Thursday, November 28, 2024

ಜಮೀನು ವ್ಯಾಜ್ಯ : ಪೆಟ್ರೋಲ್ ಸುರಿದು ಕುಟುಂಬಸ್ಥರ ಸಾಮೂಹಿಕ ಹತ್ಯೆಗೆ ಯತ್ನ

ಕಲಬುರಗಿ : ಜಮೀನು ವ್ಯಾಜ್ಯಕ್ಕೆ ಇಡೀ ಕುಟುಂಬವನ್ನು ಪೆಟ್ರೋಲ್​ ಹಾಕಿ ಕೊಲೆ ಮಾಡಲು ಯತ್ನಿಸಿದ ಘಟನೆ ಕಲಬುರಗಿ ತಾಲ್ಲೂಕಿನ ಕಡಣಿ ಗ್ರಾಮದಲ್ಲಿ ನಡೆದಿದ್ದು. ಶಿವಲಿಂಗಪ್ಪ ಕರಿಕಲ್ ಎಂಬ ವ್ಯಕ್ತಿ ಈ ಕೃತ್ಯ ಮಾಡಿದ್ದಾನೆ ಎಂದು ಮಾಹಿತಿ ದೊರೆತಿದೆ.  ಕೃತ್ಯ ಸಂಬಂಧ ಫರಹತಾಬಾದ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು. ಪೋಲಿಸರು ತನಿಖೆ ನಡೆಸುತ್ತಿದ್ದಾರೆ ಎಂದು ಮಾಹಿತಿ ದೊರೆತಿದೆ.

ಶಿವಲಿಂಗಪ್ಪ ಕರಿಕಲ್​ ಎಂಬ ವ್ಯಕ್ತಿಯು 4 ವರ್ಷಧ ಹಿಂದೆ  4 ಎಕರೆ ಜಮೀನನ್ನು ಗುಂಡೇರಾವ್​ ಎಂಬಾತನಿಗೆ ಮಾರಾಟ ಮಾಡಿದ್ದನು. ಅದಕ್ಕೆ ಪ್ರತಿಯಾಗಿ ಗುಂಡೇರಾವ್​ 13 ಲಕ್ಷ ಹಣವನ್ನು ಅಡ್ವಾನ್ಸ್​ ರೀತಿಯಲ್ಲಿ ಶಿವಲಿಂಗಪ್ಪನಿಗೆ ನೀಡಿದ್ದನು. ಆದರೆ ಇತ್ತೀಚೆಗೆ ಜಮೀನು ರಿಜಿಸ್ಟೇರೇಶ್​ ವಿಚಾರಾವಾಗಿ ಇವರಿಬ್ಬರ ನಡುವೆ ವಿವಾದ ಉಂಟಾಗಿತ್ತು. ಶಿವಲಿಂಗಪ್ಪ ಜಮೀನನ್ನು ರಿಜಿಸ್ಟೇರಷನ್​ ಮಾಡಿ ಕೊಡಲು ವಿರೋಧಿಸುತ್ತಿದ್ದನು. ಇದೇ ಕಾರಣಕ್ಕೆ ಇಂದು ಗುಂಡೇರಾವ್​ ಕರಿಕಲ್​ನ ಮನೆಗೆ ಬೆಂಕಿ ಹಚ್ಚಿ ಕೊಲೆ ಮಾಡಲು ಯತ್ನಿಸಿದ್ದಾನೆ ಎಂದು ತಿಳಿದುಬಂದಿದೆ.

ಇಂದು ಬೆಳಿಗ್ಗೆ 9 ಗಂಟೆಗೆ ಸುಮಾರಿಗೆ ಮನೆ ಬಳಿ ಬಂದ ಶಿವಲಿಂಗಪ್ಪ ಕರಿಕಲ್​ ಮನೆಗೆಲ್ಲ ಪೆಟ್ರೋಲ್ ಹಾಕಿದ್ದಾನೆ. ಇದನ್ನು ನೋಡಿದ ಗುಂಡೇರಾವ್​ ಕುಟುಂಬಸ್ಥರು ಮನೆಯ ಬಾಗಿಲನ್ನು ಹಾಕಿಕೊಂಡಿದ್ದಾರೆ. ಆದರೆ ಇದಕ್ಕೂ ಜಗ್ಗದ ಶಿವಲಿಂಗಪ್ಪ ಬಟ್ಟೆಗಳನ್ನು ಪೆಟ್ರೊಲ್​ನಲ್ಲಿ ನೆನೆಸಿ ಮನೆಯಲ್ಲಿ ಎಸೆದು ಬೆಂಕಿ ಹಚ್ಚಿದ್ದಾನೆ.

ಇದನ್ನು ನೋಡಿದ ಗ್ರಾಮಸ್ಥರು ಮನೆಯ ಬಾಗಿಲನ್ನು ಹೊಡೆದು ಗುಂಡೇರಾವ್​ ಮತ್ತು ಆತನ ಕುಟುಂಬಸ್ಥರನ್ನು ರಕ್ಷಿಸಿದ್ದಾರೆ. ಬೆಂಕಿಯ ಕೆನ್ನಾಲಿಗೆಯಿಂದ ಕೆಲವರು ಅಸ್ವಸ್ಥರಾಗಿದ್ದು. ಅವರನ್ನು ಕಲಬುರಗಿ ಜಿಲ್ಲಾಸ್ಪತ್ರೆಗೆ ದಾಖಲು ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ಘಟನಾ ಸ್ಥಳಕ್ಕೆ ಕಲಬುರಗಿ ಸಿಟಿ ಪೊಲೀಸ್ ಕಮಿಷನರ್ ಡಾ:ಶರಣಪ್ಪ ಎಸ್ ಡಿ ಭೇಟಿ ನೀಡಿ ಪರೀಶೀಲನೆ ನಡೆಸಿದ್ದಾರೆ. ಮನೆಯು ಭಾಗಶಃ ಸುಟ್ಟು ಕರಕಲಾಗಿದ್ದು. ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ.

 

RELATED ARTICLES

Related Articles

TRENDING ARTICLES