Friday, January 10, 2025

ಪ್ರವಾಸಕ್ಕೆ ತೆರಳಿದ್ದ ಶಾಲಾ ಬಸ್​​ ಪಲ್ಟಿ : ಪ್ರಾಣಾಪಾಯದಿಂದ ಪಾರಾದ 60 ವಿಧ್ಯಾರ್ಥಿಗಳು

ಕೊಪ್ಪಳ: ಶಾಲಾ ಪ್ರವಾಸಕ್ಕೆಂದು ತೆರಳಿದ್ದ ಬಸ್​ ಪಲ್ಟಿಯಾಗಿದ್ದು. ಕೊಪ್ಪಳದ, ಗಂಗಾವತಿ ತಾಲ್ಲೂಕಿನ ಪ್ರಗತಿನಗರ ಗ್ರಾಮದಲ್ಲಿ ಘಟನೆ ನಡೆದಿದೆ. ಬಸ್​ನಲ್ಲಿದ್ದ ಸುಮಾರು 60 ವಿಧ್ಯಾರ್ಥಿಗಳು ಪ್ರಾಣಾಪಾಯದಿಂದ ಪಾರಗಿದ್ದು. ಸ್ಥಳೀಯ ಸಾರಿಗೆ ಆಧಿಕಾರಿಗಳು ಮತ್ತೊಂದು ಬಸ್​ ವ್ಯವಸ್ಥೆ ಮಾಡಿ ವಿಧ್ಯಾರ್ಥಿಗಳನ್ನು  ಕಳುಹಿಸಿದ್ದಾರೆ ಎಂದು ಮಾಹಿತಿ ತಿಳಿದುಬಂದಿದೆ.

ಸಾಮಾನ್ಯವಾಗಿ ಅಕ್ಟೋಬರ್​ನಿಂದ ಡಿಸೆಂಬರ್​ ಅವಧಿಯಲ್ಲಿ ಶಾಲಾ – ಕಾಲೇಜುಗಳು ಶಾಲಾ ಶೈಕ್ಷಣಿಕ ಪ್ರವಾಸವನ್ನು ಕೈಗೊಳ್ಳತ್ತಾರೆ. ಅದೇ ರೀತಿ ಇಲ್ಲೊಂದು ಶಾಲೆಯು ಕೂಡ ಮಕ್ಕಳನ್ನು ಪ್ರವಾಸಕ್ಕೆಂದು ಕರೆದೊಯ್ಯದಿದ್ದು. ಚಾಲಾಕನ ನಿರ್ಲಕ್ಷದಿಂದ ಬಾರೀ ದುರಂತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದೆ.

ಗುರುಮಟ್​ಕಲ್​ನಿಂದ  ಹಂಪೆಗೆ ತೆರಳುತ್ತಿದ್ದ ಪ್ರವಾಸದ ಬಸ್​ ಗಂಗಾವತಿಯ ಪ್ರಗತಿನಗರದ ಬಳಿಯಲ್ಲಿ ಚಾಲಕನ ನಿರ್ಲಕ್ಷದಿಂದ ಕಂದಕಕ್ಕೆ ಉರುಳಿದ್ದು. ಬಸ್​ ಪಲ್ಟಿಯಾಗಿದೆ. ಬಸ್​ನಲ್ಲಿದ್ದ 60 ವಿಧ್ಯಾರ್ಥಿಗಳು ಸೇರಿದಂತೆ 7 ಜನ ಶಿಕ್ಷಕರು ಪ್ರಾಣಾಪಾಯದಿಂದ ಪಾರಾಗಿದ್ದು. ಸ್ಥಳಕ್ಕೆ ದಾವಿಸಿದ ಪೋಲಿಸರು ಮತ್ತು ಸಾರಿಗೆ ಅಧಿಕಾರಿಗಳು ಬದಲಿ ಬಸ್​ ವ್ಯವಸ್ಥೆ ಕಲ್ಪಿಸಿ ಕಳುಹಿಸಿದ್ದಾರೆ ಎಂದು ಮಾಹಿತಿ ದೊರೆತಿದೆ.

 

RELATED ARTICLES

Related Articles

TRENDING ARTICLES