Friday, December 27, 2024

ಮಗನನ್ನು ಯುದ್ದಭೂಮಿಗೆ ಕಳಿಸಿದ ರಣಹೇಡಿ ಕುಮಾರಸ್ವಾಮಿ : ಸಿ.ಪಿ ಯೋಗೇಶ್ವರ್​

ರಾಮನಗರ : ಚನ್ನಪಟ್ಟಣದ ನೂತನ ಶಾಸಕ ಸಿ.ಪಿ ಯೋಗೇಶ್ವರ್​ ಕುಮಾರಸ್ವಾಮಿ ಮೇಲೆ ವಾಗ್ದಾಳಿ ನಡೆಸಿದ್ದು. ‘ಕುರುಕ್ಷೇತ್ರದ ಬಭ್ರುವಾಹನದ ರೀತಿ ಮಗನನ್ನು ಯುದ್ದಭೂಮಿಗೆ ಕಳುಹಿಸಿದ ರಣಹೇಡಿ ಕುಮಾರಸ್ವಾಮಿ’ ಎಂದು ಹೇಳಿದರು.

ಸಿಪಿ ಯೋಗೇಶ್ವರ್​ ಕಾಂಗ್ರೆಸ್​​ನಲ್ಲೆ ಉಳಿಯುತ್ತಾರಾ ಎಂಬ ವಿಚಾರಕ್ಕೆ ಮಾತನಾಡಿದ ಸಿ.ಪಿ ಯೋಗೇಶ್ವರ್​ ‘ ನಾನು ಕಾಂಗ್ರೆಸ್ ನಲ್ಲೇ ಇರ್ತಿನಿ. ನಾನು ಎಂದಾದರು ಕಾಂಗ್ರೆಸ್ ಬಿಡ್ತೀನಿ ಅಂತಾ ಹೇಳಿದ್ದೀನಾ. ನಾನೇನು ಬಿಜೆಪಿ ಬಿಟ್ಟು ಬರಲಿಲ್ಲ ಅವರೆ ನನನ್ನು ಆಚೆ ತಳ್ಳಿದರು. ಕುಮಾರಸ್ವಾಮಿ, ಯಡಿಯೂರಪ್ಪ ಹಾಗೂ ವಿಜಯೇಂದ್ರರ ಪಿತೂರಿಯಿಂದ ನಾನು ಆಚೆ ಬಂದಿದ್ದೆನೆ. ಅನಿವಾರ್ಯ ರಾಜಕೀಯ ಪರಿಸ್ಥಿತಿ ಈ ರೀತಿಯಾಗಿ ಮಾಡಿದೆ ಎಂದು ಹೇಳಿದರು.

ನಾನು ಬಿಜೆಪಿ ಬಿಡೋದಕ್ಕೆ ಮುಂಚೆ ಕೊನೆ ದಿನದವರೆಗೆ ಕಾದು ನೋಡಿದ್ದೇನೆ. ನಂತರ ನಿರ್ಣಯ ತೆಗೆದುಕೊಂಡಿದ್ದೇನೆ. ನಾನು ಕಟ್ಟಿದ ಮನೆಯಿಂದಲೆ ನನ್ನನ್ನು ಹೊರಹಾಕಿದ್ದಾರೆ. ಈಗ ನಾನು ಪಕ್ಕಾ ಕಾಂಗ್ರೆಸಿಗ, ನಾನು ಕಾಂಗ್ರೆಸ್​ ಪಕ್ಷ ಬಿಡೋದಿಲ್ಲ. ಜೆಡಿಎಸ್​ನವರು ಸೋತು ಸುಣ್ಣವಾಗಿದ್ದಾರೆ. ಕುಮಾರಸ್ವಾಮಿ ಮಗನನ್ನು ರಣಭೂಮಿಗೆ ಕಳುಹಿಸಿದ ರಣಹೇಡಿ. ಕೇಂದ್ರ ಮಂತ್ರಿಯಾಗಿ ಮಗನನ್ನು ಗೆಲ್ಲಿಸಿಕೊಂಡು ಬರಲು ಸಾಧ್ಯವಾಗದ ಇವರು ಮಂತ್ರಿಯಾಗಿ ಏನು ಪ್ರಯೋಜನ, ಎಂದು ಹೇಳಿದರು.

RELATED ARTICLES

Related Articles

TRENDING ARTICLES