Friday, January 10, 2025

ಜಗಳ ಬಿಡಿಸಲು ಹೋದ ವ್ಯಕ್ತಿಯ ಮರ್ಮಾಂಗಕ್ಕೆ ಏಟುಬಿದ್ದು ವ್ಯಕ್ತಿ ಸಾವು

ಮೈಸೂರು: ಮಹಿಳೆಯರಿಬ್ಬರು ಗಲಾಟೆ ಮಾಡುತ್ತಿರುವುದನ್ನು ನೋಡಿ ಬಿಡುಸಲು ಹೋದ ವ್ಯಕ್ತಿಯೋರ್ವನ ಮಮಾಂಗಕ್ಕೆ ಪೆಟ್ಟು ಬಿದ್ದು ಸಾವನ್ನಪ್ಪಿದ ಘಟನೆ ಮೈಸೂರಿನಲ್ಲಿ ನಡೆದಿದ್ದು. ಏಟುಬಿದ್ದ ವ್ಯಕ್ತಿ ಸ್ಥಳದಲ್ಲೆ ಸಾವನ್ನಪ್ಪಿದ್ದಾನೆ ಎಂದು ಮಾಹಿತಿ ದೊರೆತಿದೆ. ಮೃತ ದುರ್ದೈವಿಯನ್ನು 45 ವರ್ಷದ ಮಹದೇವಸ್ವಾಮಿ ಎಂದು ಗುರುತಿಸಲಾಗಿದೆ.

ಮೈಸೂರು ಜಿಲ್ಲೆಯ ಟಿ.ನರಸೀಪುರ ತಾಲ್ಲೂಕಿನ ದೊಡ್ಡೇಬಾಗಿಲು ಗ್ರಾಮದಲ್ಲಿ ಘಟನೆ ನಡೆದಿದ್ದು. ರಾಜಮ್ಮ ಮತ್ತು ನಂಜಮ್ಮ ಎಂಬ ಮಹಿಳೆಯರಿಬ್ಬರು ಜಗಳವಾಡುತ್ತಿದ್ದರು. ಈ ಜಗಳವನ್ನು ನೋಡಿದ ಮಹದೇವಸ್ವಾಮಿ ಪತ್ನಿ ಶಶಿಕಲಾ ಜಗಳ ಬಿಡಿಸಲು ಹೋಗಿದ್ದರು. ಆದರೆ ರಾಜಮ್ಮ ಎಂಬ ಮಹಿಳೆ ಶಶಿಕಲಾ ಮೇಲೆಯು ಹಲ್ಲೆ ಮಾಡಿದ್ದಳು.

ಪತ್ನಿಯ ಮೇಲೆ ಹಲ್ಲೆಯಾಗುತ್ತಿರುವುದನ್ನು ಗಮನಿಸಿದ ಪತಿ ಮಹದೇವಸ್ವಾಮಿ ಅವರ ನಡುವೆ ಆಗುತ್ತಿದ್ದ ಜಗಳವನ್ನು ಬಿಡಿಸಲು ಹೋಗಿದ್ದನು. ಆದರೆ ಯಾರಿಗೂ ಬಗ್ಗದ ರಾಜಮ್ಮ ಮಹದೇವಸ್ವಾಮಿಯ ಮೇಲೂ ಹಲ್ಲೆ ಮಾಡಿದ್ದಳು. ಈ ಜಗಳದಲ್ಲಿ ಮಹದೇವಸ್ವಾಮಿಯ ಮರ್ಮಾಂಗಕ್ಕೆ ಬಲವಾದ ಏಟು ಬಿದ್ದಿದ್ದು. ಸ್ಥಳದಲ್ಲೆ ಮೃತ ಪಟ್ಟಿದ್ದಾನೆ ಎಂದು ಮಾಹಿತಿ ದೊರೆತಿದೆ. ಟಿ. ನರಸಿಂಹ ಪೋಲಿಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು. ಫೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

 

RELATED ARTICLES

Related Articles

TRENDING ARTICLES