Thursday, December 26, 2024

ನಮ್ಮ ಕುಟುಂಬಕ್ಕೆ ಸೋಲು ಗೆಲುವು ಎನ್ನುವುದು ಹೊಸತಲ್ಲ: ಅನಿತಾ​ ಕುಮಾರಸ್ವಾಮಿ

ರಾಮನಗರ : ಚನ್ನಪಟ್ಟಣದ ಉಪಚುನಾವಣೆಯ ಸೋಲಿಗೆ ಇಂದು( ನ.25) ಅನಿತಾ ಕುಮಾರಸ್ವಾಮಿ ತಮ್ಮ ಎಕ್ಷ್​ ಖಾತೆಯಲ್ಲಿ ಪತ್ರವೊಂದನ್ನು ಹಂಚಿಕೊಂಡಿದ್ದು. ‘ಚುನಾವಣೆಯಲ್ಲಿ ಸೋಲು-ಗೆಲುವು ಸಹಜ. ಒಬ್ಬರು ಗೆಲ್ಲಬೇಕಾದರೆ ಇನ್ನೊಬ್ಬರು ಸೋಲಲೇಬೇಕಾಗುತ್ತದೆ. ರಾಜಕಾರಣದಲ್ಲಿ ನನಗಾಗಲಿ,ನನ್ನ ಪತಿಗಾಗಲಿ,ನನ್ನ ಪೂಜ್ಯ ಮಾವನವರಿಗೇ ಆಗಲಿ ಗೆಲುವು-ಸೋಲು ಹೊಸದಲ್ಲ. ಎರಡನ್ನೂ ಸಮಚಿತ್ತದಿಂದ ಸ್ವೀಕರಿಸಿದ್ದೇವೆ. ಗೆದ್ದಾಗ ಬೀಗಿಲ್ಲ,ಸೋತಾಗ ಕುಗ್ಗಿಲ್ಲ.ಸೋತ ಹತಾಶೆಯಲ್ಲಿ ಅನ್ಯರನ್ನು ಹೀಗಳೆದಿಲ್ಲ’ ಎಂದು ಬರೆದುಕೊಂಡಿದ್ದಾರೆ.

ನಿಖಿಲ್​ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ ಅನಿತಾ ಕುಮಾರಸ್ವಾಮಿ !

ನಿಖಿಲ್​ ಕುರಿತು ಬರೆದು ಕೊಂಡಿರುವ ಅನಿತಾ ಕುಮಾರಸ್ವಾಮಿ ‘ ನನ್ನಮಗನ ಬಗ್ಗೆ ಹೆಚ್ಚೇನು ಹೇಳುವ ಅಗತ್ಯವಿಲ್ಲ, ಅವನು ರಾಜಕೀಯಕ್ಕೆ ಬರುವ ಮೊದಲು ಅವನು ಒಳ್ಳೆಯ ನಾಯಕ ನಟ. ಅವನಂಥ ಒಳ್ಳೆಯ ಮಗನನ್ನು ಪಡೆದಿದ್ದಕ್ಕೆ ನಾನು ಮತ್ತು ನನ್ನ ಪತಿ ಹೆಮ್ಮೆ ಪಡುತ್ತೇವೆ. ಅವನ ಯಶಸ್ಸನ್ನು ಸಂಭ್ರಮಿಸಿದ ನಾನು ಅವನ ಕಷ್ಟ ಕಾಲದಲ್ಲಿ ಕಣ್ಣೀರಿಟ್ಟಿದ್ದೇನೆ. ಆತನ ಬಗ್ಗೆ ನನಗೆ ಮಮಕಾರವಿದ್ದು. ನನ್ನ ಭಾವನೆಗಳು ಎಲ್ಲಾ ತಾಯಂದಿರಿಗು ಅರ್ಥವಾಗುತ್ತದೆ ಎನ್ನುವ ವಿಶ್ವಾಸ ನನಗಿದೆ’

‘ನನ್ನ ಮಗ ಚುನಾವಣೆಯಲ್ಲಿ ಮಾತ್ರ ಸೋತಿದ್ದು, ಅವನು ಮನುಷ್ಯನಾಗಿ ಎಂದು ಸೋತಿಲ್ಲ. ಅವನ ಮಾನವೀಯತೆ ಸಹೃದಯತೆ ಸೋತಿಲ್ಲ. ಅವನ ಹೃದಯ ಎಂತಹದು ಎಂದು ಒಬ್ಬ ತಾಯಿಯಾಗಿ ನನಗೆ ತುಂಬಾ ಚೆನ್ನಾಗಿ ಗೊತ್ತಿದೆ. ಚನ್ನಪಟ್ಟಣದ ಜನರ ವಿಶ್ವಾಸವು ಅವನ ಮೇಲಿದ್ದು ಇಂದಲ್ಲ ನಾಳೆ ಅವರ ಸೇವೆ ಮಾಡಲು ಅವಕಾಶ ಕೊಟ್ಟೆ ಕೊಡುತ್ತಾರೆ ಎಂಬ ನಂಬಿಕೆ ನನಗೆ ಇದೆ ಎಂಬ ಪತ್ರವನ್ನು ಹಂಚಿಕೊಂಡಿದ್ದಾರೆ.

RELATED ARTICLES

Related Articles

TRENDING ARTICLES