Monday, November 25, 2024

ಮಮತಾ ಬ್ಯಾನರ್ಜಿ INDIA ಕೂಟದ ನಾಯಕಿಯಾಗಲಿ : TMC ಸಂಸದ

ಕೊಲ್ಕತ್ತಾ :  ಪಶ್ಚಿಮ ಬಂಗಾಳ ವಿಧಾನಸಭಾ ಉಪಚುನಾವಣೆಯಲ್ಲಿ TMC  ಕ್ಲೀನ್ ಸ್ವೀಪ್‌ನಿಂದ ಉತ್ತೇಜಿತಗೊಂಡ ಪಕ್ಷದ ಹಿರಿಯ ನಾಯಕ ಮತ್ತು ಸಂಸದ ಕಲ್ಯಾಣ್ ಬ್ಯಾನರ್ಜಿ, ಕಾಂಗ್ರೆಸ್ ತನ್ನ ಪ್ರತಿಷ್ಠೆಯನ್ನು ಬದಿಗೊತ್ತಿ, ಮಮತಾ ಬ್ಯಾನರ್ಜಿ ಅವರನ್ನು INDIA ಕೂಟದ ನಾಯಕಿಯಾಗಿ ಗುರುತಿಸುವಂತೆ ಕೇಳಿಕೊಂಡಿದ್ದಾರೆ ಮತ್ತು ಮಹಾರಾಷ್ಟ್ರದಲ್ಲಿ ಸೋತ ಕಾಂಗ್ರೆಸ್ ಪಕ್ಷವನ್ನು ಟೀಕಿಸಿದ್ದಾರೆ.

ಇತ್ತೀಚೆಗೆ ನಡೆದ ಉಪಚುನಾವಣೆಯಲ್ಲಿ ಟಿಎಂಸಿ ಉತ್ತಮ ಸಾಧನೆ ಮಾಡಿದ್ದು, ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಗೆಲುವು ಕಂಡಿದ್ದು, ಮದಾರಿಹತ್ ಕ್ಷೇತ್ರವನ್ನು ಬಿಜೆಪಿಯಿಂದ ಕಸಿದುಕೊಂಡಿದೆ. ಇದರಿಂದ ಟಿಎಂಸಿಯಲ್ಲಿ ವಿಶ್ವಾಸ ಇಮ್ಮಡಿಗೊಂಡಿದ್ದು, ಬಿಜೆಪಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸವಾಲು ಹಾಕಲು ಏಕೀಕೃತ ಮತ್ತು ನಿರ್ಣಾಯಕ ನಾಯಕತ್ವದ ಅಗತ್ಯವನ್ನು ಕಲ್ಯಾಣ್ ಬ್ಯಾನರ್ಜಿ ಒತ್ತಿ ಹೇಳಿದ್ದಾರೆ. ಮಮತಾ ಬ್ಯಾನರ್ಜಿ ಅವರು ನಾಯಕತ್ವವನ್ನು ಸಾಬೀತುಪಡಿಸಿದ್ದು, ಅವರು ವಿಪಕ್ಷಗಳ ಮೈತ್ರಿಕೂಟದ ಅಧ್ಯಕ್ಷರಾಗಲು ಹೆಚ್ಚು ಅರ್ಹರು ಎಂದು ಪ್ರತಿಪಾದಿಸಿದರು.

ಹೂಗ್ಲಿ ಜಿಲ್ಲೆಯ ಸೆರಾಂಪುರದಲ್ಲಿ ಉಚಿತ ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡು ಮಾತನಾಡಿದ ಕಲ್ಯಾಣ್ ಬ್ಯಾನರ್ಜಿ, ಕಾಂಗ್ರೆಸ್ ಮತ್ತು ಇತರ ವಿರೋಧ ಪಕ್ಷಗಳು ಇತ್ತೀಚಿನ ಚುನಾವಣೆಯಲ್ಲಿ ತಮ್ಮ ವೈಫಲ್ಯಗಳನ್ನು ಒಪ್ಪಿಕೊಳ್ಳಬೇಕು ಮತ್ತು ವೈಯಕ್ತಿಕ ಮಹತ್ವಾಕಾಂಕ್ಷೆಗಿಂತ ಒಗ್ಗಟ್ಟಿಗೆ ಆದ್ಯತೆ ನೀಡಬೇಕು. ಅವರು ತಮ್ಮ ಪ್ರತಿಷ್ಠೆ ಬದಿಗಿಟ್ಟು ಮಮತಾ ಬ್ಯಾನರ್ಜಿ ಅವರನ್ನು INDIA ಒಕ್ಕೂಟದ ನಾಯಕಿಯಾಗಿ ಒಪ್ಪಿಕೊಳ್ಳಬೇಕು ಎಂದರು.

ಬಿಜೆಪಿಯೊಂದಿಗೆ ಹೋರಾಡುವಲ್ಲಿ ಮಮತಾ ಬ್ಯಾನರ್ಜಿ ತಮ್ಮ ಸಾಮರ್ಥ್ಯ ಸಾಬೀತುಪಡಿಸಿದ್ದಾರೆ. ಅವರು ಭಾರತದಾದ್ಯಂತ ಹೋರಾಟಗಾರರಾಗಿ ಗುರುತಿಸಿಕೊಂಡಿದ್ದಾರೆ. ಆಕೆಯ ನಾಯಕತ್ವ ಮತ್ತು ಜನಸಾಮಾನ್ಯರೊಂದಿಗೆ ಸಂಪರ್ಕ ಸಾಧಿಸುವ ಸಾಮರ್ಥ್ಯವು ಆಕೆಯನ್ನುINDIA ಕೂಟದ ಆದರ್ಶ ಮುಖವನ್ನಾಗಿ ಮಾಡುತ್ತದೆ ಎಂದು ಹೇಳೀದರು.

RELATED ARTICLES

Related Articles

TRENDING ARTICLES