Wednesday, November 27, 2024

ಕೇಂದ್ರ ಸರ್ಕಾರ ಬಾಂಗ್ಲಾದೇಶಕ್ಕೆ ತಕ್ಕ ಪಾಠ ಕಲಿಸಬೇಕು :ಪ್ರಮೋದ್​ ಮುತಾಲಿಕ್

ಚಿಕ್ಕೋಡಿ : ಬಾಂಗ್ಲಾದಲ್ಲಿ ಚಿನ್ಮಾಯ ಕೃಷ್ಣದಾಸ ಸ್ವಾಮೀಜಿಯ ಬಂಧನದ ಕುರಿತು ಮಾತನಾಡಿದ ಪ್ರಮೋದ್​ ಮುತಾಲಿಕ್​, ಬಾಂಗ್ಲಾದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯದ ಬಗ್ಗೆ ಕಿಡಿಕಾರಿದರು ಮತ್ತು ಕೇಂದ್ರ ಸರ್ಕಾರ ಇದರಲ್ಲಿ ಮಧ್ಯಪ್ರವೇಶಿಸಿ ಬಾಂಗ್ಲಾಗೆ ತಕ್ಕ ಪಾಠ ಕಲಿಸಬೇಕು ಎಂದು ಹೇಳಿದರು.

ಬಾಂಗ್ಲಾದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ಹಿಂಸಾಚಾರವನ್ನು ಖಂಡಿಸಿ ಮಾತನಾಡಿದ ಹಿಂದು ಮುಖಂಡ ಪ್ರಮೋದ್​ ಮುತಾಲಿಕ್​ ‘ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ದೌರ್ಜನ್ಯ ಆಗುತ್ತಿದೆ.
ಸಾಕಷ್ಟು ಹಿಂಸಾಚಾರ, ಕೋಲೆ, ಅತ್ಯಾಚಾರ ನಡೆದಿದೆ. ಇದರ ವಿರುದ್ಧ ಚಿನ್ಮಾಯ ಕೃಷ್ಣದಾಸ ಸ್ವಾಮೀಜಿ ಹೋರಾಡುತ್ತಾದ್ದಾರೆ. ಆದರೆ ನಿನ್ನೆ ಸ್ವಾಮೀಜಿಯ ಬಂಧನವಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಭಟನೆ ಮಾಡುವುದು ತಪ್ಪೇನು ಎಂದು’ ಪ್ರಮೋದ್​ ಮುತಾಲಿಕ್​ ಹೇಳಿದರು.

ಮುಂದುವರಿದು ಮಾತನಾಡಿದ ಪ್ರಮೋದ್​ ‘ಬಾಂಗ್ಲಾದೇಶ ಹುಟ್ಟಿದೆ ಭಾರತದಿಂದ ಹೀಗಾಗಿ ಕೇಂದ್ರ ಸರ್ಕಾರ ಇದರ ಕುರಿತು ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಬೇಕು. ಬಾಂಗ್ಲಾದೇಶಕ್ಕೆ ತಕ್ಕ ಪಾಠ ಕಲಿಸುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡಬೇಕು. ಬಾಂಗ್ಲಾದೇಶದ ಹಿಂದೂಗಳ ರಕ್ಷಣೆಗೆ ಪ್ರಧಾನಿ ಮೋದಿ, ಗೃಹಮಂತ್ರಿ ಅಮಿತ್ ಷಾ ಮುಂದಾಗಬೇಕು ಹಾಗೂ ಕೇಂದ್ರ ಸರ್ಕಾರ ಇದರಲ್ಲಿ ಮಧ್ಯಪ್ರವೇಶಿಸಿ ಸ್ವಾಮೀಜಿಯನ್ನು ಆದಷ್ಟು ಬೇಗ ಬಂದ ಮುಕ್ತ ಮಾಡಬೇಕು’ ಎಂದು ಬೆಳಗಾವಿಯ ಹುಕ್ಕೇರಿಯಲ್ಲಿ ಹೇಳಿದರು.

RELATED ARTICLES

Related Articles

TRENDING ARTICLES