಳಿಯಲ್ಲಿನ ಮನೆಯೊಂದರಲ್ಲಿ ವಾಸವಾಗಿದ್ದರು. ಆದರೆ ಇತ್ತೀಚೆಗೆ ಪತಿ ಫ್ರಭು ಪತ್ನಿ ಮೇಲೆ ಅನುಮಾನ ಪಟ್ಟು ಜಗಳ ಮಾಡುತ್ತಿದ್ದನು ಎಂದು ಮಾಹಿತಿ ದೊರೆತಿದೆ.
ಆದರೆ ಗುರುವಾರ (ನ.28) ಮತ್ತೆ ಫ್ರಭು ಪತ್ನಿ ಮೇಲೆ ಜಗಳ ಮಾಡಿದ್ದು ಪತ್ನಿ ಮೇಲೆ ಪೆಟ್ರೋಲ್ ಸುರಿದು, ತಾನೂ ಸುರಿದುಕೊಂಡಿದ್ದಾನೆ. ಫ್ರಭು ಬೆಂಕಿಹಚ್ಚಿಕೊಂಡಿದ್ದು, ಬೆಂಕಿ ಪತ್ನಿ ಪ್ರಿಯಾಂಕಗು ವ್ಯಾಪಿಸಿದೆ. ಬೆಂಕಿಯ ಉರಿ ತಾಳಲಾರದೆ ಫ್ರಭು ಮನೆಯಿಂದ ಹೊರಗೆ ಓಡಿ ಬಂದಿದ್ದು. ಸ್ಥಳೀಯ ನಿವಾಸಿಗಳು ಇಬ್ಬರನ್ನು ರಕ್ಷಿಸಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಇಬ್ಬರಿಗೂ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು. ಆರೋಪಿ ಫ್ರಭು ಮೇಲೆ ಕೋಣನ ಕುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.