Monday, January 6, 2025

ಮದುವೆಯಾಗಲು ನಿರಾಕರಿಸಿದ ಪ್ರಿಯತಮ : ಇಲಿ ಪಾಷಾಣ ಸೇವಿಸಿದ ಪ್ರೇಯಸಿ ಸಾವು

ಮಂಗಳೂರು : ಪ್ರೀತಿಸಿದ ಯುವಕ ಮದುವೆಯಾಗಲು ನಿರಾಕರಿಸಿದಕ್ಕೆ ಯುವತಿಯೊಬ್ಬಳು ವಿಷ ಕುಡಿದು ಆತ್ಮಹತ್ಯೆಗೆ ಮಾಡಿಕೊಂಡ ಘಟನೆ ಮಂಗಳೂರಿನ, ಬೆಳ್ತಂಗಡಿ ತಾಲೂಕಿನ, ಮಿತ್ತಬಾಗಿಲು ಗ್ರಾಮದಲ್ಲಿ ನಡೆದಿದ್ದು. 17 ವರ್ಷದ ಹೃಷ್ವಿ ಮೃತ ದುರ್ದೈವಿ ಎಂದು ತಿಳಿದು ಬಂದಿದೆ.

ಯುವತಿ ಹೃಷ್ವಿ ತನ್ನ ಸಂಬಂಧಿ ಪ್ರವೀಣ್​ ಎಂಬುವವನ ಜೊತೆ ಪ್ರೀತಿಯಲ್ಲಿ ಬಿದ್ದಿದ್ದಳು. ಯುವಕ ಪ್ರವೀಣನು ಕೂಡ ಯುವತಿಗೆ ಮದುವೆಯಾಗುವುದಾಗಿ ನಂಬಿಸಿ ಆಕೆಯ ಜೊತೆಗೆ ತಿರುಗಾಡುತ್ತಿದ್ದನು. ಮನೆಯವರು ಕೂಡ ಇವರಿಬ್ಬರ ಮದುವೆಗೆ ಒಪ್ಪಿಗೆ ಸೂಚಿಸಿದ್ದರು. ಆದರೆ ಯುವತಿಯು ಇನ್ನುಅಪ್ರಾಪ್ತಳಾಗಿದ್ದರಿಂದ ಮುಂದಿನ ವರ್ಷ ಮದುವೆ ಮಾಡಿಕೊಡೋದಾಗಿ ಯುವತಿ ಮನೆಯವರು ತಿಳಿಸಿದ್ದರು.

ಆದರೆ ಕಳೆದ ಕೆಲವು ದಿನಗಳಿಂದ ಯುವತಿಯೊಂದಿಗಿನ ಸಂಪರ್ಕ ನಿಲ್ಲಿಸಿದ್ದ ಪ್ರಿಯಕರ ಪ್ರವೀಣ. ಯುವತಿಗೆ ಬ್ರೇಕ್​ ಆಪ್​ ಮಾಡಿಕೊಳ್ಳೋಣ ಎಂದು ಹೇಳಿದ್ದನು. ಇದರಿಂದ ಮನನೊಂದ ಯುವತಿ ಇಲಿ ಪಾಷಾಣ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಕಳೆದ ನವೆಂಬರ್ 20 ರಂದು ಚಿಕಿತ್ಸೆ ಫಲಿಸದೆ ಯುವತಿ ಸಾವನ್ನಪ್ಪಿದ್ದಾಳೆ ಎಂದು ಮಾಹಿತಿ ದೊರೆತಿದೆ.

ಯುವತಿ ಸಾವನ್ನಪ್ಪಿದ ವಿಷಯ ತಿಳಿಯುತ್ತಿದ್ದಂತೆ ಪ್ರವೀಣ ತನ್ನ ಪೋನ್​ ಸ್ಚಿಚ್​ ಆಫ್​ ಮಾಡಿಕೊಂಡು ಪರಾರಿಯಾಗಿದ್ದಾನೆ ಎಂದು ಮಾಹಿತಿ ದೊರೆತಿದೆ. ಪ್ರವೀಣನ ವಿರುದ್ದ ಯುವತಿಯ ತಾಯಿ ಬೆಳ್ತಂಗಡಿ  ಪೋಲಿಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು. ಪ್ರಕರಣ ದಾಖಲಿಸಿಕೊಂಡಿರುವ ಪೋಲಿಸರು ಆರೋಪಿಗಾಗಿ ಬಲೆ ಬೀಸಿದ್ದಾರೆ ಎಂದು ತಿಳಿದು ಬಂದಿದೆ.

RELATED ARTICLES

Related Articles

TRENDING ARTICLES