Thursday, January 9, 2025

ಚುನಾವಣ ಆಯೋಗದಿಂದ ರಾಹುಲ್​ಗೆ ಓಪನ್​ ಚಾಲೆಂಜ್​ : ಮತಯಂತ್ರ ಪರಿಶೀಲಿಸಲು ಆಹ್ವಾನ

ಮುಂಬೈ : ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಎಲೆಕ್ಟ್ರಾನಿಕ್ ಓಟಿಂಗ್ ಮಷಿನ್​ (EVM) ಬಗ್ಗೆ ಕಾಂಗ್ರೆಸ್​ ಅನುಮಾನ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ, ಡಿಸೆಂಬರ್ 3ರಂದು ಮತಯಂತ್ರಗಳ ಪರಿಶೀಲನೆ ಹಾಗು ವಿವಿ ಪ್ಯಾಟ್​ ಮತಪತ್ರಗಳನ್ನು ಎಣಿಕೆ ಮಾಡಿ ತಾಳೆ ಹಾಕಲು ಚುನಾವಣಾ ಆಯೋಗ ನಿರ್ಧರಿಸಿದೆ.

ಈ ಪ್ರಕ್ರಿಯೆಯನ್ನು ಸಾಕ್ಷೀಕರಿಸಲು ರಾಹುಲ್ ಗಾಂಧಿ ನೇತೃತ್ವದ ಕಾಂಗ್ರೆಸ್​ ನಿಯೋಗಕ್ಕೂ ಸಹ ಆಹ್ವಾನ ನೀಡಲಾಗಿದೆ. ಈಗಾಗಲೇ ಮತದಾನದ ಪ್ರಮಾಣ ಕುರಿತಂತೆ ತಾನು ನೀಡಿರುವ ಅಂಕಿ ಅಂಶಗಳು ನಿಖರವಾಗಿವೆ. ಸಂಜೆ 5 ಗಂಟೆಯ ವೇಳೆಗೆ ಮತದಾನದ ಅಂಕಿ ಅಂಶಗಳು ಬರುವುದು ಸ್ವಲ್ಪ ತಡವಾಗಿದ್ದು ಗೊಂದಲಗಳಿಗೆ ಕಾರಣವಾಗಿತ್ತು.

ಈ ಗೊಂದಲವನ್ನು ನಿವಾರಿಸಲು ಈಗಾಗಲೇ ಆಯೋಗ ಪ್ರಯತ್ನಿಸಿದೆ. ಹಾಗಿದ್ದೂ ಸಹ ಕಾಂಗ್ರೆಸ್​ ಸೇರಿದಂತೆ ಕೆಲವು ರಾಜಕೀಯ ಪಕ್ಷಗಳು ಇವಿಎಂಗಳ ಕಾರ್ಯ ದಕ್ಷತೆಯ ಮೇಲೆ ಅನುಮಾನ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ, ಅವರ ಸಮ್ಮುಖದಲ್ಲೇ ಇವಿಎಂಗಳ ಪರಿಶೀಲನೆ ನಡೆಸಲಾಗುವುದು ಎಂದು ಮಹಾರಾಷ್ಟ್ರದ ಮುಖ್ಯ ಚುನಾವಣಾಧಿಕಾರಿ ತಿಳಿಸಿದ್ದಾರೆ.

ಈಗಾಗಲೇ ಕಾಂಗ್ರೆಸ್​ ಪಕ್ಷದ ನಾಯಕರು ಇವಿಎಂ ಕುರಿತು ರಾಷ್ಟ್ರದಾದ್ಯಂತ ಅಭಿಯಾನ ಆರಂಭಿಸಲು ಯೋಜನೆ ರೂಪಿಸಿದ್ದು. ಇದಕ್ಕೆ ನೆನ್ನೆ ನಡೆದ ಕಾಂಗ್ರೆಸ್​ ಕಾರ್ಯಕಾರಣಿ ಸಭೆಯು ಒಪ್ಪಿಗೆ ಸೂಚಿಸಿದೆ. ಈ ಸಂದರ್ಭದಲ್ಲಿ ಚುನಾವಣಾ ಆಯೋಗವು ಇಂತಹ ಹೇಳಿಕೆ ನೀಡಿರುವುದು ಮಹತ್ವ ಪಡೆದುಕೊಂಡಿದೆ.

RELATED ARTICLES

Related Articles

TRENDING ARTICLES