ತುಮಕೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ನಾನು ಎಣ್ಣೆ ಸೀಗೆಕಾಯಿ ಎಂದು ಖಾಸಗಿ ಚಾನೆಲ್ನಲ್ಲಿ ಹೇಳಿದ್ದಾರೆ ಎಂದು ಗೃಹ ಸಚಿವ ಡಾ.ಜಿ ಪರಮೇಶ್ವರ್ ಅವರು ಹೇಳಿದರು.
ಹಾಸನದಲ್ಲಿ ಅಹಿಂದ ಸಮಾವೇಶ ವಿಚಾರದ ಬಗ್ಗೆ ಮಾತಾಡಿದ ಅವರು, ಸಿದ್ದರಾಮಯ್ಯ ಹಾಗೂ ನಾನು ಎಣ್ಣೆ ಸೀಗೆಕಾಯಿ ಎಂದು ಖಾಸಗಿ ಚಾನೆಲ್ನಲ್ಲಿ ಹೇಳಿದ್ದಾರೆ. 5ನೇ ತಾರೀಖಿನ ಕಾರ್ಯಕ್ರಮದ ಬಗ್ಗೆ ನನಗೆ ಗೊತ್ತಿಲ್ಲ ಅಂತ ಮಾಧ್ಯಮಕ್ಕೆ ಹೇಳಿದ್ದೆ ಅದಕ್ಕೆ ಎಣ್ಣೆ ಸೀಗೆಕಾಯಿ ಅಂತ ಬರೀತಾರೆ ಎಂದರು.
ಅದುವಲ್ಲದೇ, ನಾವೇ ತುಮಕೂರಿನಲ್ಲೇ ಸ್ವಾಭಿಮಾನಿ ಸಮಾವೇಶ ಮಾಡಲು ಚಿಂತನೆ ಮಾಡಿದ್ದು. ಆಮೇಲಿಂದ ಸಹಕಾರ ಸಚಿವ ಕೆ.ಎನ್ ರಾಜಣ್ಣ ಅವರು ಹಾಸನದಲ್ಲಿ ಮಾಡುತ್ತೇನೆ ಅಂದರು. ಸಿಎಂ ಸಿದ್ದರಾಮಯ್ಯ ನಮ್ಮ ನಾಯಕರು ಅವರ ಜೊತೆ ನಾವು ಇದ್ದೇವೆ. ನಮ್ಮ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ ಎಂದು ಡಾ.ಜಿ. ಪರಮೇಶ್ವರ್ ಅವರು ಸ್ಪಷ್ಟನೆ ನೀಡಿದ್ದಾರೆ.