Monday, January 6, 2025

ಬಾರ್​ ಲೈಸೆನ್ಸ್​ಗೆ 20ಲಕ್ಷ ಲಂಚ : ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ ಅಬಕಾರಿ ಸಚಿವ

ಮಂಡ್ಯ: ಅಬಕಾರಿ ಇಲಾಖೆಯಲ್ಲಿ ಭ್ರಷ್ಟಚಾರವೆಂಬುದು ತಾಂಡವವಾಡುತ್ತಿದ್ದು. ಮಂಡ್ಯದ ಅಬಕಾರಿ ಇಲಾಖೆಯ ಅಧಿಕಾರಿಗಳು ಬಾರ್​ ಲೈಸೆನ್ಸ್​ ನೀಡಲು 20 ಲಕ್ಷ ಬೇಡಿಕೆ ಇಟ್ಟ ವರದಿಯನ್ನುಚ ಸಂಪೂರ್ಣ ಸಾಕ್ಷಿ ಸಮೇತ ಪವರ್​ ಟಿವಿ ವರದಿ ಮಾಡಿದೆ.

ಅಬಕಾರಿ ಇಲಾಖೆಯಲ್ಲಿ ನಡೆಯುತ್ತಿರುವ ಅಕ್ರಮಗಳ ಬಗ್ಗೆ ಇತ್ತೀಚೆಗೆ ನಡೆದ ಮಹರಾಷ್ಟ್ರ ಚುನಾವಣೆಯಲ್ಲಿ ಪ್ರಧಾನಿ ಮೋದಿ ಆರೋಪಿಸಿದ್ದರು. ಸುಮಾರು 700 ಕೋಟಿಯಷ್ಟು ಅಕ್ರಮವಾಗಿದೆ ಎಂದಿದ್ದ ಮೋದಿ, ಆ ಹಣವನ್ನು ಮಹರಾಷ್ಟ್ರದ ಚುನಾವಣೆಗೆ ಬಳಕೆ ಮಾಡುತ್ತಿದ್ದಾರೆ ಎಂದು ಹೇಳಿದ್ದರು. ಆದರೆ ಈ ಆರೋಪವನ್ನು ರಾಜ್ಯ ಕಾಂಗ್ರೆಸ್​ ಸರ್ಕಾರ ತಿರಸ್ಕರಿಸಿತ್ತು. ಇದರ ಬಗ್ಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ ಇದನ್ನು ಸಾಬೀತು ಪಡಿಸಿದರೆ ನಾನು ರಾಜಕೀಯ ನೀವೃತ್ತಿ ತೆಗೆದುಕೊಳ್ಳುವುದಾಗಿ ಚಾಲೆಂಜ್​ ಮಾಡಿದ್ದರು.

ಆದರೆ ಇದೀಗ ಈ ಆರೋಪ ಸಾಬೀತಾಗಿದ್ದು. ಮಂಡ್ಯದ ಅಬಕಾರಿ ಡಿಸಿ ರವಿ ಶಂಕರ್​ ಮತ್ತು ಇನ್ಸ್​ಪೆಕ್ಟರ್​ ಶಿವ ಶಂಕರ್​ ವಿರುದ್ದ ಲಂಚ ಕೇಳಿದ ಆರೋಪ ಬಂದಿದೆ. ಇದರ ಬಗ್ಗೆ ಕೈ ಕಾರ್ಯಕರ್ತ ಪುನೀತ್​ ಎಂಬುವವರು ಲೋಕಾಯುಕ್ತಕ್ಕೆ ದೂರು ನೀಡಿದ್ದು. ಅಧಿಕಾರಿಗಳು ಲಕ್ಷ ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ತಿಳಿದು ಬಂದಿದೆ

ಪುನೀತ್​ ಎಂಬಾತ ಮದ್ದೂರು ತಾಲ್ಲೂಕಿನಲ್ಲಿ ಬಾರ್​ ಅಂಡ್​ ರೆಸ್ಟೂರೆಂಟ್​ ತೆರೆಯಲು ತನ್ನ ತಾಯಿಯಾದ ಲಕ್ಷ್ಮಮ್ಮನ ಹೆಸರಿನಲ್ಲಿ ಆನ್​ಲೈನ್​ನಲ್ಲಿ ಅರ್ಜಿ ಸಲ್ಲಿಸಿದ್ದರು. ಸುಮಾರು ನಾಲ್ಕು ಬಾರಿ ಅರ್ಜಿ ಸಲ್ಲಿಸಿದರು ಕೂಡ ಅಧಿಕಾರಿಗಳು ಅರ್ಜಿಯನ್ನು ತಿರಸ್ಕರಿಸಿದ್ದರು. ಯಾಕೆ ಎಂದು ಪ್ರಶ್ನಿಸಿದದಾಗ ಲಂಚ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ.

ಪವರ್​ ಟಿವಿಯಲ್ಲಿ ಆರ್​.ಬಿ ತಿಮ್ಮಾಪುರ್​ ಮಾತು !

ಪವರ್​ ಟಿವಿಗೆ ಕರೆ ಮಾಡಿ ಮಾತನಾಡಿದ ಅಬಕಾರಿ ಸಚಿವ ಆರ್​.ಬಿ ತಿಮ್ಮಾಪುರ. ಅಧಿಕಾರಗಳ ವಿರುದ್ದ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದರು. ಪವರ್​ ಟಿವಿಯ ಮೂಲಕ ರಾಜ್ಯದ ಜನರಿಗೆ ಸಂದೇಶ ನೀಡಿದ ಸಚಿವರು ‘ ಇಲಾಖೆಯಲ್ಲಿನ ಇಂತಹ ಅಧಿಕಾರಿಗಳಿಂದ ಸರ್ಕಾರಕ್ಕೆ ಕೆಟ್ಟ ಹೆಸರು ಬಂದಿದೆ. ನಾನು ಅವರನ್ನು ಇಂದೇ ಉಚ್ಚಾಟನೆ ಮಾಡುತ್ತೇನೆ ಎಂದು ಪವರ್​ ಟಿವಿಯ ಮೂಲಕ ಭರವಸೆ ನೀಡಿದರು.

 

RELATED ARTICLES

Related Articles

TRENDING ARTICLES