Wednesday, January 1, 2025

ಇವಿಎಂ ಮೇಲೆ ಮತ್ತೆ ಅನುಮಾನ ವ್ಯಕ್ತ ಪಡಿಸಿದ ಗೃಹ ಸಚಿವ ಪರಮೇಶ್ವರ್​​

ಬೆಂಗಳೂರು : ಮಹರಾಷ್ಟ್ರ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದ್ದು. ಎಲ್ಲಾ ಸಮೀಕ್ಷೆಗಳನ್ನು ತಲೆಕೆಳಗೆ ಮಾಡಿ ಬಾರೀ ಬಹುಮತದೊಂದಿದೆ ಅಧಿಕಾರಕ್ಕೆ ಬಂದಿದೆ. ಇದರ ಬೆನ್ನಲೆ ಕರ್ನಾಟಕದಲ್ಲಿ ಗೃಹ ಸಚಿವ ಪರಮೇಶ್ವರ್​ ಎವಿಎಂ ಯಂತ್ರದ ಮೇಲೆ ಅನುಮಾನ ವ್ಯಕ್ತಪಡಿಸಿದ್ದು. ಅಮೇರಿಕಾದಲ್ಲೆ ಬ್ಯಾಲೆಟ್​ ಪೇಪರ್​ ಬಳಸಿ ಚುನಾವಣೆ ಮಾಡುತ್ತಾರೆ. ಅದೇ ರೀತಿ ನಾವು ಕೂಡ ಮತ್ತೆ ಬ್ಯಾಲೆಟ್​ ಪೇಪರ್​ ಬಳಸಿ ಚುನಾವಣೆ ಮಾಡಬೇಕು ಎಂದು ಹೇಳಿದ್ದಾರೆ.

ಮಹರಾಷ್ಟ್ರದ ಚುನಾವಣೆಯ ಫಲಿತಾಂಶದ ಬಗ್ಗೆ ಮಹರಾಷ್ಟ್ರದಲ್ಲಿ ಕಾಂಗ್ರೆಸ್​ ಸೇರಿದಂತೆ ಅನೇಕ ಪಕ್ಷದ ನಾಯಕರು ಇವಿಎಂ ಮೇಲೆ ಅನಮಾನ ವ್ಯಕ್ತ ಪಡಿಸಿದ್ದು. ಕರ್ನಾಟಕದ ಕಾರ್ಮಿಕ ಸಚಿವ ಸಂತೋಶ್​ ಲಾಡ್​ ಕೂಡ ಇದರ ಬಗ್ಗೆ ಅನುಮಾನ  ವ್ಯಕ್ತಪಡಿಸಿದ್ದರು. ಇದರ ಬೆನ್ನಲೆ ಇಂದು ಕರ್ನಾಟಕಕದ ಗೃಹ ಸಚಿವ ಪರಮೇಶ್ವರ್​ ಇವಿಎಂ ಮಿಷಿನ್​ ಮೇಲೆ ಅನುಮಾನ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಗೃಹ ಸಚಿವ ‘ ಕಳೆದ 15 ವರ್ಷಗಳಿಂದ ‌ನಾವು ಹೇಳ್ತಿದೇವೆ ಇವಿಎಂ‌ ಬೇಡ ಅಂತಾ.ಅಮೆರಿಕಾದಲ್ಲೂ ಇವಿಎಂ ಬೇಡ ಅಂತಾರೆ. ನಮ್ಮಲ್ಲಿ ‌ಎಐಸಿಸಿ ಕೂಡ‌ ಒಂದು ಕಮಿಟಿ ಮಾಡಿದ್ದು ಅಲ್ಲಿಯು ಇವಿಎಂ ಇಲ್ಲದೆ ಚುನಾವಣೆ ನಡೆಸಬೇಕು ಎಂದು ತೀರ್ಮಾನಿಸಿದ್ದಾರೆ’ ಎಂದು ಹೇಳಿದರು.

ಮುಂದುವರಿದು ಮಾತನಾಡಿದ ಗೃಹಸಚಿವರು ‘ಇವುಎಂ ತೆಗೆದು ಬ್ಯಾಲೆಟ್‌ಪೇಪರ್​ನಲ್ಲಿ ಚುನಾವಣೆ  ಮಾಡೋಕೆ ಏನ್ ಆಗುತ್ತದೆ? ಮೊದಲೆಲ್ಲಾ ಬ್ಯಾಲೆಟ್​ನಲ್ಲಿ ಚುನಾವಣೆ ಮಾಡಿಲ್ವಾ? ನನ್ನ ಅನಿಸಿಕೆ ಇವಿಎಂ ಬದಲು ಬ್ಯಾಲೆಟ್ ಪೇಪರ್ ಹೋಗೋದು ಸೂಕ್ತ. ಆದರೆ  ಸಿಸ್ಟಮ್ ಅವರ‌ ಕೈನಲ್ಲಿದೆ‌‌. ಏನ್ ಮಾಡೋದು
ಅವರಲ್ಲೂ ಸಹ‌ ಅನೇಕರು ಇವಿಎಂ‌ ವಿರೋಧಿಸಿದ್ದಾರೆ‌. ಮಹರಾಷ್ಟ್ರದಲ್ಲಿ ಎಲ್ಲವನ್ನೂ‌ ಹ್ಯಾಕ್ ಮಾಡಿದಾರೆ ಅಂತಾಲ್ಲ.‌ ಆದರೆ ಕೆಲವೊಂದ್ ಕಡೆ ಹ್ಯಾಕ್​  ಆಗಿರಬಹುದು  ಎಂದು ಹೇಳಿದರು.

RELATED ARTICLES

Related Articles

TRENDING ARTICLES