Friday, December 27, 2024

ಚನ್ನಪಟ್ಟಣದಲ್ಲಿ ಗೆದ್ದು ಬೀಗಿದ ಯೋಗೇಶ್ವರ್​​ : ಕುಮಾರಸ್ವಾಮಿಗೆ ಮುಖಭಂಗ

ರಾಮನಗರ : ಇಡೀ ರಾಜ್ಯದ ಕುತೂಹಲದ ಕೇಂದ್ರವಾಗಿದ್ದ ಚನ್ನಪಟ್ಟಣದ ಚುನಾವಣಾ ಫಲಿತಾಂಶ ಹೊರಬಂದಿದ್ದು. ಕಾಂಗ್ರೆಸ್​​ ಅಭ್ಯರ್ಥಿ ಸಿ.ಪಿ ಯೋಗೇಶ್ವರ್​ ಗೆದ್ದು ಬೀಗಿದ್ದಾರೆ. ಸುಮಾರು 29 ಸಾವಿರ ಮತಗಳ ಅಂತರದಲ್ಲಿ ನಿಖಿಲ್​ ವಿರುದ್ದ ಸಿಪಿವೈ ಗೆಲುವು ಸಾಧಿಸಿದ್ದಾರೆ.

ಚನ್ನಪಟ್ಟಣದ ಕದನ ಕಣ ಈ ಭಾರೀ ಇಡೀ ರಾಜ್ಯದ ಕುತೂಹಲದ ಕೇಂದ್ರವಾಗಿತ್ತು. ಡಿಕೆ ಶಿವಕುಮಾರ್​ ಮತ್ತು ಡಿ.ಕೆ ಸುರೇಶ್​ ಶತಾಯ ಗತಾಯ ಹೇಗಾದರು ಮಾಡಿ ಕ್ಷೇತ್ರವನ್ನು ವಶಪಡಿಸಿಕೊಳ್ಳಬೇಕು ಎಂದು ಹಠ ತೊಟ್ಟಿದ್ದರು. ಅವರ ಪ್ರಯತ್ನಕ್ಕೆ ಫಲ ಸಿಕಿದ್ದು, ಕೊನೆಗು ಕಾಂಗ್ರೆಸ್​ ಅಭ್ಯರ್ಥಿ ಸಿಪಿ ಯೋಗೇಶ್ವರ್​ ಗೆಲುವು ಸಾಧಿಸಿದ್ದಾರೆ.

ಬಿಜೆಪಿ ತ್ಯಜಿಸಿ ಕಾಂಗ್ರೆಸ್​ ಸೇರ್ಪಡೆಯಾಗಿದ್ದ ಸಿಪಿವೈಗೆ ಈ ಬಾರೀ ದೇವೆಗೌಡರ ಕುಟುಂಬದ ಕೊನೆಯ ಕುಡಿ ನಿಖಿಲ್​ ಎದುರಾಳಿಯಾಗಿದ್ದರು. ಇವರಿಬ್ಬರ ನಡುವೆ ನೇರ ಹಣಾಹಣಿಯಿದ್ದರು ಸಹ. ಡಿಕೆ ಶಿವಕುಮಾರ್​ ಮತ್ತು ಕುಮಾರಸ್ವಾಮಿಗೆ ಈ ಚುನಾವಣೆ ಪ್ರತಿಷ್ಟೆಯ ಕಣವಾಗಿತ್ತು. ಇದೀಗ ಕಾಂಗ್ರೆಸ್​ ಅಭ್ಯರ್ಥಿ ಸಿಪಿವೈ ಗೆಲ್ಲುವ ಮೂಲಕ ಲೋಕಸಭೆ ಚುನಾವಣೆಯ ಸೋಲಿಗೆ ಡಿ.ಕೆ ಬ್ರದರ್ಸ್​ ಪ್ರತಿಕಾರ ತೀರಿಸಿಕೊಂಡತೆ ಹಾಗಿದೆ.

RELATED ARTICLES

Related Articles

TRENDING ARTICLES