Saturday, January 11, 2025

ಮುಸ್ಲಿಂಮರಿಗೆ ಮತದಾನದ ಹಕ್ಕನ್ನು ರದ್ದುಗೊಳಿಸಬೇಕು: ಚಂದ್ರಶೇಖರ ನಾಥ ಸ್ವಾಮೀಜಿ

ಬೆಂಗಳೂರು : ವಕ್ಫ್ ವಿರುದ್ಧ ರಾಜ್ಯ ಕಿಸಾನ್ ಸಂಘಟನೆ ಪ್ರತಿಭಟನೆ ಪ್ರತಿಭಟನೆ ನಡೆಸುತ್ತಿದ್ದು. ಬೆಂಗಳೂರಿನ ಫ್ರೀಡಂ ಪಾರ್ಕನಲ್ಲಿ ನಡೆದ ಕಾರ್ಯಕ್ರಮದಲ್ಲಿ ಒಕ್ಕಲಿಗರ ಮಠದ ಸ್ವಾಮೀಜಿ ವಿವಾದಾತ್ಮಕ ಹೇಳಿಕೆ ನೀಡಿದ್ದು. ಮುಸ್ಲಿಂಮರಿಗೆ ಮತದಾನದ ಹಕ್ಕನ್ನು ನಿರಾಕರಿಸಬೇಕು ಎಂದು ಹೇಳಿದ್ದಾರೆ.

ವಕ್ಫ್​ ವಿರುದ್ದ ರಾಜ್ಯದಲ್ಲಿ ದಿನದಿಂದ ದಿನಕ್ಕೆ ಪ್ರತಿಭಟನ ಕಾವು ಹೆಚ್ಚಾಗುತ್ತಿದ್ದು. ಇಂದು ಬೆಂಗಳೂರಿನ ಸ್ವತಂತ್ರ ಉದ್ಯಾನವನದಲ್ಲಿ ನಡೆದ ರಾಜ್ಯದ ಕಿಸಾನ್​ ಸಂಘಟನೆಯ ಹೋರಾಟದಲ್ಲಿ ಒಕ್ಕಲಿಗರ ಮಠದ ಚಂದ್ರಶೇಕರನಾಥ ಸ್ವಾಮೀಜಿ ವಾಗ್ದಾಳೀ ನಡೆಸಿದರು. ಪಾಕಿಸ್ತಾನದ ರೀತಿಯಲ್ಲಿ ಭಾರತದಲ್ಲೂ ಕಾನೂನು ಜಾರಿಯಾಗಬೇಕು, ಭಾರತದಲ್ಲಿ ಮುಸ್ಲಿಂರಿಗೆ ಮತ ಚಲಾಯಿಸುವ ಹಕ್ಕನ್ನು ರದ್ದುಗೊಳಿಸಬೇಕು ಮತ್ತು ವಕ್ಫ್​ ಮಂಡಳಿ ಅಕ್ರಮವಾಗಿಬ ಆಸ್ತಿಯನ್ನು ಕಬಳಿಕೆ ಮಾಡುವ ಕೆಲಸ ಮಾಡುತ್ತಿದೆ. ಇದರ ಬಗ್ಗೆ ಎಲ್ಲರು ಹೋರಾಟ ಮಾಡಬೇಕಿದೆ. ರೈತರು ಇಲ್ಲದೆ ಇದ್ದರೆ ಯಾರು ಇರೋದಕ್ಕೆ ಸಾಧ್ಯವಿಲ್ಲ. ಅದಕ್ಕೆ ನಾವು ವಕ್ಫ್​ ವಿರುದ್ದ ಹೋರಾಟ ಮಾಡಬೇಕು. ವಕ್ಫ್​ ಅನ್ನು ರದ್ದುಗೊಳಿಸಬೇಕಾದ ಅವಶ್ಯಕತೆ ಇದೆ ಎಂದು ಹೇಳಿದರು.

RELATED ARTICLES

Related Articles

TRENDING ARTICLES