Saturday, January 11, 2025

ದೊಡ್ಡ ದೊಡ್ಡ ಶೋರೂಂಗೆ ಕನ್ನ ಹಾಕಿದ್ದ ಬೆಡ್​ಶೀಟ್​ ಗ್ಯಾಂಗ್​ ಬಂಧನ!

ಬೆಂಗಳೂರು : ದೇಶದ ಪ್ರಮುಖ ನಗರಗಳ ದೊಡ್ಡ ದೊಡ್ಡ ಶೋರೂಂಗಳಿಗೆ ಕನ್ನ ಹಾಕುತ್ತಿದ್ದ ಬೆಡ್​​ ಶೀಟ್​ ಗ್ಯಾಂಗ್​ನ್ನು ಬೈಯಪ್ಪನಹಳ್ಳಿ ಪೋಲಿಸರು ಬಂಧಿಸಿದ್ದು. ಬಿಹಾರ ಮೂಲದ ಸುಮಾರು 8 ಜನರನ್ನು ಬಂಧಿಸಲಾಗಿದೆ ಎಂದು ಮಾಹಿತಿ ದೊರೆತಿದೆ.

ದೇಶದ ಪ್ರಮುಖ ನಗರಗಳನ್ನೆ ಟಾರ್ಗೆಟ್​ ಮಾಡಿಕೊಂಡಿದ್ದ ಖದೀಮರು ಮುಂಬೈ, ಬಿಹಾರ್​, ದೆಹಲಿ, ಉತ್ತರಕನ್ನಡ, ಕಾರವಾರ, ಬೆಂಗಳೂರು ಸೇರಿದಂತೆ ಹಲವೆಡೆ ತಮ್ಮ ಕೈ ಚಳಕ ತೋರಿಸಿದ್ದರು. ಕೂಲಿ ಕೆಲಸಕ್ಕೆ ಎಂದು ಬಂದು ಪೋಲಿಸರ ಕಣ್​ ತಪ್ಪಿಸಿ ಕೃತ್ಯ ಮಾಡುತ್ತಿದ್ದರು ಎಂದು ಮಾಹಿತಿ ದೊರೆತಿದೆ.

ಇತ್ತೀಚೆಗೆ ಬೈಯಪ್ಪನಹಳ್ಳಿಯ ನಾಗವಾರ ಪಾಳ್ಯದಲ್ಲಿ ಸ್ಯಾಮ್ಸಾಂಗ್​ ಶೋರೂಂಗೆ ನುಗ್ಗಿದ್ದ ಈ ಗ್ಯಾಂಗ್​ ಸಿಸಿಟಿವಿ ಕ್ಯಾಮಾರಕ್ಕೆ ಬೆಡ್​ ಶೀಟ್​ ಅಡ್ಡ ಹಿಡಿದು, ಸುಮಾರು 22 ಲಕ್ಷ ಮೌಲ್ಯದ ಸ್ಯಾಮ್ಸಾಂಗ್​ ಮೊಬೈಲ್​ಗಳನ್ನು ಕಳ್ಳತನ ಮಾಡಿದ್ದರು. ಈ ಕೃತ್ಯದ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದ ಪೋಲಿಸರು ಆರೋಪಿಗಳ ಹೆಡೆಮುರಿ ಕಟ್ಟಿದ್ದು. ಬೊಮ್ಮನಹಳ್ಳಿ ಭಾಗದಲ್ಲಿ ಅಡಗಿ ಕೂತಿದ್ದ ಇವರನ್ನು ಬಂಧಿಸುವಲ್ಲಿ ಪೋಲಿಸರು ಯಶಸ್ವಿಯಾಗಿದ್ದಾರೆ.

ಬಿಹಾರದ ಇಮ್ತಿಯಾಜ್ ಮತ್ತು ಆತನ ತಂಡವನ್ನು ಪೋಲಿಸರು ಬಂಧಿಸಿದ್ದು. ಇಮ್ತಿಯಾಜ್ ಆಲಂ, ಜಾವೇದ್ ಆಲಂ , ಪವನ್ ಶಾ, ಮುನಿಲ್ ಕುಮಾರ್, ರಿಜ್ವಾನ್ ದೇವನ್, ಸಲೀಮ್ ಅಲಂ, ರಾಮೇಶ್ವರ್ ಗಿರಿ, ಹಾಗೂ ಶಿವರಾಜ್ ಕುಮಾರ್ ಬಂಧಿತರು ಎಂದು ಮಾಹಿತಿ ದೊರೆತಿದೆ. ಪೋಲಿಸ್​ ವಿಚಾರಣೆ ವೇಳೆ ಮೊಬೈಲ್​ಗಳನ್ನು ನೇಪಾಳಕ್ಕೆ ಕೊಂಡೊಯ್ದು ಮಾರಾಟ ಮಾಡಿದ್ದಾಗಿ ಬಾಯಿಬಿಟ್ಟಿದ್ದಾರೆ ಎಂದು ಮಾಹಿತಿ ದೊರೆತಿದೆ.

RELATED ARTICLES

Related Articles

TRENDING ARTICLES