Friday, January 10, 2025

ಭತ್ತ ಬೆಳೆದು ಮಾದರಿಯಾದ ಸರ್ಕಾರಿ ಶಾಲಾ ವಿಧ್ಯಾರ್ಥಿನಿಯರು

ಕೊಪ್ಪಳ: ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬ ಗಾದೆಯನ್ನು ಸಾಮಾನ್ಯವಾಗಿ ನಾವು ಕೇಳಿರುತ್ತೇವೆ, ಆದರೆ ಇಲ್ಲೊಂದು ಶಾಲೆಯ ಮಕ್ಕಳು ಈ ಗಾದೆಯನ್ನು ನಿಜವಾಗಿಸಿದ್ದಾರೆ. ಓದಿನ ಜೊತೆಗೆ ಕೃಷಿ ಚಟುವಟಿಕೆಯಲ್ಲು ಆಸಕ್ತಿ ಹೊಂದಿರುವ ವಿಧ್ಯಾರ್ಥಿನಿಯರು ಸುಮಾರು ಒಂದುವರೆ ಎಕರೆ ಭೂಮಿಯಲ್ಲಿ ಭತ್ತ ಬೆಳೆದು ಇತರೆ ವಿಧ್ಯಾರ್ಥಿಗಳಿಗೆ ಮಾದರಿಯಾಗಿದ್ದಾರೆ.

ಕೊಪ್ಪಳದ, ಕಾರಟಗಿ ತಾಲೂಕಿನ, ಸಿದ್ದಾಪುರದ ಕಸ್ತೂರ ಬಾ ಗಾಂಧಿ ಬಾಲಿಕ ವಿದ್ಯಾಲಯದ ಮಕ್ಕಳಿಂದ ಈ ಸಾಧನೆಯಾಗಿದ್ದು. ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಯಲ್ಲೂ ಆಸಕ್ತಿ ಹೊಂದಿರುವ ಉರ್ದು ಶಾಲಾ ವಿಧ್ಯಾರ್ಥಿನಿಯರು ರೈತರನ್ನೆ ಬೆರಗಾಗಸುವ ರೀತಿಯಲ್ಲಿ ಕೃಷಿ ಮಾಡಿದ್ದಾರೆ. ಸುಮಾರು 1.5 ಎಕರೆ ಭೂಮಿಯಲ್ಲಿ ಭತ್ತವನ್ನು ಬೆಳೆದಿರುವ ವಿಧ್ಯಾರ್ಥಿನಿಯರಿಗೆ ಶಾಲೆಯ ಮುಖ್ಯಶಿಕ್ಷಕ ಚಂದ್ರಶೇಖರ್​ ಗಣವಾರಿ ಸಾಥ್​ ನೀಡಿದ್ದಾರೆ.

ಇನ್ನೇನು ಕೆಲವೆ ದಿನಗಳಲ್ಲಿ ಭತ್ತವನ್ನು ಕಟಾವು ಮಾಡಲಿದ್ದು. ಸುಮಾರು 60ಕ್ಕೂ ಹೆಚ್ಚು ಚೀಲ ಭತ್ತದ ಇಳುವರಿಯಯಾಗುತ್ತದೆ ಎಂಬ ನಿರೀಕ್ಷೆಯಲ್ಲಿದ್ದಾರೆ. ಶಾಲಾ ಮಕ್ಕಳ ಈ ಕಾರ್ಯಕ್ಕೆ ಅಕ್ಕ ಪಕ್ಕದ ಗ್ರಾಮದ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇಂದಿನ ಡಿಜಿಟಲ್​ ಯುಗದಲ್ಲಿ ಮಕ್ಕಳು ಮೊಬೈಲ್​, ಇಂಟರ್​ನೆಟ್​ ಎಂದು ಮನೆಯಿಂದ ಹೊರಗೆ ಬರದ ಕಾಲದಲ್ಲಿ ಈ ಮಕ್ಕಳು ಇಂತಹ ಕಾರ್ಯಕ್ಕೆ ಕೈ ಹಾಕುತ್ತಿರುವುದು ನಿಜಕ್ಕೂ ಮಾದರಿಯಾಗಿದೆ ಎಂದೇ ಹೇಳಬಹುದು.

 

RELATED ARTICLES

Related Articles

TRENDING ARTICLES