Saturday, January 11, 2025

ಉಪಚುನಾವಣೆಯ ಫಲಿತಾಂಶದಿಂದ ನಮ್ಮ ಸರ್ಕಾರಕ್ಕೆ ಉತ್ಸಾಹ ಬಂದಿದೆ : ಮಧು ಬಂಗಾರಪ್ಪ

ಶಿವಮೊಗ್ಗ:  ನಗರದಲ್ಲಿ ಮಾಧ್ಯಮಕ್ಕೆ ಹೇಳಿಕೆ ನೀಡಿದ ಶಿಕ್ಷಣ ಸಚಿವ ಮಧುಬಂಗಾರಪ್ಪ ರಾಜ್ಯದ ಜನರಿಗೆ ಸಂವಿಧಾನ ದಿನಾಚರಣೆಯ ಶುಭಾಶಯ ತಿಳಿಸಿ ಮಾತನಾಡಿದರು. ರಾಜ್ಯದ ಉಪಚುನಾವಣೆಯಲ್ಲಿ ಗೆಲುವು ಸಾಧಿಸಿರುವುದು ನಮಗೆ ಹೆಚ್ಚು ಉತ್ಸಾಹ ತಂದಿದೆ. ರಾಜ್ಯದಲ್ಲಿ ಗ್ಯಾರಂಟಿಗಳು ವರ್ಕ್​ ಆಗುತ್ತಿವೆ ಎಂದು ನಮಗೆ ತಿಳಿದು ಬಂದಿದೆ ಎಂದು ಹೇಳಿದರು.

ಉಪಚುನಾವಣೆಯ ಫಲಿತಾಂಶದಿಂದ ನಮಗೆಬ ಹೆಚ್ಚು ಉತ್ಸಾಹ ಬಂದಿದ್ದು. ರಾಜ್ಯದಲ್ಲಿ ಗ್ಯಾರಂಟಿಗಳು ವರ್ಕ್ ಆಗುತ್ತಿವೆ ಎಂದು ಇದರಿಂದ ಗೊತ್ತಾಗಿದೆ. ರಾಜ್ಯದಲ್ಲಿ ಅಭಿವೃದ್ದಿ ಕೆಲಸಗಳು ಶುರುವಾಗಿದೆ. ಹಿಂದಿನ ಸರ್ಕಾರದ ಸಾಲ ಸಹ ತೀರಿಸಿ. ಕೇವಲ ಬಿಜೆಪಿಯವರ ರೀತಿ ಟೀಕೆ ಟಿಪ್ಪಣಿ ಮಾಡದೆ ಕೆಲಸದ ಬಗ್ಗೆ ಮಾತನಾಡಬೇಕು. ಜನರು ತೆರಿಗೆ ಕಟ್ಟುತ್ತಿದ್ದಾರೆ ಅದಕ್ಕೆ ನಾವು ಯಾವ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದೇವೆ ಎಂದು ಹೇಳಬೇಕು. ಕಾಂಗ್ರೆಸ್​ ಪಕ್ಷ ಬಡವರ ಪಕ್ಷವಾಗಿದ್ದು ಬಡವರ ಪರವಾಗಿ ಕೆಲಸ ಮಾಡುತ್ತಿದೆ. ನಾವು ಕೇವಲ ಓಟಿಗಾಗಿ ಕೆಲಸ ಮಾಡದೆ ಜನರಿಗಾಗಿ ಕೆಲಸ ಮಾಡುತ್ತೇವೆ’ ಎಂದು ಹೇಳಿದರು.

ಜೆಡಿಎಸ್​ ಶಾಸಕರನ್ನು ಕಾಂಗ್ರೆಸ್​ಗೆ ಕರೆತರುವ ವಿಚಾರವಾಗಿ ಮಾತನಾಡಿದ ಮಧುಬಂಗಾರಪ್ಪ!

ಜೆಡಿಎಸ್ ಶಾಸಕರನ್ನ ಕಾಂಗ್ರೆಸ್​ಗೆ ಕರೆತರುತ್ತೇನೆ ಎಂದು ಯೋಗೇಶ್ವರ್ ಹೇಳಿಕೆ ವಿಚಾರಕ್ಕೆ ಮಾತನಾಡಿದ ಮಧುಬಂಗಾರಪ್ಪ ‘ ಕೇವಲ ಜೆಡಿಎಸ್​ ಅಂತ ಯಾಕೆ ಹೇಳ್ತೀರಾ, ಜೆಡಿಎಸ್​ನ ಫ್ರೀಯಾಗಿ ಸಿಕ್ಕಿದೆಯ, ನ್ಯಾಷನಲ್​​ ಪಾರ್ಟಿಯಾಗಿದ್ದ ಜೆಡಿಎಸ್​​ ರಿಜೀನಲ್​ ಪಾರ್ಟಿಯಾಗಿದೆ ಎಂದು ಹೇಳಿದರು.

ಮುಂದುವರಿದು ಮಾತನಾಡಿದ ಸಚಿವರು ‘ಯೊಗೇಶ್ವರ್ ಚನ್ನಪಟ್ಟಣದ ಗೆಲುವಿನ ಹುಮ್ಮಸ್ಸಿನಿಂದ ಹೇಳಿದ್ದಾರೆ
ಕಾಂಗ್ರೆಸ್ ಪಕ್ಷಕ್ಕೆ ಯಾರು ಬೇಕಾದರೂ ಬರಬಹುದು, ಕೇವಲ ಶಾಸಕರು ಮಾತ್ರವಲ್ಲ ಕಾರ್ಯಕರ್ತರು ಕೂಡ ಬರಬಹುದು. ನಾನು ಕೂಡ ಬೇರೆ ಪಕ್ಷದಲ್ಲಿದ್ದೆ ಚುನಾವಣೆ ಪೂರ್ವದಲ್ಲಿ ಕಾಂಗ್ರೆಸ್​ ಸೇರ್ಪಡೆಯಾದೆ. ಈಗ ಕಾಂಗ್ರೆಸ್​ ಪಕ್ಷದ ತತ್ವ ಸಿದ್ದಾಂತದ ಮೇಲೆ ನಡೆದುಕೊಂಡು ಹೋಗುತ್ತಿದ್ದೇನೆ. ನನಗೆ ಇಲ್ಲಿ ಗೌರವ, ಸ್ಥಾನಮಾನ ಎಲ್ಲಾ ಕೊಟ್ಟಿದ್ದಾರೆ, ಕೆಟ್ಟ ರಾಜಕೀಯ ಬೆಳವಣಿಗೆಯಲ್ಲಿ ಒಳ್ಳೆಯವರು ಕಾಂಗ್ರೆಸ್​​ಗೆ ಬಂದು ಸೇರಿಕೊಳ್ಳವಬೇಕು’ ಎಂದು ಹೇಳಿದರು

RELATED ARTICLES

Related Articles

TRENDING ARTICLES