Friday, January 10, 2025

ಲಂಚ ಆರೋಪದಡಿ ಗೌತಮ್ ಅದಾನಿಯನ್ನು ಬಂಧಿಸಬೇಕು : ರಾಹುಲ್​ ಗಾಂಧಿ

ದೆಹಲಿ: ಸಂಸತ್ತಿನ ಚಳಿಗಾಲದ ಅಧಿವೇಶನ ಆರಂಭವಾಗಿದ್ದು. ಸಂಸತ್ತಿನ ಮೊದಲ ದಿನದ ಕಲಾಪದಿಂದಲೆ ವಿಪಕ್ಷಗಳು ಅದಾನಿಯ ಬಗ್ಗೆ ಚರ್ಚಿಸಬೇಕು ಎಂದು ಜೋರು ಗಲಾಟೆ ಮಾಡುತ್ತಿವೆ. ಇದರಿಂದಾಗಿ ಕಲಾಪವನ್ನು ಮುಂದೂಡಲಾಗುತ್ತಿದೆ. ಇದರ ಮಧ್ಯ ಮಾಧ್ಯಮದೊಂದಿಗೆ ಮಾತನಾಡಿದ ವಿಪಕ್ಷನಾಯಕ ರಾಹುಲ್​ ಗಾಂಧಿ ಅದಾನಿಯನ್ನು ಬಂದಿಸಿ ಜೈಲಿಗೆ ಕಳುಹಿಸಬೇಕು ಎಂದು ಹೇಳಿದರು.

ಸಂಸತ್ತಿನ ಹೊರಗೆ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್​ ಗಾಂಧಿ, “ದೇಶದಲ್ಲಿ ಸಣ್ಣಪುಟ್ಟ ಆರೋಪಗಳ ಮೇಲೆ ನೂರಾರು ಜನರನ್ನು ಬಂಧಿಸುವಾಗ ಅದಾನಿ ಏಕೆ ಇನ್ನೂ ಜೈಲಿಗೆ ಹೋಗಿಲ್ಲ” ಎಂದು ಪ್ರಶ್ನಿಸಿದ್ದಾರೆ. ಅಮೆರಿಕದಲ್ಲಿ ದೋಷಾರೋಪ ಪಟ್ಟಿ ಸಲ್ಲಿಸಿದ ಆರೋಪ ಎದುರಿಸುತ್ತಿರುವ ಉದ್ಯಮಿ ಗೌತಮ್ ಅದಾನಿಯನ್ನು ಬಂಧಿಸಬೇಕು, ಅವರು ತಮ್ಮ ಮೇಲಿನ ತಪ್ಪು ಒಪ್ಪಿಕೊಳ್ಳಲ್ಲ, ಸರ್ಕಾರ ಅವರನ್ನು ರಕ್ಷಿಸುತ್ತಿದೆ ಎಂದು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಆರೋಪಿಸಿದ್ದಾರೆ.

ಸಂಸತ್ತಿನ ಹೊರಗೆ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಲೋಕಸಭೆ ವಿರೋಧ ಪಕ್ಷದ ನಾಯಕ ಗಾಂಧಿ, “ದೇಶದಲ್ಲಿ ಸಣ್ಣಪುಟ್ಟ ಆರೋಪಗಳ ಮೇಲೆ ನೂರಾರು ಜನರನ್ನು ಬಂಧಿಸುವಾಗ ಅದಾನಿ ಏಕೆ ಇನ್ನೂ ಜೈಲಿಗೆ ಹೋಗಿಲ್ಲ” ಎಂದು ಪ್ರಶ್ನಿಸಿದ್ದಾರೆ. ಕೋಟ್ಯಾಧಿಪತಿ ಉದ್ಯಮಿ ಗೌತಮ್ ಅದಾನಿ ಮತ್ತು ಅವರ ಸೋದರಳಿಯ ಸಾಗರ್ ಅದಾನಿ ವಿರುದ್ಧ ಲಂಚ ಪ್ರಕರಣದಲ್ಲಿ ಯುಎಸ್ ಅಧಿಕಾರಿಗಳು ದೋಷಾರೋಪ ಸಲ್ಲಿಸಿದ್ದಾರೆ. ನ್ಯಾಯಾಲಯದಲ್ಲಿ ಸಲ್ಲಿಸಿದ ದೋಷಾರೋಪಣೆಯಲ್ಲಿ ಯುಎಸ್ ವಿದೇಶಿ ಭ್ರಷ್ಟ ಆಚರಣೆಗಳ ಕಾಯ್ದೆಯ ಯಾವುದೇ ಉಲ್ಲಂಘನೆಯ ಆರೋಪ ಹೊರಿಸಿಲ್ಲ ಎಂದು ಅದಾನಿ ಗ್ರೂಪ್ ಹೇಳಿಕೆ ನೀಡಿದೆ. ವಿತ್ತೀಯ ಪೆನಾಲ್ಟಿಗಳನ್ನು ವಿಧಿಸುವುದನ್ನು ಒಳಗೊಂಡಿರುವ ಸೆಕ್ಯುರಿಟೀಸ್ ವಂಚನೆಗೆ ಸಂಬಂಧಿಸಿದಂತೆ ಆರೋಪ ಹೊರಿಸಲಾಗಿದೆ.

RELATED ARTICLES

Related Articles

TRENDING ARTICLES