ಬೆಂಗಳೂರು : ಸರ್ಕಾರಿ ಸಾರಿಗೆ ನೌಕರರು ಮುಷ್ಕರಕ್ಕೆ ಮುಂದಾಗುತ್ತಿದ್ದು. ಹೊಸ ವರ್ಷಕ್ಕೆ ಸರ್ಕಾರಕ್ಕೆ ಶಾಕ್ ನೀಡುತ್ತಾರಾ ಎಂಬ ಪ್ರಶ್ನೆ ಎದುರಾಗಿದೆ. ಅನೇಕ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಮುಷ್ಕರಕ್ಕೆ ಮುಂದಾಗುತ್ತಿದ್ದು. ನಾಲ್ಕು ನಿಗಮದ ಸಾರಿಗೆ ನೌಕರರು ಬಸ್ಗಳನ್ನು ಬಂದ್ ಮಾಡುತ್ತಾರೆ ಎಂಬ ಮಾಹಿತಿ ದೊರೆತಿದೆ.
ಸಾರಿಗೆ ಮುಷ್ಕರದ ಕುರಿತು ಸಾರಿಗೆ ಮುಖಂಡ ಅನಂತಸುಬ್ಬ ರಾವ್ ಮಾಹಿತಿ ನೀಡಿದ್ದು. ಮುಷ್ಕರಕ್ಕೂ 21 ದಿನ ಮುನ್ನ ಸರ್ಕಾರ ಮತ್ತು ಸಾರಿಗೆ, ಕಾರ್ಮಿಕ ಇಲಾಖೆಗೆ ನೋಟಿನ್ ನೀಡಿ ನಂತರ ಡಿಸೆಂಬರ್ 09 ರಿಂದ ಮುಷ್ಕರಕ್ಕೆ ಹೋಗುತ್ತಾರೆ ಎಂದು ಮಾಹಿತಿ ದೊರೆತಿದೆ.
ಬಿಎಂಟಿಸಿ ,ಕೆಎಸ್ಆರ್ಟಿಸಿ ಸೇರಿದಂತೆ ನಾಲ್ಕು ನಿಗಮದ ನೌಕರರು ಮುಷ್ಕರ ನಡೆಸಲಿದ್ದಾರೆ ಎಂದು ಮಾಹಿತಿ ದೊರೆತಿದ್ದು. ವಿವಿಧ ಬೇಡಿಕೆಯನ್ನು ಮುಂದಿಟ್ಟುಕೊಂಡು ಹೋರಾಟ ನಡೆಸಲು ತಯಾರಿ ನಡೆಸಲಾಗುತ್ತದೆ ಎಂದು ತಿಳಿದು ಬಂದಿದೆ.
ಕಳೆದ ನಾಲ್ಕು ವರ್ಷಗಳಿಂದ ನಿಗಮದ ನೌಕರರಿಗೆ ಪಿ.ಎಫ್ ಹಣವನ್ನು ಬಿಡುಗಡೆ ಮಾಡಿಲ್ಲ ಎಂದು ಆರೋಪಿಸಲಾಗಿದ್ದು ಸುಮಾರು 399 ಕೋಟಿ ಹಣವನ್ನು ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿ. ಹಾಗೂ ಸಂಬಳ ಹೆಚ್ಚಳ ಮಾಡಬೇಕು ಎಂದು ಒತ್ತಾಯಿಸಿ ಫ್ರತಿಭಟನೆ ಕೈಗೊಳ್ಳಲಾಗುತ್ತಿದೆ ಎಂದು ತಿಳಿದು ಬಂದಿದೆ.