Monday, January 27, 2025

ಇಂದಿರಾ ಕ್ಯಾಂಟಿನ್​ಗೆ ಭೇಟಿ ನೀಡಿದ ಸಚಿವನಿಗೆ ಹೋಟೆಲ್​ ಊಟ ನೀಡಿದ ಸಿಬ್ಬಂದಿಗಳು

ಶಿವಮೊಗ್ಗ : ನಗರದ ಇಂದಿರಾ ಕ್ಯಾಂಟಿನ್​ಗೆ ಭೇಟಿ ನೀಡಿದ ಪೌರಾಡಳಿತ ಮತ್ತು ಹಜ್​ ಸಚಿವ ರಹೀಂ ಖಾನ್​​ಗೆ ಹೋಟೆಲ್​ ಊಟ ನೀಡಿ ಯಾಮಾರಿಸಿದ ಘಟನೆ ಶಿವಮೊಗ್ಗದ, ಬಿ.ಎಂ ರಸ್ತೆಯಲ್ಲಿನ ಇಂದಿರಾ ಕ್ಯಾಂಟಿನ್​ನಲ್ಲಿ ನಡೆದಿದೆ.

ಶಿವಮೊಗ್ಗದ ಪ್ರವಾಸದ ವೇಳೆ ಇಂದಿರಾ ಕ್ಯಾಂಟಿನ್ ಗೆ ಭೇಟಿ ನೀಡಿದ್ದ ಪೌರಾಡಳಿತ ಹಾಗೂ ಹಜ್ ಸಚಿವ ರಹಿಂ ಖಾನ್. ಇಂದಿರಾ ಕ್ಯಾಂಟಿನ್​ನಲ್ಲಿನ ವ್ಯವಸ್ಥೆಯ ಕುರಿತು ಪರಿಶೀಲನೆ ನಡೆಸಿದರು. ನಂತರ ಇಂದಿರಾ ಕ್ಯಾಂಟಿನ್​ನಲ್ಲಿ ಊಟ ಸೇವಿಸಲು ಮುಂದಾದ ಸಚಿವರಿಗೆ ಕ್ಯಾಂಟಿನ್​ ಸಿಬ್ಬಂದಿಗಳು ಹೋಟೆಲ್​ನಿಂದ ಊಟ ತಂದು ನೀಡಿದ್ದು. ಇಂದಿರಾ ಕ್ಯಾಂಟಿನ್ ಊಟದ ಹೆಸರಿನಲ್ಲಿ ಸಚಿವ ರಹೀಂ ಖಾನ್​​ ಹೋಟೆಲ್​​ ಊಟ ಸವಿದಿದ್ದಾರೆ.

RELATED ARTICLES

Related Articles

TRENDING ARTICLES