ಕಲಬುರಗಿ : ವರದಕ್ಷಿಣೆ ಕಿರುಕುಳ ಕೇಸ್ನಲ್ಲಿ ಜೀವಾವಧಿ ಶಿಕ್ಷೆಗೊಳಗಾಗಿದ್ದ ಅಜ್ಜಿ ನಾಗಮ್ಮ ಎಂಬುವವರಿಗೆ ನ್ಯಾಯಾಲಯ ಪೆರೋಲ್ ನೀಡಿದ್ದು. ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದ ನಾಗಮ್ಮ ಹಾಸಿಗೆ ಬಿಟ್ಟು ಏಳಲಾದರ ಸ್ಥಿತಿಯಲ್ಲಿದ್ದರು ಎಂದು ಮಾಹಿತಿ ದೊರೆತಿದೆ.
ವರದಕ್ಷಿಣೆ ಕಿರುಕುಳ ನೀಡಿದ್ದ ಪ್ರಕರಣದಲ್ಲಿ ಕಳೆದ 11 ತಿಂಗಳಿಂದ ವೃದ್ದೆ ನಾಗಮ್ಮ ಕಲಬುರಗಿ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದಳು. ಆದರೆ ಇತ್ತೀಚೆಗೆ ವಯೋಸಹಜ ಖಾಯಿಲೆಯಿಂದ ವೃದ್ದೆಯ ಆರೋಗ್ಯ ಕ್ಷೀಣಿಸುತ್ತಿತ್ತು. ಹಾಸಿಗೆ ಬಿಟ್ಟು ಮೇಲೆ ಏಳಲು ಆಗದ ಸ್ಥಿತಿಯಲ್ಲಿದ್ದ ವೃದ್ದೆ ನಾಗಮ್ಮ ಮಲಮೂತ್ರಕ್ಕೂ ಹೋಗದ ಸ್ಥಿತಿಯಲ್ಲಿದ್ದರು. ಜೈಲಿನ ಮಹಿಳಾ ಸಿಬ್ಬಂದಿಗಳೆ ವೃದ್ದೆಯನ್ನು ಮಾತೃ ವಾತ್ಸೊಲ್ಯದಿಂದ ನೋಡಿಕೊಳ್ಳುತ್ತಿದ್ದರು ಎನ್ನಲಾಗಿದೆ.
ಆದರೆ ಇತ್ತೀಚೆಗೆ ಉಪ ಲೋಕಾಯುಕ್ತ ನ್ಯಾ. ಬಿ.ವೀರಪ್ಪ ಅವರು ಜೈಲಿಗೆ ಭೇಟಿ ಕೊಟ್ಟ ಸಂದರ್ಭದಲ್ಲಿ ಅಜ್ಜಿ ನಾಗಮ್ಮ ಸ್ಥಿತಿಯನ್ನು ಕಂಡು ಮರುಗಿದ್ದರು ಹಾಗೂ ಸುಪ್ರಿಂ ಕೋರ್ಟ್ಗೆ ಮರುಪರಿಶೀಲನೆ ನಡೆಸವಂತೆ ಅರ್ಜಿ ಸಲ್ಲಿಸುವಂತೆ ಸೂಚಿಸಿದ್ದರು. ಆದರೆ ಈ ಪ್ರಕ್ರಿಯೆ ಇನ್ನು ಪೂರ್ಣಗೊಳ್ಳದೆ ಇರುವುದರಿಂದ ಜೈಲು ಅಧಿಕಾರಿಗಳು ಅಜ್ಜಿ ನಾಗಮ್ಮನನ್ನು ಪೆರೋಲ್ ಮೇಲೆ ಬಿಡುಗಡೆ ಮಾಡಿದ್ದಾರೆ.
90 ದಿನಗಳ ಪೆರೋಲ್ ಮೇಲೆ ಸದ್ಯ ಅಜ್ಜಿಯನ್ನು ಜೈಲಿನಿಂದ ಬಿಡುಗಡೆ ಮಾಡಿದ್ದು. ಕುಟುಂಬಸ್ಥರು ಬಂದು ಅಜ್ಜಿಯನ್ನು ಕರೆದುಕೊಂಡು ಹೋಗಿದ್ದಾರೆ. ಮಡೆಯಲೂ ಹಾಗದ ಅಜ್ಜಿ ನಾಗಮ್ಮಳನ್ನು ಕುಟುಂಬಸ್ಥರು ಹೊತ್ತುಕೊಂಡು ಬಂದು ವಾಹನದಲ್ಲಿ ಮಲಗಿಸಿರುವುದು ಭಾವನಾತ್ಮಕ ಸನ್ನಿವೇಶಕ್ಕೆ ಕಾರಣವಾಗಿದೆ.