Saturday, January 11, 2025

ನರ್ಸ್​ ವೇಶದಲ್ಲಿ ಬಂದು ಮಗು ಕಳ್ಳತನ ಮಾಡಿದ ಮಹಿಳೆಯರು

ಕಲಬುರಗಿ : ನಗರದ ಜಿಲ್ಲಾಸ್ಪತ್ರೆಯಲ್ಲಿ ನವಜಾತ ಶಿಶುವನ್ನು ಅಪಹರಿಸಿರುವ ಘಟನೆಯಾಗಿದ್ದು. ನರ್ಸ್​ ವೇಶದಲ್ಲಿ ಬಂದ ಇಬ್ಬರು ಮಹಿಳೆಯರು ಮಗುವನ್ನು ಕಳ್ಳತನ ಮಾಡಿದ್ದಾರೆ. ಘಟನೆ ಸಂಬಂಧ ಬ್ರಹ್ಮಪುರ ಪೋಲಿಸ್​​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು. ಪೋಲಿಸರು ತನಿಖೆ ನಡೆಸುತ್ತಿದ್ದಾರೆ ಎಂದು ತಿಳೀದು ಬಂದಿದೆ.

ಕಲಬುರಗಿ ಜಿಲ್ಲಾಸ್ಪತ್ರೆಯಲ್ಲಿ ಕಸ್ತೂರಿ ಎಂಬುವವರು ನಿನ್ನೆ ನಸುಕಿನ ಜಾವ 4 ಗಂಟೆಗೆ ಗಂಡು ಮಗುವಿಗೆ ಜನ್ಮ ನೀಡಿದ್ದರು. ಮಗುವು ಕೂಡ ಆರೋಗ್ಯವಾಗಿತ್ತು. ಆದರೆ ನೆನ್ನೆ ಮುಖ ಮುಚ್ಚಿಕೊಂಡು ಆಸ್ಪತ್ರೆಗೆ ಬಂದ ನಕಲಿ ದಾದಿಯರು ಮಗುವಿಗೆ ರಕ್ತ ತಪಾಸಣೆ ಮಾಡಿಸ ಬೇಕಿದೆ ಮಗುವನ್ನು ತೆಗೆದುಕೊಂಡು ಬನ್ನಿ ಎಂದು ಸೂಚಿಸಿದ್ದರು. ಅವರ ಸೂಚನೆಯ ಮೇರೆಗೆ ಮಗುವಿನ ಚಿಕ್ಕಮ್ಮ ಚಂದ್ರಕಲಾ ಮಗುವನ್ನು ರಕ್ತನ ಪರೀಕ್ಷೆಗೆ ಕರೆದೊಯ್ದಿದ್ದರು.

ಬಳಿಕ ಮಗುವನ್ನು ನಮಗೆ ಕೊಡಿ ಎಂದು ಮಗುವನ್ನು ಪಡೆದುಕೊಂಡ ನಕಲಿ ದಾದಿಯರು. ಮಗುವನ್ನು ಅಪಹರಿಸಿಕೊಂಡು ಹೋಗಿದ್ದಾರೆ. ಘಟನೆ ಸಂಬಂಧ ಮಗುವಿನ ತಂದೆ ರಾಮಕೃಷ್ಣ ಕಲಬುರಗಿಯ ಬ್ರಹ್ಮಪುರ ಪೋಲಿಸ್​ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ ಎಂದು ಮಾಹಿತಿ ದೊರೆತಿದೆ.

 

RELATED ARTICLES

Related Articles

TRENDING ARTICLES