Monday, November 25, 2024

ಐತಿಹಾಸಿಕ ಕಡೆಲೆಕಾಯಿ ಪರಿಷೆಗೆ ಇಂದಿನಿಂದ ಚಾಲನೆ

ಬೆಂಗಳೂರು : ನಗರದಲ್ಲಿ ನಡೆಯುವ ಐತಿಹಾಸಿಕ ಕಡಲೆ ಕಾಯಿ ಪರಿಷೆಗೆ ಇಂದು ಚಾಲನೆ ಸಿಗಲಿದ್ದು. ಇಂದು ಬೆಳಿಗ್ಗೆ 10 ಗಂಟೆಗೆ ಅಧಿಕೃತವಾಗಿ ಕಡಲೆಕಾಯಿ ಪರಿಷೆ ಆರಂಭವಾಗಲಿದೆ. ಈಗಾಗಲೇ ವ್ಯಾಪಾರಿಗಳು ಅಂಗಡಿಗಳನ್ನು ತೆರೆದಿದ್ದು. ಬಿಬಿಎಂಪಿ ಇಂದ ಅಂಗಡಿಗಳಿಗೆ ಸುಂಕ ವಿನಾಯಿತಿ ನೀಡಿದ್ದಾರೆ ಎಂದು ಮಾಹಿತಿ ತಿಳಿದು ಬಂದಿದೆ.

ಬಸವನಗುಡಿ ಬುಲ್ ಟೆಂಪಲ್ ರಸ್ತೆಯಲ್ಲಿ ಗ್ರಾಮೀಣು ಸೊಗಡಿನ ಅನಾವರಣವಾಗಿದ್ದು.ಇಂದು ಅಧಿಕೃತವಾಗಿ ಕಡಲೆಕಾಯಿ ಪರಿಷೆಗೆ ಅಧಿಕೃತವಾಗಿ ಚಾಲನೆ ಸಿಗಲಿದೆ. ಇಂದು ಬೆಳಿಗ್ಗೆ 10 ಗಂಟೆಗೆ  ಡಿಸಿಎಂ ಡಿ.ಕೆ ಶಿವಕುಮಾರ್​ ಪರಿಷೆಗೆ ಚಾಲನೆ ನೀಡಲಿದ್ದು. ಮುಜರಾಯಿ ಸಚಿವ ರಾಮಲಿಂಗ ರೆಡ್ಡಿ, ಸಂಸದ ತೇಜಸ್ವಿ ಸೂರ್ಯ, ಶಾಸಕ ರವಿ ಸುಬ್ರಹ್ಮಣ್ಯಂ ಭಾಗವಹಿಸುತ್ತಾರೆ ಎಂದು ಮಾಹಿತಿ ದೊರೆತಿದೆ.

ಈಗಾಗಲೆ ಸುತ್ತಮತ್ತಲಿನ ಜಿಲ್ಲೆಗಳಿಂದ ರೈತರು, ವ್ಯಾಪಾರಸ್ಥರು ಬಂದು ಮಳಿಗೆಗಳನ್ನು ತೆಗೆದಿದ್ದು. ನೂರಾರು ಮಳಿಗೆಯನ್ನು ತೆರೆಯಲಾಗಿದೆ ಎಂದು ಮಾಹಿತಿ ದೊರೆತಿದೆ.

ಪ್ಲಾಸ್ಟಿಕ್‌ ಮುಕ್ತ ಪರಿಷೆ ಕೈಗೊಳ್ಳಲು ಬಿಬಿಎಂಪಿಯಿಂದ  ಈ ಭಾರಿ ಪ್ಲಾಸ್ಟಿಕ್‌ ಬಳಸದಂತೆ ವ್ಯಾಪಾರಿಗಳಲ್ಲಿ ಜಾಗೃತಿ ಮೂಡಿಸಿದ್ದು. ಮುಜರಾಯಿ ಇಲಾಖೆಯಿಂದ ಪರಿಷೆಗೆ ಸಕಲ ಸಿದ್ದತೆ ಕೈಗೊಳ್ಳಲಾಗಿದೆ ಎಂದು ಮಾಹಿತಿ ದೊರೆತಿದೆ.

ವ್ಯಾಪಾರಿಗಳಿಗೆ ಸುಂಕ ವಿನಾಯಿತಿ!

ಸಾಮಾನ್ಯವಾಗಿ ಪರಿಷೆಯಲ್ಲಿ ಮಳಿಗೆಯನ್ನು ತೆರೆಯುವ ಅಂಗಡಿಗಳಿಗೆ ಸುಂಕ ವಿಧಿಸಲಾಗುತಿತ್ತು.ಈ ಹಿಂದೆ ಸುಂಕ ವಸೂಲಿ ಟೆಂಡರ್‌ ಪಡೆದವರು ಪ್ರತಿ ಮಳಿಗೆಯಿಂದ ದಿನಕ್ಕೆ 500 ರೂ. ನಿಂದ 1000 ರೂ.ವರೆಗೆ ವಸೂಲಿ ಮಾಡುತ್ತಿದ್ದರು. ಆದರೆ ಈ ಬಾರಿ ವ್ಯಾಪಾರಸ್ಥರಿಗೆ ಇದರಿಂದ ವಿನಾಯಿತಿ ನೀಡಿದ್ದು. ಸುಂ ವಸೂಲಿಯನ್ನು ಕೈಬಿಡಲಾಗಿದೆ ಎಂದು ಮಾಹಿತಿ ದೊರೆತಿದೆ.

 

RELATED ARTICLES

Related Articles

TRENDING ARTICLES