Saturday, January 4, 2025

ರಜಾಕಾರರು ಮುಸ್ಲಿಂರಲ್ಲದೆ ಏನು ಬ್ರಾಹ್ಮಣರ ಎಂದು ಖರ್ಗೆ ಹೇಳಿಕೆಗೆ ತಿರುಗೇಟು ಕೊಟ್ಟ ಯತ್ನಾಳ್

ಬೀದರ್​ : ಬೀದರ್‌ನಲ್ಲಿ ವಕ್ಫ್ ಭೂಕಬಳಿಕೆ ವಿರೋಧಿ ಜನ ಜಾಗೃತಿ ಹೋರಾಟದಲ್ಲಿ ಮಾತನಾಡಿದ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​ ‘ರಜಾಕಾರರು ಮಲ್ಲಿಕಾರ್ಜುನ ಖರ್ಗೆಯ  ತಾಯಿ ಮತ್ತು ತಂಗಿಯನ್ನು  ಹೊಡೆದು ಹಾಕಿದಾರೆ. ಆದರೆ ರಜಾಕಾರರು ಮುಸ್ಲಿಂರಲ್ಲ ಎಂದು ಪ್ರಿಯಾಂಕ್ ಖರ್ಗೆ ಹೇಳುತ್ತಾರೆ.
ಹಾಗಾದರೆ ರಜಾಕಾರರು ಏನು ಲಿಂಗಾಯತರಾ? ಬ್ರಾಹ್ಮಣರಾ ? ಅಥವಾ ಯಾರು..? ಎಂದು ಪ್ರಶ್ನಿಸಿದರು.

ವಕ್ಫ್​ ವಿರೋಧಿ ಕಾರ್ಯಕ್ರಮದಲ್ಲಿ ಮಾತನಾಡಿದ ಯತ್ನಾಳ್​ ‘ ರಜಾಕಾರರಿಂದ ಅಷ್ಟೊಂದು ಘೋರ ಅನ್ಯಾಯವನ್ನು ಎದುರಿಸಿದ ಪ್ರಿಯಾಂಕ ಖರ್ಗೆ ಇನ್ನು ಮುಸ್ಲಿಂರ ಓಲೈಕೆಯಲ್ಲಿ ತೊಡಗಿದ್ದಾರೆ. ರಾಹುಲ್ ಗಾಂಧಿ ಒಬ್ಬರೇ ಹುಚ್ಚ ಇದ್ರೂ, ಈಗ ಅದರ ಸಾಲಿಗೆ ಪ್ರಿಯಾಂಕ ಖರ್ಗೆ ಕೂಡ ಸೇರಕೊಂಡಿದೆ’ ಎಂದು ಹೇಳಿದರು.

ರಾಜ್ಯಬಿಜೆಪಿ ನಾಯಕರು ‘ಯತ್ನಾಳ ಟೀಮ್‌ಗೆ ಅವ್ವ ಅಪ್ಪಾ ಇಲ್ಲಾ, ಅನಾಥವಾಗಿದೆ ಎಂದು ಹೇಳುತ್ತಾರೆ. ಆದರೆ
ಇಲ್ಲಿ ಕೂತಿರೋ ನಾವೆಲ್ಲರೂ ನಮ್ಮ ಅಪ್ಪ, ಅವ್ವಗೆ ಅಷ್ಟೇ ಅಪ್ಪ, ಅವ್ವ ಅಂತೀವಿ. ಪಕ್ಷದಲ್ಲಿರುವವರನೆಲ್ಲ ಅಪ್ಪಾಜಿ, ಅಪ್ಪಾಜಿ ಅನ್ನೂರು ನಾವಲ್ಲ. ದಿನ ಯಾರದರ ಕಾಲಿಗೆ ಬಿದ್ದು ಅಪ್ಪಾಜಿ ಅನ್ನೋರು ನಾವಲ್ಲ.
ಪ್ರಧಾನಿ ಮೋದಿ ಅವರೇ ನಾನು ಪ್ರಧಾನ ಸೇವಕ ಇದ್ದೀನಿ ನನ್ನ ಕಾಲಿಗೆ ಬೀಳಬೇಡಿ ಅಂದಿದ್ದಾರೆ.
ವಾಜಪೇಯಿ ಅವರ ವ್ಯಕ್ತಿತ್ವ ಚೆನ್ನಾಗಿತ್ತು, ಅದಕ್ಕೆ ಅವರ ಕಾಲಿಗೆ ಬೀಳತಿದ್ವಿ. ಆದರೆ ಈಗಿನ ಲಫಂಗ‌ಗಳ ಕಾಲಿಗೆ ಬೀಳೋರು ನಾವಲ್ಲಾ ಎಂದು ಪರೋಕ್ಷವಾಗಿ ಬಿಎಸ್ ಯಡಿಯೂರಪ್ಪಾ ವಿರುದ್ದ ವಾಗ್ದಾಳಿ ನಡೆಸಿದರು.

RELATED ARTICLES

Related Articles

TRENDING ARTICLES