ರಾಮನಗರ : ಕನಕಪುರದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಡಿಸಿಎಂ ಡಿ.ಕೆ ಶಿವಕುಮಾರ್ ಜಿ.ಟಿ ದೇವೇಗೌಡ ಕಾಂಗ್ರೆಸ್ ಸೇರುವ ವಿಚಾರವಾಗಿ ಮಾತನಾಡಿದರು. ‘ಕೇವಲ ಜಿಟಿ.ದೇವೇಗೌಡ ಮಾತ್ರವಲ್ಲದೆ ಅನೇಕ ಬಿಜೆಪಿ ನಾಯಕರು ಕಾಂಗ್ರೆಸ್ ಸೇರ್ಪಡೆಯಾಗಲು ಬಯಸಿದ್ದಾರೆ. ಬಿಜೆಪಿಯವರ ಸಹಾಯವಿಲ್ಲದೆ ನಮ್ಮ ಅಭ್ಯರ್ಥಿ ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವಾಗುತಿತ್ತಾ. ಅಶ್ವತ್ ನಾರಾಯಣ್ ಕೂಡ ಯೋಗೇಶ್ವರ್ ಗೆಲ್ತಾರೆ ಎಂದು ಹೇಳಿದ್ದರು. ಅವರೇನು ದಡ್ಡರಲ್ಲಾ ಅವರು ಜಿಲ್ಲಾ ಮಂತ್ರಿಯಾಗಿದ್ದವರು. ಬಿಜೆಪಿ ಕಾರ್ಯಕರ್ತರೆಲ್ಲಾ ಯಾರಿಗೆ ವೋಟ್ ಹಾಕಿದ್ದಾರೆ ಎಂದು ನಾನು ಬಿಚ್ಚಿ ಮಾತನಾಡಲು ಹೋಗಲ್ಲ. ಆದರೆ ಕೊಟ್ಟಿರುವ ಏಟು ಹೇಗೆ ಬಿದ್ದಿದೆ ಎಂದು ನೋಡಿಕೊಳ್ಳಲಿ’ ಎಂದು ಹೇಳಿದರು.
ಮುಂದುವರಿದು ಮಾತನಾಡಿದ ಡಿಕೆಶಿ ‘ನಿಖಿಲ್ ಸೋಲಿಗೆ ಹಣಬಲ ಷಡ್ಯಂತ್ರ ಕಾರಣ ಎಂದು ಜೆಡಿಎಸ್ ನಾಯಕರ ಹೇಳಿಕೆ ನೀಡಿದ್ದಾರೆ. ಹಾಗಾದರೆ ಡಿ.ಕೆ ಸುರೇಶ್ ಸೋತಾಗ ಏನಾಗಿತ್ತು. ಜೆಡಿಎಸ್ ಕುಟುಂಬದ ಮಂಜುನಾಥ್ರನ್ನು ಬಿಜೆಪಿಯಿಂದ ನಿಲ್ಲಿಸಿದರಲ್ಲ ಅದನ್ನು ಏನೆಂದು ಕರೆಯುತ್ತೀರಿ ಎಂದು ಕೇಳಿದರು.
ಡಿಕೆ ಸಿಎಂ ಆಗಬೇಕು ಎಂಬ ವಿಚಾರವಾಗಿ ಉಪಮುಖ್ಯಮಂತ್ರಿ ಮಾತು !
ಡಿ ಕೆ ಶಿವಕುಮಾರ್ ಮುಂದಿನ ಸಿಎಂ ಎಂಬ ಕಾರ್ಯಕರ್ತರ ಕೋರಿಕೆ ವಿಚಾರವಾಗಿ ಮಾತನಾಡಿದ ಡಿಸಿಎಂ ‘ಅವ್ರು ಮುಖ್ಯಮಂತ್ರಿ ಆಗಬೇಕು ಇವ್ರು ಮುಖ್ಯಮಂತ್ರಿ ಆಗಬೇಕು ಎಂಬುದ ಗೌಣ. ಜನ ನಮ್ಮ ಮೇಲೆ ವಿಶ್ವಾಸ ಇಟ್ಟು ಮತಹಾಕಿದ್ದಾರೆ. ಆದರೆ ಕುಮಾರಸ್ವಾಮಿ ಮೇಲೆ ಜನ ನಂಬಿಕೆ ಹೊಂದಿಲ್ಲ ಅದಕ್ಕೆ ಅವರಿಗೆ ವೋಟ್ ಹಾಕಿಲ್ಲ ಎಂದು ಹೇಳಿದರು.