Monday, January 27, 2025

ಬುದ್ದಿವಾದ ಹೇಳಿದ ತಂದೆಯನ್ನೆ ಕೊ*ಲೆ ಮಾಡಿದ ಮಗ

ಹುಬ್ಬಳ್ಳಿ : ಕುಡಿದ ನೆಶೆಯಲ್ಲಿ ಮಗನೊಬ್ಬ ತಂದೆಯನ್ನೆ ಕೊಲೆ ಮಾಡಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆಸಿದ್ದು. 77 ವರ್ಷದ ನಾಗರಾಜ್​ ಮೃತ ದುರ್ದೈವಿ ಎಂದು ತಿಳಿದು ಬಂದಿದೆ. ಕೊಲೆ ಮಾಡಿದ ಮಗ ಅಣ್ಣಪ್ಪನ ವಿರುದ್ದ ಹೆತ್ತ ತಾಯಿಯೆ ಕೊಲೆ ಪ್ರಕರಣ ದಾಖಲಿಸಿದ್ದು. ಮಗ ಮತ್ತು ಸೊಸೆ ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ.

ಕಳೆದ ಕೆಲ ದಿನಗಳಿಂದ ತಂದೆ ನಾಗರಾಜ್ ಮತ್ತು ಮಗ ಅಣ್ಣಪ್ಪ ನಡುವೆ ಮನೆಯ ವಿಷಯಕ್ಕೆ ಗಲಾಟೆ ನಡೆಯುತ್ತಿತ್ತು. ಇದೇ ವಿಷಯಕ್ಕೆ ಕಳೆದ ನವೆಂಬರ್​ 19 ರಂದು ಕುಡಿದು ಬಂದ ಮಗ ತಂದೆಯ ಜೊತೆ ಜಗಳ ಮಾಡಿದ್ದನು. ಇಬ್ಬರ ಮಧ್ಯ ಮಾತಿಗೆ ಮಾತು ಬೆಳೆದು ಜಗಳ ವಿಕೋಪಕ್ಕೆ ಹೋಗಿದ್ದು. ಮನೆಯಲ್ಲಿದ್ದ ವಸ್ತುವಿನಿಂದ ಮಗ ತನ್ನ ವೃದ್ದ ತಂದೆಯ ಮೇಲೆ ಹಲ್ಲೆ ಮಾಡಿದ್ದಾನೆ.

ಬಲವಾಗಿ ಹೊಡೆದ ಕಾರಣ ಗಂಭೀರವಾಗಿ ಗಾಯಗೊಂಡ 77 ವರ್ಷದ ನಾಗರಾಜ್​ನನ್ನು  ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ನಿನ್ನೆ(ನ.24) ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ತಂದೆಯನ್ನು ಹೊಡೆದ ಮಗ ಪರಾರಿಯಾಗಿದ್ದು. ಮೃತ ನಾಗರಾಜ್​ ಪತ್ನಿ ಮಗ ಅಣ್ಣಪ್ಪ ಮತ್ತು ಸೊಸೆ ವಿರುದ್ದ ಪ್ರಕರಣ ದಾಖಲಿಸಿದ್ದಾರೆ. ಹಳೇ ಹುಬ್ಬಳ್ಳಿ ಪೋಲಿಸರು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

 

RELATED ARTICLES

Related Articles

TRENDING ARTICLES