Tuesday, January 7, 2025

ನಟ ಜೈದ್​ ಖಾನ್​ ಕಿರುಕುಳ : ಕಲ್ಟ್​ ಸಿನಿಮಾದ ಡ್ರೋನ್​ ಟೆಕ್ನಿಷಿಯನ್​ ಆತ್ಮಹತ್ಯೆಗೆ ಯತ್ನ

ಬೆಂಗಳೂರು : ಕಲ್ಟ್​ ಸಿನಿಮಾದ ನಾಯಕ ನಟ ಜೈದ್​ ಖಾನ್ ಮತ್ತು ಸಿನಿಮಾದ ನಿರ್ದೇಶಕ ಅನಿಲ್​​ ಮೇಲೆ ಗಂಭೀರ ಆರೋಪ ಬಂದಿದ್ದು. ಇವರಿಂದ ಅನ್ಯಾಯವಾಗಿದೆ ಎಂದು ಆರೋಪಿಸಿ ಸಿನಿಮಾದ ಡ್ರೋನ್​ ಟೆಕ್ನೀಷಿಯನ್ ಸಂತೋಶ್​ ​ಎಂಬುವವರು ಆತ್ಮಹತ್ಯಗೆ ಯತ್ನಿಸಿದ್ದಾರೆ.

ಡ್ರೋನ್ ಟೆಕ್ನೀಷಿಯನ್​ ಸಂತೋಷ್​ ಸ್ವಂತ ಡ್ರೋನ್​ ಹೊಂದಿದ್ದು.25 ಲಕ್ಷ ರೂಪಾಯಿ ಸಾಲಸೂಲಾ ಮಾಡಿ ಡ್ರೋನ್​​ ಖರೀದಿ ಮಾಡಿದ್ದರು. ಮಾರ್ಟಿನ್​, ಯುವ ಸೇರಿದಂತೆ  ಹಲವು ಸಿನಿಮಾಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿರುವ ಸಂತೋಶ್​, ಪ್ರತಿ ದಿನದ ಶೂಟಿಂಗ್​ಗೆ 25 ಸಾವಿರ ಚಾರ್ಜ್ ಮಾಡುತ್ತಿದ್ದರು.

ಆದರೆ ಕಳೆದ 25 ರಂದು ಚಿತ್ರದುರ್ಗದಲ್ಲಿ ಕಲ್ಟ್​​ ಸಿನಿಮಾದ ಶೂಟಿಂಗ್​ ನಡೆಯುತ್ತಿದ್ದ ವೇಳೆ ಸಿನಿಮಾದ ನಿರ್ದೇಶಕರ ಒತ್ತಾಯದ ಮೇರೆಗೆ ರಿಸ್ಕ್​ ತೆಗೆದುಕೊಂಡು ಸಂತೋಶ್ ಚಿತ್ರೀಕರಣ ನಡೆಸುತ್ತಿದ್ದರು. ಈ ವೇಳೆ ಡ್ರೋನ್​ ವಿಂಡ್​ ಫ್ಯಾನ್​ಗೆ ತಗುಲಿ ಪೀಸ್​ ಪೀಸ್​ ಆಗಿದೆ. ಇದಾದ ಬಳಿಕ ಸಂತೋಷ್​ ತಮ್ಮ ಚಿತ್ರ ತಂಡದ ಬಳಿ ನಷ್ಟ ಕಟ್ಟಿಕೊಡುವಂತೆ ಕೇಳಿಕೊಂಡಿದ್ದರು. ಆದರೆ ಚಿತ್ರತಂಡ ಇದರ ಬಗ್ಗೆ ಕಿವಿಕೊಡದಿದ್ದಾಗ ಚಿತ್ರದ ನಿರ್ಮಾಣ ಮಾಡುತ್ತಿದ್ದ ಜೈದ್ ಖಾನ್​ ಬಳಿ ಹಣ ನೀಡುವಂತೆ ಸಂತೋಷ್ ಕೇಳಿಕೊಂಡಿದ್ದನು ಎಂದು ಮಾಹಿತಿ ದೊರೆತಿದೆ.

ಆದರೆ ನಟ ಜೈದ್ ಖಾನ್​ ಸಂತೋಷ್​​ ಬಳಿ ವೈಟ್​ ಪೇಪರ್​ ಮೇಲೆ ಸಹಿ ಮಾಡಿಸಿಕೊಂಡು, ಸುಮಾರು ಒಂದುವರೆ  ಲಕ್ಷ ಮೌಲ್ಯದ ಮೆಮೊರಿ ಕಾರ್ಡ್​ ಅನ್ನು ಕಿತ್ತುಕೊಂಡಿದ್ದಾರೆ ಎಂದು ಸಂತ್ರಸ್ಥ ಸಂತೋಷ್​ ಆರೋಪಿಸಿದ್ದಾರೆ. ಇದರಿಂದ ನೊಂದ ಸಂತೋಷ್ ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎಂದು ಮಾಹಿತಿ ದೊರೆತಿದೆ.

ಸಂತೋಷ್ ಅಕ್ಕ ಮಾಗಡಿ ರಸ್ತೆ ಪೋಲಿಸ್​ ಠಾಣೆಗೆ ದೂರು ನೀಡಲು ಬಂದಿದ್ದು, ಆದರೆ ಪೋಲಿಸರು ಕೂಡ ದೂರು ಸ್ವೀಕರಿಸಿದೆ ವಾಪಾಸು ಕಳುಹಿಸಿದ್ದಾರೆ ಎಂದು ತಿಳಿದುಬಂದಿದೆ. ಫಿಲ್ಮ್​ ಛೇಂಬರ್​ನಲ್ಲಿ ಡ್ರೋನ್​ ಟೆಕ್ನಿಷಿಯನ್​ಗಳಿಗೆ ಅಧಿಕೃತ ಮೆಂಬರ್ ಶಿಪ್​ ಇಲ್ಲದ ಕಾರಣ ಫಿಲ್ಮಂ ಛೇಂಬರ್​ನಿಂದಲೂ ಸಹಾಯ ದೊರೆಯುತ್ತಿಲ್ಲ ಎಂದು  ಮಾಹಿತಿ ದೊರೆತಿದೆ.

 

RELATED ARTICLES

Related Articles

TRENDING ARTICLES