Friday, January 10, 2025

ಮೈಕ್ರೋ ಫೈನಾನ್ಸ್​​ ಕಿರುಕುಳ : ಕ್ರಿಮಿನಾಶಕ ಸೇವಿಸಿ ಮಹಿಳೆ ಆತ್ಮಹತ್ಯೆ

ಮೈಸೂರು:  ಮೈಕ್ರೋ ಫೈನಾನ್ಸ್​​ನಿಂದ ಮಹಿಳೆಯೊಬ್ಬರು ಸಾಲ ತೆಗೆದುಕೊಂಡು ಅದನ್ನು ತೀರಿಸಲಾಗದೆ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು. ಮೈಸೂರು ಜಿಲ್ಲೆಯ ಹುಣುಸೂರು ತಾಲ್ಲೂಕಿನ ಕಿರಿಯಾಜಿ ಗ್ರಾಮದಲ್ಲಿ ನಡೆದಿದೆ.

ಸುಶೀಲಾ ಎಂಬ 48 ವರ್ಷದ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದು. ಮಹಿಳೆಯು ಫಾರ್ಚೂನ್​​ ಮೈಕ್ರೋ ಫೈನಾನ್ಸ್​​ನಿಂದ ಸಾಲ ಪಡೆದಿದ್ದರು ಪ್ರತಿ ತಿಂಗಳು ಅವಧಿಗೆ ಸರಿಯಾಗಿ ಸಾಲದ ಕಂತಿನ ಹಣವನ್ನು ಕಟ್ಟುತ್ತಿದ್ದರು. ಆದರೆ ಈ ತಿಂಗಳ ಹಣವನ್ನು ಸರಿಯಾದ ಸಮಯಕ್ಕೆ ಪಾವತಿ ಮಾಡದ ಹಿನ್ನಲೆ ಫೈನಾನ್ಸ್​ನವರು ಮನೆಯ ಬಳಿ ಬಂದು ಜಗಳ ಮಾಡಿದ್ದರು ಎಂದು ಮಾಹಿತಿ ದೊರೆತಿದೆ.

ಫೈನಾನ್ಸ್​ ಅಧಿಕಾರಿಗಳು ಜಗಳ ಮಾಡಿದ ಹಿನ್ನಲೆಯಲ್ಲಿ ಮನನೊಂದ ಮಹಿಳೆ ಕ್ರಿಮಿನಾಶಕದ ಗುಳಿಗೆಯನ್ನು ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು. ಮಹಿಳೆಯನ್ನು ಕೆ.ಆರ್​ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಮಹಿಳೆ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದು. ಘಟನೆ ಸಂಬಂಧ ಹುಣಸೂರು ಪೋಲಿಸ್​ ಠಾಣೆಯಲ್ಲಿ ಮಹಿಳೆಯ ಪುತ್ರ ನವೀನ್​ ಪ್ರಕರಣ ದಾಖಲಿಸಿದ್ದಾರೆ ಎಂದು ಮಾಹಿತಿ ದೊರೆತಿದೆ.

RELATED ARTICLES

Related Articles

TRENDING ARTICLES