Monday, January 6, 2025

ಯತ್ನಾಳ್ ವಿರುದ್ದ ಕ್ರಮಕ್ಕೆ ಆಗ್ರಹಿಸಿ ರಕ್ತದಲ್ಲಿ ಸಹಿ ಮಾಡಿ ಪತ್ರ ಬರೆದ ಬಿಜೆಪಿ ಕಾರ್ಯಕರ್ತರು

ಮಂಡ್ಯ : ಬಸನಗೌಡಪಾಟೀಲ್​ ಯತ್ನಾಳ್​ ವಿರುದ್ದ ಮಂಡ್ಯ ಬಿಜೆಪಿ ಕಾರ್ಯಕರ್ತರು ಸಿಡಿದೆದಿದ್ದು. ಯತ್ನಾಳ್​ ವಿರುದ್ದ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಬಿಜೆಪಿ ಹೈಕಮಾಂಡ್​ಗೆ ಪತ್ರ ಬರೆದಿದ್ದಾರೆ. ರಕ್ತದ ಸಹಿಯ ಮೂಲಕ ಪತ್ರ ಬರೆದಿದ್ದು. ಯತ್ನಾಳ್​ ವಿರುದ್ದ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಅಮಿತ್​ ಶಾಗೆ ಪತ್ರ ಬರೆದಿದ್ದಾರೆ .

ಬಿಜೆಪಿ ಪಕ್ಷ ಇಬ್ಬಾಗವಾಗಿದ್ದು ಬಸನಗೌಡ್​ ಯತ್ನಾಳ್​ ಸೇರಿದಂತೆ ಅನೇಕ ನಾಯಕರು ವಿಜಯೇಂದ್ರರ ನಾಯಕತ್ವವನ್ನು ಒಪ್ಪಿಕೊಳ್ಳದೆ ಅವರ ವಿರುದ್ದವಾಗಿ ಮಾತನಾಡುತ್ತಿದ್ದಾರೆ. ಅಷ್ಟು ಸಾಲದು ಎಂಬಂತೆ ಪ್ರತ್ಯೇಕ ಹೋರಾಟ ಮಾಡುತ್ತಿದ್ದು, ರಾಜ್ಯದಲ್ಲಿ ನಿಜವಾಗಿಯೂ ಬಿಜೆಪಿ ಪಕ್ಷ ಅಧಿಕೃತವಾಗಿ ಯಾವುದೂ ಎಂದು ಜನರು ಕೂಡ ಅನುಮಾನಗೊಂಡಿದ್ದಾರೆ.

ಆದರೆ ಈಗ ಇದೆಕ್ಕೆಲ್ಲ ಪೂರ್ಣ ವಿರಾಮ ಇಡಲು ಬಿಜೆಪಿ ಕಾರ್ಯಕರ್ತರು ಸಿದ್ದತೆ ನಡೆಸಿದ್ದು. ಯತ್ನಾಳ್​  ವಿಜಯೇಂದ್ರ ಮತ್ತು ಯಡಿಯೂರಪ್ಪನವರ ವಿರುದ್ದವಾಗಿ ಮಾತನಾಡದಂತೆ ಕಡಿವಾಣ ಹಾಕಲು ಹೈಕಮಾಂಡ ನಾಯಕರಿಗೆ ಪತ್ರ ಬರೆದಿದ್ದಾರೆ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ. ನಡ್ಡಾ ಹಾಗೂ ಅಮಿತ್​ ಷಾಗೆ ಪತ್ರ ಬರೆದಿರುವ ಬಿಜೆಪಿ ಕಾರ್ಯಕರ್ತರು ‘ಯತ್ನಾಳ್​ ವಕ್ಫ್​ ವಿರುದ್ದ ಹೋರಾಟ ಮಾಡುತ್ತಿರುವುದು ಸ್ವಾಗತವಿದೆ, ಆದರೆ ಅವರು ರಾಜ್ಯನಾಯಕರ ವಿರುದ್ದ ಹೇಳಿಕೆ ನೀಡುತ್ತಿರುವುದು ಸರಿಯಲ್ಲ. ತಕ್ಷಣವೆ ಅವರ ಬಾಯಿಗೆ ಕಡಿವಾಣ ಹಾಕಬೇಕು. ಇಲ್ಲದಿದ್ದರೆ ಮುಂದೆ ಆಗುವ ಅನಾಹುತಗಳಿಗೆ ನೀವೆ ಜವಬ್ದಾರಿ ಎಂದು ಬರೆದು ರಕ್ತದಲ್ಲಿ ಸಹಿ ಹಾಕಿ ಮಂಡ್ಯದ ಅಂಚೆ ಕಛೇರಿಯಿಂದ ಪೋಸ್ಟ್​ ಮಾಡಿದ್ದಾರೆ.

 

RELATED ARTICLES

Related Articles

TRENDING ARTICLES