Tuesday, January 7, 2025

ಈ ಬಾರಿ ಆರ್​ಸಿಬಿ ತಂಡ ಹೇಗಿರಲಿದೆ; ಬೌಲಿಂಗ್​? ಬ್ಯಾಟಿಂಗ್​? ಆಲ್‌ರೌಂಡರ್ಸ್‌?

ಐಪಿಎಲ್​ನಲ್ಲಿ ಈ ಬಾರಿ ಆರ್​ಸಿಬಿ (ರಾಯಲ್​ ಚಾಲೆಂಜರ್ಸ್​​ ಬೆಂಗಳೂರು) ತಂಡ. ಈ ಬಾರಿಯ ಹರಾಜು ಪ್ರಕ್ರಿಯೆಯಲ್ಲಿ ಆಲ್‌ರೌಂಡರ್‌ ಆಟಗಾರರನ್ನು ಬಲಪಡಿಸುವ ದಿಸೆಯಲ್ಲಿ ಬೆವರು ಹರಿಸಿದೆ. ಆದರೆ, ಆರ್‌ಸಿಬಿ ಪಡೆದ ಆಲ್‌ರೌಂಡರ್‌ಗಳು, ಸಂಪೂರ್ಣ ನಾಲ್ಕು ಓವರ್​ ಪೂರ್ಣಗೊಳಿಸುವ ಸಾಮರ್ಥ್ಯವಿದೆಯಾ? ಎಂಬ ಪ್ರಶ್ನೆ ಅನುಮಾನ ಮೂಡಿದೆ. ಸದ್ಯ ಆ ನಿಟ್ಟಿನಲ್ಲಿ ಈ ಕೆಳಗಿನವರನ್ನು ಬೌಲಿಂಗ್​ ವಿಭಾಗಕ್ಕೆ ಕರೆ ತರಲಾಗಿದೆ.

ಆಲ್‌ರೌಂಡರ್ಸ್‌: ಲಿಯಾಮ್ ಲಿವಿಂಗ್‌ಸ್ಟೋನ್ (ಸ್ಪಿನ್), ಕೃನಾಲ್ ಪಾಂಡ್ಯ (ಸ್ಪಿನ್), ಸ್ವಪ್ನಿಲ್ ಸಿಂಗ್ (ಸ್ಪಿನ್), ರೊಮಾರಿಯೊ ಶೆಫರ್ಡ್ (ಪೇಸ್), ಜೇಕಬ್ ಬೆಥೆಲ್ (ಸ್ಪಿನ್), ಮೋಹಿತ್ ರಥಿ (ಸ್ಪಿನ್).

ಇನ್ನು ಆರ್‌ಸಿಬಿ ಕಳೆದ (2023) ಬಾರಿಯ ಐಪಿಎಲ್ ಆವೃತ್ತಿಯಲ್ಲಿ ಸ್ಪಿನ್ ಬೌಲಿಂಗ್‌ ಬಗ್ಗೆ ಹೆಚ್ಚಿನ ತಲೆ ಕೆಡಿಸಿಕೊಂಡಿತ್ತು. ಈ ಬಾರಿಯೂ ಈ ಸಮಸ್ಯೆ ಎದುರಿಸುವ ಸಾಧ್ಯತೆ ಇದೆ. ಆರ್‌ಸಿಬಿ ಇಬ್ಬರು ಯುವ ಸ್ಪಿನ್ ಬೌಲರ್‌ಗಳಿಗೆ ಮಣೆ ಹಾಕಿದೆ. ಆದರೆ ಒಬ್ಬ ಎದುರಾಳಿ ಪಡೆಯಲ್ಲಿ ನಡುಕ ಹುಟ್ಟಿಸಬಲ್ಲ ಪ್ಲೇಯರ್ ಇಲ್ಲದೇ ಇರುವು ನೋವು ಅಭಿಮಾನಿಗಳಲ್ಲಿ ಇದೆ.

ಸ್ಪಿನ್ನರ್ಸ್‌: ಸುಯಶ್ ಶರ್ಮಾ, ಅಭಿನಂದನ್ ಸಿಂಗ್

ಬೌಲಿಂಗ್​ ವಿಭಾಗದ ಕಿರು ವಿಮರ್ಶೆ: ಕಳೆದ ಕೆಲವು ಆವೃತ್ತಿಗಳಲ್ಲಿ ಆರ್‌ಸಿಬಿ ತಂಡದ ತಲೆ ನೋವು ಹೆಚ್ಚಿಸಿದ್ದ ಬೌಲಿಂಗ್ ವಿಭಾಗವನ್ನು ಬಲಗೊಳಿಸುವ ನಿಟ್ಟಿನಲ್ಲಿ ಆರ್‌ಸಿಬಿ ಹಣವನ್ನು ಹೂಡಿದೆ. ಈ ಬಾರಿ ಆರ್‌ಸಿಬಿ ಬೌಲಿಂಗ್ ವಿಭಾಗ ಕೊಂಚ ಎದುರಾಳಿಗಳಿಗೆ ನಡುಕ ಹುಟ್ಟಿಸಬಹುದು. ಬೌಲಿಂಗ್‌ನಲ್ಲಿ ವೇರಿಯೇಷನ್‌ ಹಾಗೂ ಬಿಗಿ ಹಿಡಿತ ಹಾಗೂ ವೇಗದ ದಾಳಿ ನಡೆಸಬಲ್ಲ ನಡೆಸುವ ಬೌಲರ್‌ಗಳು ಆರ್​ಸಿಬಿ ತಂಡ ಸೇರಿಕೊಂಡಿದ್ದಾರೆ.

ಬೌಲಿಂಗ್ ವಿಭಾಗ: ಜೋಶ್ ಹ್ಯಾಜಲ್‌ವುಡ್, ಭುವನೇಶ್ವರ್ ಕುಮಾರ್, ಯಶ್ ದಯಾಳ್, ರಸಿಖ್ ಸಲಾಂ, ನುವಾನ್ ತುಷಾರ, ಲುಂಗಿ ಎನ್‌ಗಿಡಿ.

ಬ್ಯಾಟಿಂಗ್​ ವಿಭಾಗದ ಹೀಗಿದೆ; ಆರ್‌ಸಿಬಿ ಫುಲ್ ಆಂಡ್ ಫುಲ್ ಹೊಸ ಮುಖಗಳೊಂದಿಗೆ ಈ ಬಾರಿ ಕಣಕ್ಕೆ ಇಳಿಸುವ ಪ್ಲ್ಯಾನ್ ಮಾಡಿಕೊಂಡಿದೆ. ಅದರಂತೆ ಬ್ಯಾಟಿಂಗ್‌ನಲ್ಲಿ ಮಿಡ್ಲ್ ಆರ್ಡರ್‌ ಬಲಾಢ್ಯ ತಂಡ ಕಟ್ಟುವುದರಲ್ಲಿ ಹಣವನ್ನು ಹೂಡಿದೆ. ಈ ಆಟಗಾರರ ಪ್ರದರ್ಶನದ ಮೇಲೆ ಆರ್‌ಸಿಬಿ ಕಪ್‌ ಗೆಲುವಿನ ಆಸೆ ನಿರ್ಧರಿಸಲಾಗುತ್ತದೆ.

ಬ್ಯಾಟ್ಸ್‌ಮನ್ಸ್‌: ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ಟಿಮ್ ಡೇವಿಡ್, ಮನೋಜ್ ಭಾಂಡಗೆ, ದೇವದತ್ ಪಡಿಕ್ಕಲ್, ಸ್ವಸ್ತಿಕ್ ಚಿಕಾರ.

ವಿಕೆಟ್​ ಕೀಪರ್​ ಯಾರು; ದಿನೇಶ್‌ ಕಾರ್ತಿಕ್‌ ಆರ್‌ಸಿಬಿಯಲ್ಲಿ ವಿಕೆಟ್‌ ಕೀಪರ್‌, ಫಿನಿಷರ್ ರೂಪದಲ್ಲಿ ಕಾಣಿಸಿಕೊಂಡಿದ್ದರು. ಈಗ ಆರ್‌ಸಿಬಿ ವಿಕೆಟ್‌ ಕೀಪರ್ ಹುಡುಕಿಕೊಳ್ಳುವಲ್ಲಿ ಸಫಲವಾಗಿದೆ. ಆರ್‌ಸಿಬಿ ಎಂದಿನಂತೆ ಒಬ್ಬ ದೇಶಿಯ ವಿಕೆಟ್ ಕೀಪರ್‌ ಹಾಗೂ ಒಬ್ಬ ವಿದೇಶಿ ವಿಕೆಟ್‌ ಕೀಪರ್‌ಗೆ ಮಣೆ ಹಾಕಿದೆ. ಆದರೆ, ಇವರಿಬ್ಬರೂ ವಿಕೆಟ್‌ ಕೀಪರ್‌ ಮತ್ತು ಬ್ಯಾಟ್​ ಬೀಸುವ ರೂಪದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆದರೆ, ಕೊನೆತನಕ ನಿಂತು ಮ್ಯಾಚ್​ ಫಿನಿಷರ್‌ ರೋಲ್‌ಗೆ ಇವರು ಸೂಟ್ ಆಗುವುದಿಲ್ಲ.

83 ಕೋಟಿ ರೂಪಾಯಿಗಳೊಂದಿಗೆ ಹರಾಜು ಅಂಗಳ ಪ್ರವೇಶಿಸಿದ್ದ ಆರ್‌ಸಿಬಿ ಅಳೆದು ತೂಗಿ ಆಟಗಾರರಿಗೆ ಮಣೆ ಹಾಕಿದೆ. ಕಳೆದ ಕೆಲವು ಆವೃತ್ತಿಗಳಲ್ಲಿ ಬೌಲಿಂಗ್‌ ವಿಭಾಗದ ಸಮಸ್ಯೆಯನ್ನು ಆರ್‌ಸಿಬಿ ಬಹುದಿನಗಳ ಕಾಲ ಅನುಭವಿಸಿತ್ತು. ಈಗ ಕೊಂಚ ಬೌಲಿಂಗ್‌ನಲ್ಲಿ ವಿವಿಧತೆ ಕಾಣುತ್ತದೆ. ಆದರೆ, ವಿಶ್ವ ದರ್ಜೆಯ ಸ್ಪಿನ್ ಬೌಲರ್‌ಗಳು ಇಲ್ಲದೇ ಇರುವುದು ನಿಜಕ್ಕೂ ಮತ್ತೊಮ್ಮೆ ಆರ್‌ಸಿಬಿ ತಂಡಕ್ಕೆ ನಷ್ಟವಾಗಬಹುದು.

RELATED ARTICLES

Related Articles

TRENDING ARTICLES