ಚಿಕ್ಕೋಡಿ : ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ ಸುದ್ದಿಗೋಷ್ಟಿ ನಡೆಸಿ ಹೇಳಿಕೆ ನೀಡಿದ್ದು. ಆರ್ಟಿಕಲ್ 370 ರೀತಿಯಲ್ಲಿ ವಕ್ಫ್ ಬೋರ್ಡ್ ಅನ್ನು ತೆಗೆಯುತ್ತೇವೆ. ಪ್ರತಿಯೊಂದನ್ನು ಮಾಡುವ ಸಂದರ್ಭದಲ್ಲಿ ಹಿಂದೆ ಮುಂದೆ ಆಗುತ್ತದೆ. ಈಗಾಗಲೇ ವರದು ಪಡೆಯುವ ಕೆಲಸ ಮಾಡುತ್ತಿದ್ದು. ವರದಿ ಪಡೆದ ಬಳಿಕ ವಕ್ಫ್ ಕಾನೂನನ್ನು ವಾಪಾಸ್ ಪಡೆದೆ ಪಡೆಯುತ್ತೇವೆ, ಇದರಲ್ಲಿ ಎರಡು ಮಾತಿಲ್ಲ. ಹಾಗೆಯೇ ಕೇಂದ್ರದಲ್ಲಿ ಕಾಂಗ್ರೆಸ್ ಯಾವತ್ತು ಅಧಿಕಾರಕ್ಕೆ ಬರಲ್ಲಾ’ ಎಂದು ಹೇಳಿದರು.
ರಾಜ್ಯದ ಉಪಚುನಾವಣೆ ಬಗ್ಗೆ ಛಲವಾದಿ ಮಾತು !
ರಾಜ್ಯದ ಉಪ ಚುನಾವಣೆಯಲ್ಲಿ ಬೆಜೆಪಿ ಸೋತಿರುವ ವಿಚಾರವಾಗಿ ಮಾತನಾಡಿದ ವಿಧಾನ ಪರಿಷತ್ ವಿಪಕ್ಷ ನಾಯಕ ‘ಸೋಲಿನ ಕುರಿತು ನಾಣು ಚರ್ಚೆ ಮಾಡುತ್ತೇವೆ, ಬಿಜೆಪಿ ನಾಯಕರ ನಡುವೆ ಹೊಂದಾಣಿಕೆ ಆಗಿದೆಯಾ ಎಂಬ ವಿಚಾರವಾಗಿ ನಾನು ಮಾತನಾಡಲ್ಲ, ಆದರೆ ನಮ್ಮಲ್ಲಿ ವಂಶ ಪರಂಪರೆ, ಕುಟುಂಬ ರಾಜಕಾರಣ ಎಂಬುದೆಲ್ಲ ನಡೆಯಲ್ಲಾ ಎಂದು ಹೇಳಿದರು.
ಮುಂದುವರಿದು ಮಾತನಾಡಿದ ನಾರಾಯಣ ಸ್ವಾಮಿ ‘ಬಿಜೆಪಿಯನ್ನ ಅಧ್ಯಕ್ಷರು ನಡೆಸುತ್ತಿದ್ದಾರೆ, ನಮ್ಮಲ್ಲಿ ಸೀನಿಯರ್, ಜೂನಿಯರ್ ಎಂಬುದಿಲ್ಲ, ಯತ್ನಾಳ್ ಅವರೇ ಬಂದು ಕೂತರು ಅವರಿಗೆ ನಾವು ಗೌರವ ಕೊಡುತ್ತೇವೆ. ಸದ್ಯ ವಿಜಯೇಂದ್ರ ಇದ್ದಾರೆ ಅವರೇ ನಮ್ಮ ಅಧ್ಯಕ್ಷರು. ಸಣ್ಣಪುಟ್ಟ ಸಮಸ್ಯೆಗಳಿದ್ದರೆ ಬಗೆ ಹರಿಸಿಕೊಳ್ಳಬೇಕು. ಹೈಕಮಾಂಡ್ ಸಾಕಷ್ಟು ಸ್ಟ್ರಾಂಗ್ ಇದೆ, ಕ್ರಮ ಕೈಗೊಳ್ಳೊದು ತಡ ಆಗಿದೆ ಸ್ವಲ್ಪ ತಾಳ್ಮೆಯಿಂದ ಹೋಗುತ್ತಾರೆ’ ಎಂದು ಹೇಳಿದರು.