Saturday, January 11, 2025

ಮಾದಕ ವಸ್ತುಗಳ ನಿರ್ಮೂಲನಾ ಜಾಗೃತಿ ಅಭಿಯಾನದಲ್ಲಿ ಪಾಲ್ಗೊಂಡ ನಟ ಶಿವರಾಜ್​ಕುಮಾರ್​

ಹುಬ್ಬಳ್ಳಿ : ನಟ ಶಿವರಾಜ್ ಕುಮಾರ್​ರ ಮಾದಕ ವಸ್ತುಗಳ ನಿರ್ಮೂಲನಾ ಜಾಗೃತಿ ಅಭಿಯಾನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು. ಹುಬ್ಬಳ್ಳಿಯ ಬಿವಿಬಿ ಕಾಲೇಜಿನಲ್ಲಿ ಮಾದಕ ವಸ್ತುಗಳ ನಿರ್ಮೂಲನೆ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ವೇಳೆ ಸಾವಿರಾರು ಕಾಲೇಜು ವಿಧ್ಯಾರ್ಥಿಗಳು ನೆರೆದಿದ್ದರು.

ಬಿಡುವಿಲ್ಲದ ಸುತ್ತಾಟದ ನಡುವೆಯೂ ಕೂಡಾ ನಟ ಶಿವರಾಜ್​ಕುಮಾರ್​​ ಹುಬ್ಬಳ್ಳಿಯಲ್ಲಿ ಮಾದಕ ವಸ್ತುಗಳ ಬಗ್ಗೆ ನಿರ್ಮೂಲನಾ ಜಾಗೃತಿ ಮೂಡಿಸಿದ್ದು. ಹುಬ್ಬಳ್ಳಿಯ ಬಿವಿಬಿ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿದರು. ಹುಬ್ಬಳ್ಳಿ – ಧಾರವಾಡ ಪೊಲೀಸರಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಶಿವಣ್ಣ ದಂಪತಿಗಳು ವಿಧ್ಯಾರ್ಥಿಗಳಲ್ಲಿ ಮಾದಕ ವಸ್ತುಗಳ ಬಗ್ಗೆ ಜಾಗೃತಿ ಮೂಡಿಸಿದರು. ಈ ವೇಳೆ ಅನೇಕ ಗಣ್ಯರು, ವಿಧ್ಯಾರ್ಥಿಗಳು ಸೇರಿದಂತೆ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.

RELATED ARTICLES

Related Articles

TRENDING ARTICLES