Tuesday, January 7, 2025

ಮೋದಿ ಪಾಕ್​ಗೆ ಹೋಗಿದ್ದು ಸರಿಯಾದರೆ, ಟೀಂ ಇಂಡಿಯಾವೂ ಹೋಗಲಿ: ತೇಜಸ್ವಿಯಾದವ್​

ದೆಹಲಿ: ಚಾಂಪಿಯನ್ಸ್ ಟ್ರೋಫಿಗಾಗಿ ಪಾಕಿಸ್ತಾನಕ್ಕೆ ಕ್ರಿಕೆಟ್ ತಂಡವನ್ನು ಕಳುಹಿಸದಿರುವ ಭಾರತದ ನಿರ್ಧಾರದ ಕುರಿತಾದ ಗಲಾಟೆ ರಾಜಕೀಯ ವಲಯದಲ್ಲಿ ಪ್ರತಿಧ್ವನಿಸಿದೆ. ಹಲವಾರು ವಿರೋಧ ಪಕ್ಷದ ನಾಯಕರು ಕ್ರೀಡೆಯಿಂದ ರಾಜಕೀಯವನ್ನು ದೂರವಿಡುವಂತೆ ಸರ್ಕಾರಕ್ಕೆ ಸೂಚಿಸಿದ್ದಾರೆ. ಇದೀಗ ಆರ್ ಜೆಡಿ ನಾಯಕ, ಮಾಜಿ ಕ್ರಿಕೆಟಿಗ ತೇಜಸ್ವಿ ಯಾದವ್ ಕೂಡಾ ಈ ಬಗ್ಗೆ ಮಾತನಾಡಿದ್ದು, “ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಪಾಕಿಸ್ತಾನಕ್ಕೆ ಭೇಟಿ ನೀಡಬಹುದಾದರೆ, ಬಹುರಾಷ್ಟ್ರಗಳ ಪಂದ್ಯಾವಳಿಗಾಗಿ ತಂಡವು ಗಡಿ ದಾಟಿ ಯಾಕೆ ಹೋಗಬಾರದು” ಎಂದು ಪ್ರಶ್ನಿಸಿದ್ದಾರೆ.

ಚಾಂಪಿಯನ್ಸ್​ ಟ್ರೋಫಿಗೆ ಭಾರತ ತಂಡ ಪಾಕ್​ಗೆ ಹೋಗುವ ವಿಚಾರ !

ಮುಂದಿನ ವರ್ಷ ಫೆಬ್ರವರಿಯಲ್ಲಿ ಪಾಕಿಸ್ತಾನದಲ್ಲಿ ಚಾಂಪಿಯನ್ಸ್​​ ಟ್ರೋಫಿ ನಡೆಯಲಿದ್ದು. ಈ ಪಂದ್ಯಕ್ಕೆ ಭಾರತ ತಂಡ ಪಾಕಿಸ್ತಾನಕ್ಕೆ ಹೋಗದಂತೆ ನಿರ್ಧರಿಸಿದೆ. ಆದರೆ ಈಗ ಅದೇ ವಿಷಯ ರಾಜಕೀಯ ವಲಯದಲ್ಲಿ ಭಾರೀ ಟೀಕೆ ಟಿಪ್ಪಣಿಗೆ ಕಾರಣವಾಗಿದ್ದು. ಆರ್​ಜೆಡಿ ಪಕ್ಷದ  ಶಾಸಕ ತೇಜಸ್ವಿ ಯಾದವ್​ ಪ್ರಧಾನಿಯನ್ನು ಕುಟುಕಿದ್ದಾರೆ.

ಭಾರತ ತಂಡ ಹೈಬ್ರೀಡ್​ ಮಾದರಿಯಲ್ಲಿ ಪಂದ್ಯವನ್ನು ಯುಎಇ, ಅಥವಾ ಶ್ರೀಲಂಕಾದಲ್ಲಿ ಆಯೋಜಿಸುವಂತೆ ಪ್ರಸ್ತಾಪಿಸಿದ್ದು. ಇದರಿಂದಾಗಿ ಪಾಕ್​ ಕ್ರಿಕೆಟ್​ ಮಂಡಳಿಗೆ ತಲೆ ಬಿಸಿ ಹೆಚ್ಚಾಗಿದೆ. ಇದರ ಕುರಿತಾಗಿ ಇಂದು ಪಾಕ್​ ಕ್ರಿಕೆಟ್​ ಮಂಡಳಿಯು ಸೇರಿದಂತೆ ಪ್ರಮುಖ ಕ್ರಿಕೆಟ್​ ಮಂಡಳಿಗಳ ಜೊತೆ ಐಸಿಸಿ ಪ್ರಮುಖ ಸಭೆ ನಡೆಸುತ್ತಿದ್ದು. ಇದರ ಕುರಿತಾಗಿ ಅಂತಿಮ ನಿರ್ಧಾರ ಕೈಗೊಳ್ಳುತ್ತಾರೆ ಎಂದು ಮಾಹಿತಿ ದೊರೆತಿದೆ.

RELATED ARTICLES

Related Articles

TRENDING ARTICLES