Wednesday, November 27, 2024

ಸರ್ಕಾರಕ್ಕೆ ಶಾಕ್ ನೀಡಲು ಮುಂದಾದ ಸಾರಿಗೆ ನೌಕರರು : ಶೀಘ್ರದಲ್ಲೆ ಸಾರಿಗೆ ಮುಷ್ಕರ

ಬೆಂಗಳೂರು : ಸರ್ಕಾರಿ ಸಾರಿಗೆ ನೌಕರರು ಮುಷ್ಕರಕ್ಕೆ ಮುಂದಾಗುತ್ತಿದ್ದು. ಹೊಸ ವರ್ಷಕ್ಕೆ ಸರ್ಕಾರಕ್ಕೆ ಶಾಕ್​ ನೀಡುತ್ತಾರಾ ಎಂಬ ಪ್ರಶ್ನೆ ಎದುರಾಗಿದೆ. ಅನೇಕ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಮುಷ್ಕರಕ್ಕೆ ಮುಂದಾಗುತ್ತಿದ್ದು. ನಾಲ್ಕು ನಿಗಮದ ಸಾರಿಗೆ ನೌಕರರು ಬಸ್​ಗಳನ್ನು ಬಂದ್​ ಮಾಡುತ್ತಾರೆ ಎಂಬ ಮಾಹಿತಿ ದೊರೆತಿದೆ.

ಸಾರಿಗೆ ಮುಷ್ಕರದ ಕುರಿತು ಸಾರಿಗೆ ಮುಖಂಡ ಅನಂತಸುಬ್ಬ ರಾವ್​ ಮಾಹಿತಿ ನೀಡಿದ್ದು. ಮುಷ್ಕರಕ್ಕೂ 21 ದಿನ ಮುನ್ನ ಸರ್ಕಾರ ಮತ್ತು ಸಾರಿಗೆ, ಕಾರ್ಮಿಕ ಇಲಾಖೆಗೆ ನೋಟಿನ್​ ನೀಡಿ ನಂತರ ಡಿಸೆಂಬರ್​ 09 ರಿಂದ ಮುಷ್ಕರಕ್ಕೆ ಹೋಗುತ್ತಾರೆ ಎಂದು ಮಾಹಿತಿ ದೊರೆತಿದೆ.

ಬಿಎಂಟಿಸಿ ,ಕೆಎಸ್​ಆರ್​ಟಿಸಿ ಸೇರಿದಂತೆ ನಾಲ್ಕು ನಿಗಮದ ನೌಕರರು ಮುಷ್ಕರ ನಡೆಸಲಿದ್ದಾರೆ ಎಂದು ಮಾಹಿತಿ ದೊರೆತಿದ್ದು. ವಿವಿಧ ಬೇಡಿಕೆಯನ್ನು ಮುಂದಿಟ್ಟುಕೊಂಡು ಹೋರಾಟ ನಡೆಸಲು ತಯಾರಿ ನಡೆಸಲಾಗುತ್ತದೆ ಎಂದು ತಿಳಿದು ಬಂದಿದೆ.

ಕಳೆದ ನಾಲ್ಕು ವರ್ಷಗಳಿಂದ ನಿಗಮದ ನೌಕರರಿಗೆ ಪಿ.ಎಫ್​ ಹಣವನ್ನು ಬಿಡುಗಡೆ ಮಾಡಿಲ್ಲ ಎಂದು ಆರೋಪಿಸಲಾಗಿದ್ದು ಸುಮಾರು 399 ಕೋಟಿ ಹಣವನ್ನು ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿ. ಹಾಗೂ ಸಂಬಳ ಹೆಚ್ಚಳ ಮಾಡಬೇಕು ಎಂದು ಒತ್ತಾಯಿಸಿ ಫ್ರತಿಭಟನೆ ಕೈಗೊಳ್ಳಲಾಗುತ್ತಿದೆ ಎಂದು ತಿಳಿದು ಬಂದಿದೆ.

RELATED ARTICLES

Related Articles

TRENDING ARTICLES