ರಾಮನಗರ: ಇಡೀ ರಾಜ್ಯದ ಕುತೂಹಲದ ಕೇಂದ್ರವಾಗಿದ್ದ ಚನ್ನಪಟ್ಟಣದ ಫಲಿತಾಂಶ ನೆನ್ನೆ ಹೊರಬಂದಿದ್ದು. ಎಲ್ಲರ ನಿರೀಕ್ಷೆ ಮೀರಿ ಮಾಜಿ ಶಾಸಕ ಸಿ.ಪಿ ಯೋಗೇಶ್ವರ್ ಭಾರೀ ಬಹುಮತದೊಂದಿಗೆ ಗೆಲುವು ಸಾಧಿಸಿದ್ದಾರೆ. ಇದರೊಂದಿಗೆ ಮೈತ್ರಿ ಕೂಟಕ್ಕೆ ಅತಿ ದೊಡ್ಡ ಶಾಕ್ ನೀಡಿದ್ದಾರೆ.
ರಾಜ್ಯ ಉಪಚುನಾವಣೆ ಫಲಿತಾಂಶ ಹೊರಬಂದಿದ್ದು. ಮೂರಕ್ಕೆ ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷ ಗೆಲುವಿನ ನಗೆ ಬೀರಿದೆ.ಚನ್ನಪಟ್ಟಣದಲ್ಲಿ ಯೋಗೇಶ್ವರ್ ಗೆ ಪ್ರಚಂಡ ಗೆಲುವು ಸಾಧಿಸಿದ್ದು. ಮಾಜಿ ಸಿಎಂ ಮಗನನ್ನೇ ಮಣಿಸಿದ್ದಾರೆ. ಇದರ ಮಧ್ಯೆ ಸಿ.ಪಿ ಯೋಗೇಶ್ವರ್ ಗೆಲ್ಲಲು ಕಾರಣವಾದ ಅಂಶಗಳು ಯಾವುವೆಂದು ಇದೀಗ ಚರ್ಚೆ ಮಾಡಲಾಗುತ್ತಿದ್ದು. ಯೋಗೇಶ್ವರ್ ಗೆಲುವಿಗೆ ಅನೇಕ ಕಾರಣಗಳನ್ನು ನೀಡುತ್ತಿದ್ದಾರೆ.
ಯೋಗೇಶ್ವರ್ ಗೆಲುವಿಗೆ ಮುಖ್ಯ ಕಾರಣಗಳು ಯಾವುವೆಂದು ನೋಡುವುದಾರೆ
- ಕ್ಷೇತ್ರದಲ್ಲಿ ಸ್ವಂತ ಪ್ರಭಾವ ಉಳಿಸಿಕೊಂಡಿರುವ ಶಾಸಕನಾಗಿದ್ದು, ಸ್ವಂತಂತ್ರವಾಗಿ ಸ್ಪರ್ಧಿಸಿದರು ಗೆಲ್ಲುವ ಸಾಮರ್ಥ್ಯ ಯೋಗೇಶ್ವರ್ಗೆ ಇದೆ ಎಂದು ಹೇಳುತ್ತಾರೆ.
- ಎರಡು ಬಾರಿ ಶಾಸಕರಾಗಿದ್ದ ಸಿಪಿ ಯೋಗೇಶ್ವರ್ ಕ್ಷೇತ್ರದ ಅಭಿವೃದ್ದಿಗೆ ಕೊಡುಗೆ ನೀಡಿದ್ದು. ನೀರಾವರಿ ಸೇರಿದಂತೆ ಅನೇಕ ಕೆಲಸಮಾಡಿದ್ದಾರೆ.
- ಎರಡು ಬಾರಿ ಕುಮಾರಸ್ವಾಮಿ ವಿರುದ್ದ ಸ್ಪರ್ಧಿಸಿ ಸೋತಿರುವ ಅನುಕಂಪ ಕೈಹಿಡಿದಿದೆ ಎಂದು ಹೇಳಬಹುದಾಗಿದೆ.
- ಕುಮಾರಸ್ವಾಮಿ ನಂತರ ಕ್ಷೇತ್ರದಲ್ಲಿನ ಒಕ್ಕಲಿಗ ನಾಯಕ ಎಂದು ಗುರುತಿಸಿಕೊಂಡಿದ್ದಾರೆ.
- ಕುಮಾರಸ್ವಾಮಿ ವಿರುದ್ಧ ಜಮೀರ್ ನೀಡಿದ ಹೇಳಿಕೆ ಮುಸ್ಲಿಂ ಮತಗಳ ಕ್ರೋಡಿಕರಣಕ್ಕೆ ಸಹಾಯವಾಗಿದ್ದು. ಸಾಲಿಡ್ ಆಗಿ ಮುಸ್ಲಿಂಮರು ಯೋಗೇಶ್ವರ್ ಕೈ ಹಿಡಿದ್ದಿದ್ದಾರೆ ಎಂದು ಹೇಳಲಾಗುತ್ತದೆ
- ಸಿಪಿ ಯೋಗೇಶ್ವರ್ರೊಂದಿಗೆ ಡಿಕೆ ಬ್ರದರ್ಸ್ ರೂಪಿಸಿದ ರಣತಂತ್ರ ಸಫಲವಾಗಿದ್ದು. ಮೂವರ ನಾಯಕತ್ವಕ್ಕೆ ಮತದಾರ ಜೈ ಎಂದಿದ್ದಾರೆ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ.
- ಚನ್ನಪಟ್ಟಣವನ್ನು ಪ್ರತಿಷ್ಟೆಯಾಗಿ ತೆಗೆದುಕೊಂಡ ಡಿಕೆ ಬ್ರದರ್ಸ. ಹೇಗಾದರು ಮಾಡಿ ಕ್ಷೇತ್ರವನ್ನು ಗೆಲ್ಲಲೆ ಬೇಕಂಬ ಹಠ.
- ಪದೇ ಪದೇ ಚನ್ನಪಟ್ಟಣಕ್ಕೆ ಡಿಕೆಶಿ ಭೇಟಿ, 500 ಕೋಟಿ ಮೊತ್ತದ ಕಾರ್ಯಕ್ರಮಗಳ ಘೋಷಣೆ, ಉದ್ಯೋಗ ಮೇಳದ ಎಫೆಕ್ಟ್.
- ಜೆಡಿಎಸ್ನ ಕೈ ಬಿಟ್ಟ ಒಕ್ಕಲಿಗ ಮತದಾರರು. ಕಾಂಗ್ರೆಸ್ ಕೈ ಹಿಡಿದ ಕುರುಬ, ತಿಗಳ, ಅರಸು ಮತಬ್ಯಾಂಕ್.
- ಕಾಂಗ್ರೆಸ್ ಗ್ಯಾರಂಟಿ ವರ್ಕ್ ಆಗಿದೆ ಎಂದು ಕೂಡ ಹೇಳಲಾಗಿದ್ದು. ಮಹಿಳೆಯರ ಮನ ಗೆಲ್ಲುವಲ್ಲಿ ಕಾಂಗ್ರೆಸ್ ಸಫಲವಾಗಿದೆ.
- ಕ್ಷೇತ್ರದಲ್ಲಿ ಕುಮಾರಸ್ವಾಮಿ ಅಭಿವೃದ್ದಿ ಮಾಡಿಲ್ಲ ಎಂಬ ಭಾವನೆ ಮತ್ತು ಜೆಡಿಎಸ್ ಜೊತೆಗೆ ಮೈತ್ರಿಗೆ ಒಪ್ಪದ ಬಿಜೆಪಿ ನಾಯಕರು.
- ಕಾಂಗ್ರೆಸ್ ಗೆಲ್ಲಿಸಿದರೆ ಡಿಕೆ ಶಿವಕುಮಾರ ಮುಖ್ಯಮಂತ್ರಿಯಾಗುತ್ತಾರೆ ಎಂದು ಮತದಾರ ಮತ ಚಲಾಯಿಸಿದ್ದಾರೆ ಎಂದು ಹೇಳಲಾಗುತ್ತಿದೆ.
- ಉಪಚುನಾವಣೆಗಳಲ್ಲಿ ಸಹಜವಾಗಿ ಅಧಿಕಾದಲ್ಲಿರುವ ಪಕ್ಷದತ್ತ ಮತದಾರರ ಒಲವು ಹೋಗುವ ಮನಸ್ಥಿತಿ.
ಈ ಎಲ್ಲಾ ಕಾರಣಗಳಿಂದ ಸಿಪಿ ಯೋಗೇಶ್ವರ್ ಗೆಲುವು ಸಾಧಿಸಿದ್ದಾರೆ ಎಂದು ಹೇಳಲಾಗುತ್ತಿದೆ.